
ಸಂಜೆವಾಣಿ ವಾರ್ತೆ
ನಂಜನಗೂಡು.ಆ.10:- ಕಳೆದ 74 ವರ್ಷಗಳಿಂದಲೂ ಎ ಶ್ರೇಣಿಯಲ್ಲಿ ಮುಂದುವರೆದಿರುವ ನಂಜನಗೂಡು ಉಪಾಧ್ಯಾಯರ ಸಹಕಾರ ಸಂಘ. ಪ್ರಾರಂಭದಲ್ಲಿ 1952 ರಲ್ಲಿ ಒಂದು ರೂಪಾಯಿ ಶೇರು ಠೇವಣಿಗೆ ಪ್ರಾರಂಭವಾದ ಹಾಗೂ 50 ಸದಸ್ಯರನ್ನು ಒಳಗೊಂಡ ಸಹಕಾರ ಸಂಘ ಆಗಿನಿಂದಲೂ ಸಹ ಎ ಶ್ರೇಣಿಯಲ್ಲಿ ಮುಂದುವರೆದಿದೆ. ಈಗ 970 ಸದಸ್ಯರನ್ನು ಹಾಗೂ 65 ಪ್ರೌಢಶಾಲಾ ಶಿಕ್ಷಕರ ಸದಸ್ಯರನ್ನು ಒಳಗೊಂಡಿದೆ. 5,000ಗಳಿಗೆ ಸಾಲ ನೀಡಲು ಪ್ರಾರಂಭವಾದ ಸಹಕಾರ ಸಂಘ ಈಗ ಪ್ರತಿ ಸದಸ್ಯರಿಗೆ 8 ಲಕ್ಷ ರೂಗಳನ್ನು ನೀಡುವ ಸಹಕಾರ ಸಂಘವಾಗಿದೆ.
ಶನಿವಾರ ನಡೆದ ಶ್ರಾವಣ ಕಲ್ಯಾಣ ಮಂಟಪದಲ್ಲಿ 73ನೇ ಸರ್ವ ಸದಸ್ಯರ ಮಹಾಸಭೆಯನ್ನ ಉದ್ಘಾಟನೆ ಮಾಡಿದ ಸಹಕಾರ ಸಂಘದ ಅಧ್ಯಕ್ಷರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಮಹೇಶ್ ಜ್ಯೋತಿ ಬೆಳಗಿಸಿ ಮಾತನಾಡುತ್ತಾ ಇಡೀ ರಾಜ್ಯದಲ್ಲಿ ನಮ್ಮ ನಂಜನಗೂಡು ತಾಲೂಕು ಸಹಕಾರ ಸಂಘ ತಮ್ಮೆಲ್ಲರ ಸಹಕಾರದಿಂದ ಎ ಶ್ರೇಣಿಯಲ್ಲಿ ಸಾಗುತ್ತಿರುವುದು ಸಂತಸ ತಂದಿದೆ ಹಾಗೂ ಶಿಕ್ಷಕರಿಗೆ ಅನುಕೂಲವಾಗುವ ಕಡಿಮೆ ಬಡ್ಡಿ ದರದಲ್ಲಿ ಡಿವಿಡೆಂಟ್ ಹಾಗೂ ಡೆಪಾಸಿಟ್. ಆರ್ ಡಿ. ನೀಡುತ್ತಿರುವುದರಿಂದ ಈ ಸಹಕಾರ ಸಂಘವು ಉನ್ನತ ಮಟ್ಟಕ್ಕೆ ಹೋಗಲು ಕಾರಣವಾಗಿದೆ ಅದಕ್ಕಾಗಿ ನಮ್ಮ ತಾಲೂಕಿನ ಸಹಕಾರ ಸಂಘದ ಎಲ್ಲಾ ಪದಾಧಿಕಾರಿಗಳ ಪರವಾಗಿ ತಮಗೆ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಇದೇ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಹ ಎಸ್‍ಎಲ್‍ಸಿಯಲ್ಲಿ ಉನ್ನತ ಶ್ರೇಣಿ ಪಡೆದ ಪ್ರಣತಿ ಗುಪ್ತ ಶ್ರೀ ಸಾನ್ವಿಕ ಮೂವರು ಸಿಬಿಎಸ್‍ಸಿಯಲ್ಲಿ ಮಾದೇಶ ಪ್ರಿಯಾ ವಾಣಿ ದುಶಾಂತ್. ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿಯಲ್ಲಿ ವಿಜ್ಞಾನ ಪವನ್ ರಕ್ಷಿತ್ ಗೌಡ ರಘುನಂದನ್ ಹಾಗೂ ಕಲಾ ವಾಣಿಜ್ಯ ಹರ್ಷಿತಾ ರೈನ ರೆನಾಲ್ಡ ವಿಭಾಗದ ತಲಾ ಮೂರು ವಿದ್ಯಾರ್ಥಿಗಳಿಗೆ ಶಾಲು ಹಾರ ನೆನಪಿನ ಕಾಣಿಕೆ . ನಗದು ಬಹುಮಾನ ನೀಡಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಕಳೆದ ಒಂದು ವರ್ಷಗಳಿಂದ ಸದಸ್ಯರಾಗಿ ಕಾರ್ಯ ನಿರ್ವಹಿಸಿ ನಮ್ಮ ಸಹಕಾರ ಸಂಘದಲ್ಲಿ ಶಿಕ್ಷಕರಾಗಿ ನಿವೃತ್ತರಾದ 40 ಶಿಕ್ಷಕರಿಗೆ ಶಾಲು ಹಾರ ಫಲ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಹಕಾರ ಸಂಘವು ಕಳೆದ ಸಾಲಿನಲ್ಲಿ ವಾರ್ಷಿಕವಾಗಿ 75 ಲಕ್ಷ ರೂಗಳ ಆದಾಯ ಗಳಿಸಿದರೆ ಈ ಬಾರಿ 86 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಿದೆ ಎಂದು ತಿಳಿಸಿದರು ಇದಕ್ಕೆ ರಾಜ್ಯ ಹಾಗೂ ಜಿಲ್ಲಾ ಸಹಕಾರ ಸಂಘದ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿರುವುದು ಸಂತಸ ತಂದಿದೆ ಎಂದು ಅಧ್ಯಕ್ಷರು ನುಡಿದರು ಈ ಬಾರಿ ಸಹಕಾರ ಸಂಘದ ಸದಸ್ಯರುಗಳಿಗೆ ಸಾಲ ನೀಡುವ ಬಡ್ಡಿ ದರದಲ್ಲಿ ಒಂದು ರೂಪಾಯಿಗಳನ್ನು ಕಡಿಮೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಉಪಾಧ್ಯಾಯರ ಸಹಕಾರ ಸಂಘದ ಉಪಾಧ್ಯಕ್ಷ ಸತೀಶ ದಳವಾಯಿ. ನಿರ್ದೇಶಕರಗಳಾದ ಸವರಿಯಪ್ಪ. ಸುರೇಂದ್ರ ಕುಮಾರ್ ಇಂದ್ರೇಶ್ ದಯಾನಂದ ಸಿದ್ದೇಶ್ ಲೀಲಾ ಕೆ ಸುಬ್ಬೆಗೌಡ. ಸದಾಶಿವ . ನಾರಾಯಣ ಎಚ್ ಪಿ. ಜನ್ಮತೀ ಕೆ ಬಿ ಮಂಜುಳಾ ಮಹದೇವಮೂರ್ತಿ. ಕೆ. ನರಸಿಂಹಮೂರ್ತಿ ಕಾರ್ಯದರ್ಶಿ ಶಿವಕುಮಾರ್ ಸಿಬ್ಬಂದಿ ವರ್ಗಗಳ ವರ್ಗದವರಾದ ಗೋಪಿ ಹಾಗೂ ಗಣೇಶ್ . ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಂಗನಾಥನ್ ಕಾರ್ಯದರ್ಶಿ ಕಲ್ಪನಾ ಸರ್ಕಾರಿ ನೌಕರ ಸಂಘದ ಕಾರ್ಯದರ್ಶಿ ಹೆಚ್‍ಎಸ್ ಮಹೇಶ್ ಎಸ್ ಸಿ ಎಸ್ ಟಿ ನೌಕರರ ಸಂಘದ ಅಧ್ಯಕ್ಷ ರಾಜಸ್ವಾಮಿ ಸರ್ಕಾರಿ ನೌಕರ ಸಂಘದ ಗೌರವಾಧ್ಯಕ್ಷ ಧರ್ಮ ರತ್ನಾಕರ ರಾಜ್ಯ ಪರಿಷತ್ ಸದಸ್ಯ ನೌಕರರ ಸಂಘದ ಹನುಮಂತರಾಜು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ರವಿಕುಮಾರ್. ಮುಂತಾದವರು ಭಾಗವಹಿಸಿದ್ದರು.

































