Home ಜಿಲ್ಲೆ ವ್ಯಸನ ಮುಕ್ತ ದಿನಾಚರಣೆ ಮಾದಕ ವಸ್ತುಗಳಿಂದ ದೂರ ಇರಲು ಸಂಕಲ್ಪ ಮಾಡಿ: ಗಾದೆಪ್ಪ

ವ್ಯಸನ ಮುಕ್ತ ದಿನಾಚರಣೆ ಮಾದಕ ವಸ್ತುಗಳಿಂದ ದೂರ ಇರಲು ಸಂಕಲ್ಪ ಮಾಡಿ: ಗಾದೆಪ್ಪ

(ಸಂಜೆವಾಣಿ ಪ್ರತಿನಿಧಿಯಿಂದ) 

ಬಳ್ಳಾರಿ, ಆ.1: ನಗರದಲ್ಲಿ ಇಂದು ಇಳಕಲ್ಲಿನ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,  ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ,  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಂಡಿದ್ದ ವ್ಯಸನ ಮುಕ್ತ  ಸಮಾಜಕ್ಕಾಗಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿ.ಪಿ.ಶಿವಾನಂದ್ ಜಾಥಾಗೆ  ಚಾಲನೆ ನೀಡಿ.  ನಮ್ಮ ಯುವ ಜನತೆ ಈಗ ಮಾದಕ ವಸ್ತುಗಳ ಸೇವನೆಯಿಂದ ವ್ಯಸನಿಗಳಾಗುತ್ತಿದ್ದು. ಅದರಿಂದಾಗುವ ಪರಿಣಾಮದ ಬಗ್ಗೆ ಅರಿವು ಮೂಡಿಸಲು ಜಾಥಾ ನಡೆಸಿತು.  ವ್ಯಸನ ಮುಕ್ತ ಸಮಾಜ ನಮ್ಮೆಲರ ಹೊಣೆಯಾಗಿದೆಂದರು.

ಜಾಥಾ ಸರಳಾದೇವಿ ಕಾಲೇಜಿನಿಂದ ಸಾಂಸ್ಕೃತಿಕ ಸಮುಚ್ಚಯ ವರೆಗೆ  ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತ ಫಲಕಗಳನ್ನು ಹಿಡಿದು ಸಾಗಿತು

ಹೊಂಗಿರಣ ಸಭಾಂಗಣದಲ್ಲಿ  ಮಹಾಂತ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ ಮಾತನಾಡಿ. ನಿಮ್ಮ ವ್ಯಸನಗಳನ್ನು ನನ್ನ ಜೋಳಿಗೆಗೆ ಹಾಕಿ ಎಂದು ಮಹಾಂತ ಶ್ರೀಗಳು ಉತ್ತಮ ಸಮಾಜಕ್ಕಾಗಿ  ಶ್ರಮಿಸಿದ್ದರು. ಅವರ ಹೆಸರಿನಲ್ಲಿ  ಸರ್ಕಾರ ವ್ಯಸನ ಮುಕ್ತ ದಿನವನ್ನಾಗಿ ಆಚರಿಸುತ್ತಿದೆ. ಯುವ ಜನತೆ  ದುಶ್ಚಟಗಳ೮ಗೆ ಬಲಿಯಾಗದೆ  ಭವಿಷತ್ತಿನ ಜೀವನಕ್ಕೆ  ಮಾದಕ ವಸ್ತುಗಳಿಂದ ದೂರ ಇರಲು ಇಂದು ಸಂಕಲ್ಪ ಮಾಡಿ  ಎಂದರು.

ಜಾಥಾದಲ್ಲಿ ಪಾಲ್ಗೊಂಡಿದ್ದ  ವಿದ್ಯಾರ್ಥಿನಿ ಎಂ.ಸಾನಿಕ ಸಂಜೆವಾಣಿ ಜೊತೆ ಮಾತನಾಡಿ  ಬೀಡಿ ಸಿಗರೇಟ್ ಕುಡಿತ ಬಿಟ್ಟು ಉತ್ತಮಜೀವನದತ್ತ ಪರಿವರ್ತಿತರಾಗಿ ಎಂದು ಜಾಥಾ ಮೂಲಕ ಅರಿವು ಮೂಡಿಸಿತು ಎಂದರು.

ಸರಳಾ ದೇವಿ ಕಾಲೇಜಿನ ಸಹಾಯಕ ಪ್ರಧ್ಯಾಪಕ  ಕೆ.ಬಸಪ್ಪ ಮಾತನಾಡಿ, ಮನುಷ್ಯರಿಗೆ ಬರುವ ಕೆಲ ಕಾಯಿಲೆಗಳಿಗೆ  ದುಷ್ಟಗಳೇ ಕಾರಣವಾಗಿದ್ದು. ವ್ಯಸನ ಮುಕ್ತ ಸಮಾಜಕ್ಕಾಗಿ ಇಂದು ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಯ್ತು ಎಂದರು .

ಉಪನ್ಯಾಸಕ ಆಲಂಬಾಷ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್  ವಾರ್ತಾ  ಸಹಾಯಕ ವಿ.ಸಿ.ಗುರುರಾಜ  ಮೊದಲಾದವರು ಇದ್ದರು.