
ಸಂಜೆವಾಣಿ ನ್ಯೂಸ್
ಮೈಸೂರು: ಜುಲೈ.03:- ಅಬಕಾರಿ ಇಲಾಖೆಯು ಅವಧಿ ಮೀರಿದ ಹಾಗೂ ದೀರ್ಘಕಾಲದಿಂದ ಮಾರಾಟವಾಗದೆ ಉಳಿದಿದ್ದ ಸುಮಾರು 24 ಲಕ್ಷ ಮೌಲ್ಯದ ಮದ್ಯವನ್ನು ಗುರುವಾರ ನಾಶಪಡಿಸಿತು.
ಅಬಕಾರಿ ಉಪ ಆಯುಕ್ತ ವಿವೇಕ್ ಜೆ. ಅವರ ಆದೇಶದ ಮೇರೆಗೆ, ಅಬಕಾರಿ ಉಪ ಅಧೀಕ್ಷಕ ವಿಕ್ರಮ್ ಎಲ್.ಬಿ. ನೇತೃತ್ವದಲ್ಲಿ ಮೈಸೂರು ನಗರದ ಕೂರ್ಗಳ್ಳಿಯಲ್ಲಿರುವ ಕೆಎಸ್‍ಬಿಸಿಎಲ್ ಲಿಕ್ಕರ್ ಡಿಪೆÇೀ ಮೈಸೂರು-1 ಮತ್ತು ಮೈಸೂರು-2ರಲ್ಲಿ ಈ ಕಾರ್ಯಾಚರಣೆ ನಡೆಯಿತು.
ಕಾರ್ಯಾಚರಣೆಯಲ್ಲಿ ವಿವಿಧ ಬ್ರಾಂಡ್‍ಗಳ ಅವಧಿ ಮೀರಿದ 929 ರೆಡಿ ಪ್ಯಾಕ್‍ಗಳ (8,870 ಲೀಟರ್) ಬಿಯರ್ ಹಾಗೂ ಬಹುದಿನಗಳಿಂದ ಮಾರಾಟವಾಗದೇ ಉಳಿದಿದ್ದ 138 ರೆಡಿ ಪ್ಯಾಕ್‍ಗಳ (1,216 ಲೀಟರ್) ವೈನ್ ನಾಶಪಡಿಸಲಾಯಿತು.
ಈ ವೇಳೆ ಕೆಎಸ್‍ಬಿಸಿಎಲ್ ಮೈಸೂರು-1 ಡಿಪೆÇೀದ ಮಳಿಗೆ ವ್ಯವಸ್ಥಾಪಕ ಡಿ.ಕೆ. ವೆಂಕಟೇಶ್, ಮೈಸೂರು-2 ಡಿಪೆÇೀದ ಮಳಿಗೆ ವ್ಯವಸ್ಥಾಪಕ ಯೋಗೇಶ್ ಎಂ.ಆರ್., ಅಬಕಾರಿ ನಿರೀಕ್ಷಕರಾದ ನಂದಿತ ಹಳದನಕರ್, ರಾಧಾ ಎಸ್.ಪಿ., ಅಬಕಾರಿ ಉಪ ನಿರೀಕ್ಷಕ ಆನಂದ್ ಸೇರಿದಂತೆ ಅಬಕಾರಿ ಇಲಾಖೆ ಮತ್ತು ಡಿಪೆÇೀ ಸಿಬ್ಬಂದಿ ಉಪಸ್ಥಿತರಿದ್ದರು.
ಅಧಿಕಾರಿಗಳ ಸಮ್ಮುಖದಲ್ಲಿ ನಿಯಮಾನುಸಾರ ಮದ್ಯ ನಾಶಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು ಎಂದು ಇಲಾಖೆ ತಿಳಿಸಿದೆ.


























