Home ಜಿಲ್ಲೆ ಬಾಣಾಪುರದಲ್ಲಿ ಮಳೆಗಾಗಿ  ಪ್ರಾರ್ಥನೆ

ಬಾಣಾಪುರದಲ್ಲಿ ಮಳೆಗಾಗಿ  ಪ್ರಾರ್ಥನೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜು.25: ತಾಲೂಕಿನ ಬಾಣಾಪುರ ಗ್ರಾಮದಲ್ಲಿ ಇಂದು ಬೆಳಿಗ್ಗೆ   ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಅಭಿಷೇಕ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು.

 ನಂತರ ಗ್ರಾಮದ ಮುಖ್ಯ ಅಗಸೆ  ದ್ವಾರದಲ್ಲಿರುವ ಬುಡ್ಡೆ ಕಲ್ಲಪ್ಪನಿಗೆ 108 ಕೊಡ ನೀರಿನ ಅಭಿಷೇಕ ಮತ್ತು ಭಜನೆ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

 ಇದರ  ಸಾನಿಧ್ಯವನ್ನು ನಾಗಲಿಂಗಯ್ಯ ಸ್ವಾಮಿಗಳು ವಹಿಸಿದ್ದರು,ಊರಿನ ಪ್ರಮುಖರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.