Home ಜಿಲ್ಲೆ ಮೈಸೂರು ಜ್ಞಾನವೇ ಸಂಪತ್ತು, ಶಿಕ್ಷಣದಿಂದಲೇ ಪ್ರಗತಿ ಮಂಟೇಸ್ವಾಮಿ

ಜ್ಞಾನವೇ ಸಂಪತ್ತು, ಶಿಕ್ಷಣದಿಂದಲೇ ಪ್ರಗತಿ ಮಂಟೇಸ್ವಾಮಿ

ಸಂಜೆವಾಣಿ ವಾರ್ತೆ
ಹನೂರು.ಆ.10:-
ಸಂವಿಧಾನ ಮೂಲಕ ಎಲ್ಲ ಹಕ್ಕು, ಅಧಿಕಾರ ಸಿಕ್ಕಿದೆ. ವಿದ್ಯಾರ್ಥಿಗಳು ದೊಡ್ಡ ಕನಸವು ಗುರಿ ಇಟ್ಟುಕೊಂಡು ದಡ ಸೇರಬೇಕು ಇದಕ್ಕೆ ಪರಿಶ್ರಮ ಮುಖ್ಯವಾಗಲಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಸಮುದಾಯ ಜನರು ಸಾಗಬೇಕು ಎಂದು ಮೈಸೂರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರಾದ ಮಂಟೇಸ್ವಾಮಿ ತಿಳಿಸಿದರು.


ಹನೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯದ ಭವನದಲ್ಲಿ ಮಾದಿಗ ನೌಕರರ ಸಂಘ. ಹನೂರು ಹಾಗೂ ಕರ್ನಾಟಕ ಮಾದರ ಮಹಾ ಸಭಾ ಹನೂರು ಇವರ ವತಿಯಿಂದ ಆಯೋಜಿಸಲಾಗಿದ್ದ ನಮ್ಮ ಊರು-ನಮ್ಮ ಅಭಿವೃದ್ಧಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಆಧುನಿಕತೆ ಇಲ್ಲದೆ ಶಿಕ್ಷಣ ಪಡೆದು ಪುಸ್ತಕವನ್ನೇ ಓದಿನತ್ತ ಬೆಳುಕು ಚೆಲ್ಲಿ ಬಂದಿದ್ದೇವೆ. ಮೊಬೈಲ್ ಯುಗದಲ್ಲಿ ಎಲ್ಲವೂ ಅಂಗೈಲೇ ಸಿಗಲಿದೆ ಇದನ್ನು ಉಪಯುಕ್ತತೆಗೆದು ಬಳಕೆ ಮಾಡಿಕೊಳ್ಳಬೇಕು. ನಮ್ಮ ಶ್ರಮ ಮುಂದಿನ ಭವಿಷ್ಯಕ್ಕೆ ದಾರಿ ದೀಪವಾಗಬೇಕು. ಜ್ಞಾನವೇ ಸಂಪತ್ತು, ಶಿಕ್ಷಣದಿಂದಲೇ ಪ್ರಗತಿ ಸಾಧ್ಯ ಇದನ್ನು ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರೇ ಹೇಳಿದ್ದಾರೆ ಇದರಿಂದ ಘನತೆ ಗೌರವ ಸಮಾನತೆ ಸಿಗಲಿದೆ.


ಸಿ.ಆರ್.ಪಿ.ಎಫ್ ಸಂಸ್ಥಾಪಕರು ಹಾಗೂ ವಿಚಾರವಾದಿಗಳಾದ ಅರಕಲವಾಡಿ ನಾಗೇಂದ್ರ ಮಾತನಾಡಿ, ಭಾರತ ಶ್ರೀಮಂತರ ರಾಷ್ಟ್ರದಲ್ಲಿ ಭಾರತದ ಮೂಲ ನಿವಾಸಿಗಳು ಇಂದಿಗೂ ಬಡತನ, ಅವಮಾನ ಅನ್ಯಾಯದಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಗೌತಮ ಬುದ್ಧ, ಜಗಜ್ಯೋತಿ ಬಸವಣ್ಣ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿದಂತೆ ಪೂರ್ವಜರ ಇತಿಹಾಸ ಜೊತೆಗೆ ಶಿಕ್ಷಣ ಪಡೆದುಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಅವರ ರಚಿತ ಸಂವಿಧಾನದಲ್ಲಿರುವ ಹಕ್ಕು, ಅಧಿಕಾರವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಅಲ್ಲದೆ ಉನ್ನತ ಹುದ್ದೆ ಅಲಂಕರಿಸಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.


ದೇಶದಲ್ಲಿ ಕೆಲವರಿಗೆ ಕೋಟಿ ಕೋಟಿ ರೂಗಳಿಗೆ ಲೆಕ್ಕ ಇಲ್ಲ. ಆದರೆ ಶೋಷಿತ ಸಮುದಾಯ ಜನರಿಗೆ ಪೈಸೆ ಪೈಸೆ ಲೆಕ್ಕ ಇದೆ. ಸಣ್ಣಪುಟ್ಟ ಆದಾಯದ ಹಣದಲ್ಲೇ ಜೀವನಕ್ಕೆ ಸಾಗಿಸುವ ಸ್ಥಿತಿಯಿದೆ. ಸರಿಯಾದ ಪೌಷ್ಟಿಕ ಆಹಾರ ಇಲ್ಲ, ಉತ್ತಮ ಆರೋಗ್ಯ ಕಾಪಾಡಿಕೊಳ್ಳದು ಕಷ್ಟದ ಪರಿಸ್ಥಿತಿ. ಗೌರವಿತ ಮೌಲ್ಯ ಬಟ್ಟೆ ಕೊಂಡುಕೊಳ್ಳಕೆ ಆಗುತ್ತಿಲ್ಲ ಇದೆಲ್ಲ ದಕ್ಕಬೇಕು ಎಲ್ಲರಂತೆ ಸಮಾನತೆಯಿಂದ ಬಾಳಬೇಕು ಎಂದರೆ ಶಿಕ್ಷಣ, ಉನ್ನತ ಹುದ್ದೆಯಿಂದಲೇ ಪ್ರಗತಿ ಹೊಂದಲು ಸಾಧ್ಯ ಎಂದು ತಿಳಿಸಿದರು.
ಇದೆ ವೇಳೆ ಮಾದಿಗ ಸಮುದಾಯ ಅಭಿವೃದ್ಧಿಯಲ್ಲಿ ಸಮುದಾಯದ ಸಂಘಟನೆಗಳ ಪಾತ್ರ ಹಾಗೂ ಪೂರ್ವಜರ ಇತಿಹಾಸ ಕುರಿತು ಒಂದು ದಿನದ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಗಳಾದ ಕೆಂಪರಾಜು (ಬೈರನತ್ತ ), ಹನೂರು ತಾಲೂಕು ಮಾದಿಗ ನೌಕರ ಸಂಘ ಅಧ್ಯಕ್ಷ ಸಿದ್ದಯ್ಯ (ಶಾಗ್ಯ ), ವಿಚಾರವಾದಿ ಹಾಗೂ ಪ್ರಗತಿಪರ ಚಿಂತಕರಾದ ಅರಕಲವಾಡಿ ನಾಗೇಂದ್ರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರ ನೆಡೆಸಿಕೊಟ್ಟರು. ಬಾಣೂರು ಶಾಕ್ಯ ಸುಂದರ್ ಅವರ ಕಲಾ ತಂಡ ಕ್ರಾಂತಿ ಹಾಗೂ ಸಮುದಾಯ ಜಾಗೃತಿ ಗೀತೆಗಳನ್ನು ಹಾಡಿದರು.


ಈ ಸಂದರ್ಭದಲ್ಲಿ ಸಚಿವ ಕೆ.ಹೆಚ್. ಮುನಿಯಪ್ಪ ರವರ ವಿಶೇಷ ಕರ್ತವ್ಯಾಧಿಕಾರಿ ವೆಂಕಟೇಶ್, ಮೈಸೂರು ಡಿಎಂಎಸ್ ಸ್ಕೂಲ್ ಪ್ರಾಶುಂಪಾಲರಾದ ಹಂತಮಂತು, ಮಾದಾರ ಮಹಾ ಸಭಾ ಸಂಘಟನೆ ಹನೂರು ತಾಲೂಕು ಅಧ್ಯಕ್ಷ ಸುದೇಶ್, ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ಎಂ.ರಾಜು, ಶಿಕ್ಷಕರಾದ ನಾಗರಾಜು, ಶಾಗ್ಯ ಸಿದ್ದಯ್ಯ, ಮುಖಂಡರಾದ ರವಿ, ರಘು, ಶಾಕ್ಯ ಸುಂದರ್, ಬೂದಬಾಳು ದಾಸಪ್ಪ, ಸೇರಿದಂತೆ ಸಮುದಾಯದ ವಿವಿಧ ಗ್ರಾಮಗಳ ಯುವಕರು, ಯುವತಿಯರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.