Home ಜಿಲ್ಲೆ ಬೆಂಗಳೂರು ಸನ್ ಫ್ಯೂರ್ ನಿಂದ ಐಕಾನಿಕ್ ಬ್ರಾಂಡ್ ಅಭಿಯಾನ

ಸನ್ ಫ್ಯೂರ್ ನಿಂದ ಐಕಾನಿಕ್ ಬ್ರಾಂಡ್ ಅಭಿಯಾನ

ಬೆಂಗಳೂರು, ಜುಲೈ 3, ಎಂಕೆ ಅಗ್ರೋಟೆಕ್‍ನ ಪ್ರಮುಖ ಖಾದ್ಯ ತೈಲ ಬ್ರಾಂಡ್ ಆಗಿರುವ, ಇಂದು ಲಕ್ಷಾಂತರ ಭಾರತೀಯ ಮನೆಗಳಲ್ಲಿ 30 ವರ್ಷಗಳ ಶುದ್ಧತೆ, ನಂಬಿಕೆ ಮತ್ತು ಸಂತೋಷದ ಪ್ರತೀಕವಾಗಿರುವ ಸನ್‍ಪ್ಯೂರ್, ತನ್ನ ಐಕಾನಿಕ್ ಬ್ರಾಂಡ್ ಅಭಿಯಾನವನ್ನು ಅನಾವರಣಗೊಳಿಸಿದೆ.

ಸೂಪರ್‍ಸ್ಟಾರ್ ಕಿಚ್ಚ ಸುದೀಪ್ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಅವರನ್ನು ಒಳಗೊಂಡ ಈ ಅಭಿಯಾನವು ಭಾರತದ ಏಕೈಕ ಭೌತಿಕವಾಗಿ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ – ಸನ್‍ಪ್ಯೂರ್ ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯ ಮೇಲೆ ಕೇಂದ್ರಿಕೃತವಾಗಿದೆ. ಈ ಎಣ್ಣೆಯು ತಲೆಮಾರುಗಳಿಂದ ದಕ್ಷಿಣ ಮತ್ತು ಪಶ್ಚಿಮ ಭಾರತದಾದ್ಯಂತದ ಗ್ರಾಹಕರಿಗೆ ವಿಶ್ವಾಸಾರ್ಹ ಆಯ್ಕೆಯಾಗಿದ್ದು, ಬ್ರ್ಯಾಂಡ್‍ನ ಪ್ರಮುಖ ಉತ್ಪನ್ನವಾಗಿದೆ.

ಮೂರು ದಶಕಗಳಿಂದಲೂ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು, ಕೇರಳ, ಮಹಾರಾಷ್ಟ್ರ, ಗೋವಾ ಮತ್ತು ಓಡಿಶಾದ ಅಡುಗೆ ಮನೆಗಳಲ್ಲಿ, ಸನ್‍ಪ್ಯೂರ್ ರಿಫೈನ್ಡ್ ಸೂರ್ಯಕಾಂತಿ ಎಣ್ಣೆ ಒಂದು ನಂಬಿಕಾರ್ಹ ಆಯ್ಕೆಯಾಗಿ ಬಳಕೆಯಾಗಿದ್ದು, ತನ್ನ ಶುದ್ಧತೆ, ಗುಣಮಟ್ಟ ಮತ್ತು ಸ್ಥಿರತೆಯಿಂದ ಲಕ್ಷಾಂತರ ಮನೆಗಳ ಅಚಲ ಬದ್ಧತೆಯನ್ನು ಗಳಿಸಿದೆ.