Home ಜಿಲ್ಲೆ ಮೈಸೂರು ಇಂದಿನಿಂದ ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ

ಇಂದಿನಿಂದ ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ

ಸಂಜೆವಾಣಿ ನ್ಯೂಸ್
ಮೈಸೂರು: ಜುಲೈ.03:-
ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿನ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಜು.3ರಿಂದ 12ರವರೆಗೆ ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ ಆಯೋಜಿಸಲಾಗಿದೆ ಎಂದು ಇಂಡೆಕ್ಸ್-ಸಿ ಗುಜರಾತ್‍ನ ವ್ಯವಸ್ಥಾಪಕ ಸ್ನೇಹ ಮಕ್ವಾನ ತಿಳಿಸಿದರು.


ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿತ್ಯ ಬೆಳಗ್ಗೆ 10 ರಿಂದ ರಾತ್ರಿ 9ರವರೆಗೆ ಉಚಿತ ಪ್ರವೇಶವಿದೆ.
ಜು.3ರಂದು ಸಂಜೆ 4ಕ್ಕೆ ಜವಳಿ ಅಭಿವೃದ್ಧಿ ಆಯುಕ್ತ ಎ.ಬಿ.ಬಸವರಾಜು ಉದ್ಘಾಟಿಸುವರು. ಡಾ.ಸಂಜಯ್ ಜೋಷಿ ಅಧ್ಯಕ್ಷತೆ ವಹಿಸುವರು, ಇನ್ನಿತರ ಗಣ್ಯರು ಹಾಜರಿರುವರೆಂದರು.


ಈ ಮೇಳದಲ್ಲಿ ಗುಜರಾತ್‍ನ ವಿವಿಧ ಭಾಗಗಳಿಂದ ಆಗಮಿಸಿರುವ 100ಕ್ಕೂ ಹೆಚ್ಚು ನಿಪುಣ ಕರಕುಶಲಗಾರರು ಮತ್ತು ಕೈಮಗ್ಗ ನೇಕಾರರು ಪಾಲ್ಗೊಳ್ಳಲಿದ್ದಾರೆ. ಸಾಂಪ್ರದಾಯಿಕ ಕಸೂತಿ, ಮಿರರ್ ವರ್ಕ್, ಜರಿ ಜರ್ದೋಸಿ, ಕಲಾಕೃತಿಗಳು, ಮಣಿಗಳ ಆಭರಣಗಳು, ಟೈ-ಡೈ ವಸ್ತ್ರಗಳು, ಚರ್ಮದ ಕರಕುಶಲ ಉತ್ಪನ್ನಗಳು, ಅಪ್ಲಿಕ್ ಕಲಾಕೃತಿಗಳು, ಬಿದಿರು ಹಾಗೂ ಬೆತ್ತದ ಉತ್ಪನ್ನಗಳು, ಮರ ಮತ್ತು ಲೋಹದ ಕರಕುಶಲ ವಸ್ತುಗಳು ಇರಲಿವೆ ಎಂದರು.
ಇದಲ್ಲದೆ ಕುಚ್ಚಿ ಕಸೂತಿ, ಅಜ್ರಕ್ ಬ್ಲಾಕ್ ಪ್ರಿಂಟಿಂಗ್, ಬಂಧೇಜ್, ಶಾಲುಗಳು ಹಾಗ ಇತರ ಪರಂಪರೆಯ ಕರಕುಶಲ ವಸ್ತುಗಳು ವಿಶೇಷ ಆಕರ್ಷಣೆಯಾಗಿವೆ ಎಂದು ಮಾಹಿತಿ ನೀಡಿದರು.


ಗೋಷ್ಠಿಯಲ್ಲಿ ಬಿ.ಇಳಂಗೋವನ್, ಕೆ.ಎಸ್.ಟೈಲರ್, ರಾಕೇಶ್ ರೈ ಇದ್ದರು.