
ಸಂಜೆವಾಣಿ ವಾರ್ತೆ
ಮಂಡ್ಯ:ಜೂ.14:- ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯವನ್ನು ಬೆಳಿಸಿಕೊಂಡು ರೈತರು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಉದ್ಯೋಗಿಗಳಾಗಬೇಕು ಎಂದು ಮಂಡ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ತಿಳಿಸಿದರು.
ಮಂಡ್ಯ ಫಸ್ಟ್ ಸರ್ಕಲ್ ,ಕೃಷಿ ಇಲಾಖೆ, ಬೆಲ್ಲದ ನಾಡು ರೈತರ ಉತ್ಪಾದನಾ ಕಂಪನಿಗಳ ಒಕ್ಕೂಟ ಸಹಯೋಗ ದೊಂದಿಗೆ ಮುನ್ನಡೆ ಮಂಡ್ಯ ವಿಷನ್ -2035 ರ ಎರಡು ದಿನಗಳ ಕಾಲ ಕೃಷಿ ಉದ್ಯಮಶೀಲ ಅಧಿವೇಶನ ಖರೀದಿದಾರರು -ಮಾರಾಟ ಗಾರರ ಸಮಾವೇಶ ಹಾಗೂ ರೈತ ಬಜಾರ್ (ಆರ್ -ಮಾರ್ಟ್) ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ರೈತರು ಸಂಸ್ಕರಣೆ,ಮೌಲ್ಯವರ್ಧನೆ, ಮಾರ್ಕೆಟಿಂಗ್ ಹಾಗೂ ಆರ್ಥಿಕ ನಿರ್ವಹಣೆ ಸೇರಿದಂತೆ ವಿವಿಧ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ರೈತರು ಕೇವಲ ಉತ್ಪಾದಕ ರಾಗಿಯೇ ಉಳಿಯದೆ ಕೃಷಿ ಉದ್ಯಮಿಗಳಾಗಿ ಬೆಳೆಯ ಬೇಕು ಎಂಬ ದೃಷ್ಟಿಯಿಂದ ಕಾರ್ಯಾಗಾರವನ್ನು ಆಯೋಜಿಸಿದ್ದು ಉದ್ಯಮಿಗಳು ಕಾರ್ಯಾಗಾರ ಕಾರ್ಯಕ್ರಮವನ್ನು ಸದುಪ ಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಂಡ್ಯ ನಗರವನ್ನು 1,500 ಕೋಟಿ ರೂಗಳಲ್ಲಿ ಮಂಡ್ಯ ನಗರವನ್ನು ಅಭಿವೃದ್ಧಿ ಮಾಡಲಾಗಿದ್ದು ಜಿಲ್ಲೆಯ ಎಲ್ಲಾ ಹಳ್ಳಿಗಳು ರಸ್ತೆಗಳನ್ನು ದುರಸ್ಥಿ ಮಾಡಲಾಗಿದೆ. ಹಾಗೂ ಕೆಂಪೇಗೌಡ ರಸ್ತೆಯನ್ನು ಕಳೆದ 2 ತಿಂಗಳ ಹಿಂದೆ ಉದ್ಘಾಟನೆ ಮಾಡ ಲಾಗಿದೆ ಎಂದು ತಿಳಿಸಿದರು.
ಮಂಡ್ಯ ನಗರಕ್ಕೆ 100 ಕೋಟಿ ಅನುಧಾನ ಬಿಡುಗಡೆ ಯಾಗಿದ್ದು ಟೆಂಡರ್ ಕರೆಯಲಾಗಿದೆ ಕೇವಲ 6 ತಿಂಗಳೊಳಗೆ ಮಂಡ್ಯ ಚಿತ್ರಣವನ್ನು ಬದಲಿಸುತ್ತೇವೆ ಎಂದರು.
ಫಸ್ಟ್ ಸರ್ಕಲ್ ನ ಮಾರ್ಗದರ್ಶಕರಾದ ಜಯರಾಮ್ ರಾಯಪುರ ರವರು ಮಾತನಾಡಿ ಜಿಲ್ಲೆಯ ರೈತರು ನೀರಾವರಿ ಸೌಲಭ್ಯ ವನ್ನು ಬಳಸಿಕೊಂಡು ರೈತರಿಗೆ ಆದಾಯ ಸಿಗುವಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯಬೇಕು ಹಾಗೂ ಆರ್ಥಿಕವಾಗಿ ಸಬಲರಾಗು ವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗ ಳೂರು ಫಸ್ಟ್ ಸರ್ಕಲ್ ನ ಅಧ್ಯಕ್ಷ ಡಾ.ಡಿ.ಮುನಿರಾಜು, ಕೋಲಾರ ಫಸ್ಟ್ ಸರ್ಕಲ್ ನ ಅಧ್ಯಕ್ಷ ಸಿ.ಎಂ.ಆರ್. ಶ್ರೀನಾಥ್, ಖ್ಯಾತ ಉದ್ಯಮಿ ಜಯರಾಮ್ ಜಿ.ಕಿಮ್ಮನೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ಫಸ್ಟ್ ಸರ್ಕಲ್ ಅಧ್ಯಕ್ಷ ಡಾ.ಬಿ. ಶಿವಲಿಂಗಯ್ಯ, ಕಾರ್ಯಾಧ್ಯಕ್ಷ ಚಂದ್ರಶೇಖರ್,ಕಾರ್ಯದರ್ಶಿ ಕಾರಸವಾಡಿ ಮಹದೇವ್, ಉಪಾಧ್ಯಕ್ಷ ಪುಟ್ಟರಾಜು, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಗಳು ಉಪಸ್ಥಿತರಿದ್ದರು.




























