Home ಜಿಲ್ಲೆ ಮೈಸೂರು ಶಿಕ್ಷಣದ ಜತೆಗೆ ಸಾಂಸ್ಕøತಿಕ, ಕ್ರೀಡಾ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ: ಪೆÇ್ರ. ಮೈಸೂರು ಕೃಷ್ಣಮೂರ್ತಿ

ಶಿಕ್ಷಣದ ಜತೆಗೆ ಸಾಂಸ್ಕøತಿಕ, ಕ್ರೀಡಾ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ: ಪೆÇ್ರ. ಮೈಸೂರು ಕೃಷ್ಣಮೂರ್ತಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.26-
ಶಿಕ್ಷಣವು ಕೇವಲ ಪಠ್ಯ, ಪರೀಕ್ಷೆ ಹಾಗೂ ಅಂಕಗಳಿಗೆ ಸೀಮಿತವಾಗದೆ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ವ್ಯಕ್ತಿತ್ವದ ಸವಾರ್ಂಗೀಣ ವಿಕಸನಕ್ಕೆ ಅಗತ್ಯ ಎಂದು ಪೆÇ್ರ. ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಗರದ ಜೆಎಸ್‍ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಪಠ್ಯನಿಷ್ಠ ಹಾಗೂ ಪಠ್ಯೇತರ ಎಂಬ ಎರಡು ಪ್ರಮುಖ ಆಯಾಮಗಳಿವೆ. ಸಿಲಬಸ್ ಹಾಗೂ ಪರೀಕ್ಷಾಧಾರಿತ ಅಧ್ಯಯನದ ಜತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.


ಕೇವಲ ಪರೀಕ್ಷೆ ಬರೆದು ಪದವಿ ಪ್ರಮಾಣಪತ್ರ ಪಡೆಯುವುದμÉ್ಟೀ ಶಿಕ್ಷಣದ ಉದ್ದೇಶವಲ್ಲ. ಜೀವನವನ್ನು ಸಮಗ್ರವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಲು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡೂ ಅಗತ್ಯ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸೂಕ್ತ ಮಹತ್ವ ದೊರೆಯದಿರುವುದು, ಅವುಗಳು ವಾಣಿಜ್ಯೀಕರಣಗೊಳ್ಳುತ್ತಿರುವುದು ಕಳವಳಕಾರಿ ಬೆಳವಣಿಗೆ. ಇಡೀ ಬದುಕನ್ನು ವಾಣಿಜ್ಯೀಕರಣಗೊಳಿಸುವುದರಿಂದ ಸಮಾಜದಲ್ಲಿ ದ್ರೋಹ ಮತ್ತು ಅಪನಂಬಿಕೆಯ ವಾತಾವರಣ ನಿರ್ಮಾಣವಾಗಿ, ಮಾನವ ಸಮಾಜ ಹಾಗೂ ಪ್ರಕೃತಿಯ ಅಸ್ತಿತ್ವಕ್ಕೂ ಧಕ್ಕೆಯಾಗಬಹುದು ಎಂದು ಎಚ್ಚರಿಸಿದರು.


ಮಹಾಭಾರತದ ವೀರ ಅಭಿಮನ್ಯುವಿನ ಸಾಹಸ ಮತ್ತು ಛಲವನ್ನು ಉದಾಹರಿಸಿದ ಅವರು, ಯುವಜನತೆ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಾಂಸ್ಕೃತಿಕ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಬದುಕು, ಸಮಾಜ ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಂ.ಎನ್. ಜಯಶೀಲ, ಮೈಸೂರಿನ ಅಂತಾರಾಷ್ಟ್ರೀಯ ಕೋಕೋ ಆಟಗಾರ್ತಿ ಮೋನಿಕಾ, ಜೆಎಸ್‍ಎಸ್ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜ್ ಮೂರ್ತಿ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಜಮುನಾ, ದೈಹಿಕ ಶಿಕ್ಷಣ ನಿರ್ದೇಶಕ ಉಮೇಶ್ ಎಸ್. ಹಾಗೂ ಪ್ರಾಂಶುಪಾಲ ಡಾ. ಎಂ. ಪ್ರಭು, ಪ್ರಾಧ್ಯಾಪಕಿ ಡಾಕ್ಟರ್ ಸುμÁ್ಮ, ಪ್ರಾಧ್ಯಾಪಕಿ ಅರುಣ, ಪ್ರಾಧ್ಯಾಪಕಿ ಸೌಮ್ಯ ಉಪಸ್ಥಿತರಿದ್ದರು.