Home ಜಿಲ್ಲೆ ಮೈಸೂರು ರಾಮಪುರ ಗ್ರಾಮ ಪಂ. ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ

ರಾಮಪುರ ಗ್ರಾಮ ಪಂ. ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ

ಸಂಜೆವಾಣಿ ವಾರ್ತೆ
ಹನೂರು.ಜು.3:-
ತಾಲೂಕಿನ ರಾಮಪುರ ಗ್ರಾಮ ಪಂಚಾಯಿತ್ 2026 /27ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನಾ ಸಭೆ ಮತ್ತು 15ನೇ ಹಣಕಾಸು ಯೋಜನೆಯ ಲೆಕ್ಕ ಪರಿಶೋಧನಾ ಸಭೆ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಇಂದು ಗುರುವಾರ ನಡೆಯಿತು.


ಸಭೆಯಲ್ಲಿ ತಾಲೂಕು ನರೇಗಾ ಸಂಯೋಜಕ ನಾರಾಯಣ್ ಅವರು ಮಾತನಾಡುತ್ತಾ ರಾಮಪುರ ಗ್ರಾಮ ಪಂಚಾಯತ್ ವತಿಯಿಂದ ನರೇಗಾ ಯೋಜನೆಯಡಿ 180 ಕಾಮಗಾರಿಗಳು ಕೈಗೊಂಡಿದ್ದು ಕೆರೆ ಹಳ್ಳ ಕಾಲುವೆಗಳಲ್ಲಿ ಊಳೆತ್ತುವುದು. ಜಮೀನು ಅಭಿವೃದ್ಧಿ, ಮೆಟ್ಲಿಂಗ್ ರಸ್ತೆ, ಕೊಟ್ಟಿಗೆ ನಿರ್ಮಾಣ, ಸಿಸಿ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗಳು ಪಾರದರ್ಶಕವಾಗಿ ನಡೆದಿದೆ ಎಂದು ಸಾಮಾಗ್ರಿ ವೆಚ್ಚ ಕೂಲಿ ವೆಚ್ಚ ಅನುದಾನದ ಬಗ್ಗೆ ಸವಿವರವಾಗಿ ಮಂಡಿಸಿದರು.


2025 26 ನೇ ಸಾಲಿನಲ್ಲಿ ರಾಮಪುರ ಗ್ರಾಮ ಪಂಚಾಯಿತಿ ವತಿಯಿಂದ 15ನೇ ಹಣಕಾಸು ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರ ಮತ್ತು ವೆಚ್ಚದ ವಿವರಗಳನ್ನು ತಿಳಿಸುತ್ತಾ ಡೆಕ್ ಸ್ಲ್ಯಾಪ್ ನಿರ್ಮಾಣ ನೀರಿನ ತೊಂಬೆ ನಿರ್ಮಾಣ ಸಿಸಿ ರಸ್ತೆ ಚರಂಡಿ ನಿರ್ಮಾಣ ವಿದ್ಯುತ್ ಕಂಬ ಅಳವಡಿಸುವುದು ಪೈಪ್ಲೈನ್ ಕಾಮಗಾರಿ ನೈರ್ಮಲ್ಯ ನಿರ್ವಹಣೆ ತ್ಯಾಜ್ಯ ವಿಲೇವಾರಿ ನಿರ್ವಹಣೆ ಸೇರಿದಂತೆ ಹಲವರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದ್ದು ಒಟ್ಟಾರೆ 25 ಕಾಮಗಾರಿಗಳಿಗೆ 1938701 ರೂ. ಖರ್ಚು ಮಾಡಲಾಗಿದೆ ಎಂದು ಸವಿವರವಾಗಿ ಸಭೆಯಲ್ಲಿ ಮಂಡಿಸಿದರು.


ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಕಾಮಗಾರಿಗಳು ಯೋಜನೆಗಳ ಬಗ್ಗೆ ತಿಳಿಸಿ ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ನರೇಗಾ ಸಂಯೋಜಕ ನಾರಾಯಣ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪಲತಾ, ನೂಡೇಲ್ ಅಧಿಕಾರಿ ಮಹೇಶ್, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಾರ್ಡನ್ ರಮೇಶ್, ಅರಣ್ಯ ಇಲಾಖೆ ಅಧಿಕಾರಿ, ರೇಷ್ಮೆ ಇಲಾಖೆ ಅಧಿಕಾರಿ, ಸೇರಿದಂತೆ ಇನ್ನಿತರರು ಇದ್ದರು.