Home ಜಿಲ್ಲೆ ಮೈಸೂರು ಪಿಕಪ್ ವಾಹನ, ಬೈಕ್ ಮುಖಾಮುಖಿ ಡಿಕ್ಕಿ ಬೈಕ್ ಸವಾರರು ಸಾವು

ಪಿಕಪ್ ವಾಹನ, ಬೈಕ್ ಮುಖಾಮುಖಿ ಡಿಕ್ಕಿ ಬೈಕ್ ಸವಾರರು ಸಾವು

ಸಂಜೆವಾಣಿ ವಾರ್ತೆ
ಹನೂರು ಆ 10 :-
ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮುಖ್ಯ ಕೌದಳ್ಳಿ ಸಮೀಪದ ಸಂತೆಖಾನೆ ಬಳಿ ಪಿಕಪ್ ವಾಹನ ಮತ್ತು ಬೈಕ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.


ಹನೂರು ತಾಲೂಕಿನ ಹಳೆ ಮಾರ್ಟಳ್ಳಿ ಗ್ರಾಮದ ಯುವರಾಜ್ (50) ಹಾಗೂ ಮದ್ದೂರು ತಾಲೂಕಿನ ಎಡಕೋಡಹಳ್ಳಿ ಗ್ರಾಮದ ಶಶಾಂಕ್ (25) ಇಬ್ಬರು ಮೃತಪಟ್ಟಿದ್ದಾರೆ.
ಇವರು ಕಾರ್ಯನಿಮಿತ್ತ ವಡಕೆಹಳ್ಳದಿಂದ ಕೌದಳ್ಳಿ ಗ್ರಾಮದ ಕಡೆಗೆ ಹೋಗುವ ವೇಳೆ ಕೌದಳ್ಳಿ ಸಂತೆಖಾನೆ ಹಳ್ಳದ ಹತ್ತಿರ ಎದುರುಗಡೆ ಬಂದ ಮಹೇಂದ್ರ ಪಿಕಪ್ ವಾಹನ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಗೆ ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ರಾಮಾಪುರ ಪೆÇಲೀಸ್ ಠಾಣೆ ಅಧಿಕಾರಿಗಳು ಹಾಗೂ ಕೊಳ್ಳೇಗಾಲ ವಿಭಾಗೀಯ ಡಿವೈಎಸ್ಪಿ . ಅಡಿಷನಲ್‍ಎಸ್ಪಿ ಮತ್ತು ಸಿಬ್ಬಂದಿವರ್ಗ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಹನೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.