Home ಜಿಲ್ಲೆ ಮೈಸೂರು ಪುರಸಭೆ ನಿರ್ಲಕ್ಷತನದಿಂದ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯ ಸಿಗದಂತ್ತಾಗಿದೆ: ನಿರಂಜನ್ ಆರೋಪಿ

ಪುರಸಭೆ ನಿರ್ಲಕ್ಷತನದಿಂದ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯ ಸಿಗದಂತ್ತಾಗಿದೆ: ನಿರಂಜನ್ ಆರೋಪಿ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಜುಲೈ.02:-
ಪುರಸಭೆ ನಿರ್ಲಕ್ಷತನದಿಂದ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯ ಸಿಗದಂತ್ತಾಗಿದೆ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹಾಗೂ ಮಾಜಿ ಪುರಸಭೆ ಸದಸ್ಯ ನಿರಂಜನ್ ಆರೋಪಿಸಿದರು.


ಪಟ್ಟಣದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅಧಿಕಾರಿಗಳ ನಿರ್ಲಕ್ಷತನದಿಂದ ಸಾರ್ವಜನಿಕರು ಯಾವುದೇ ನೂತನ ಕಟ್ಟಡಗಳು ನಿರ್ಮಿಸಲು ಪರವಾನಗಿ ಸಿಗದ್ದಾಗಿದೆ. ಎ ಖಾತಾ ಮತ್ತು ಬಿ ಖಾತಾ ಬಗ್ಗೆ ತಿಳಿಯದಾಗಿದೆ.ಯಾರೋ ಗುತ್ತಿಗೆದಾರರ ಮಾತಿಗೆ ಪರವನಾಗಿ ಇಲ್ಲದೆ ಕಟ್ಟಡ ನಿರ್ಮಿಸಿ ಪುರಸಭೆಯಿಂದ ಮೂಲ ಸೌಲಭ್ಯ ಪಡೆಯಲು ಹರಸಾಹಸ ಪಡಬೇಕಾಗಿದೆ.ಪಟ್ಟಣದ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಿದ ಸ್ಥಳೀಯ ಶಾಸಕರು ಜನ ವಾಸವಿಲ್ಲದ ಭಾಗದಲ್ಲಿ ರಸ್ತೆ ಕಾಮಗಾರಿ ಮಾಡುತ್ತಿದೆ ಅಲ್ಲದೆ ಈ ಕಾಮಗಾರಿ ಪೂರ್ಣವಾಗದೆ ಅರ್ಧಕ್ಕೆ ನಿಂತ್ತಿದ್ದೂ ರಸ್ತೆಯಲ್ಲಿ ತಿರುಗಾಡುವ ಸಾರ್ವಜನಿಕರು ಧೂಳಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿಂದೆ ಚುನಾಯಿತ ಪ್ರತಿನಿಧಿಗಳು ಪುರಸಭೆ ಸ್ವಚ್ಛ ಪರಿಸರದ ಹೆಸರಿನಲ್ಲಿ ಸಾಕಷ್ಟು ಸಾಧನೆ ಮಾಡಿ ಕೇಂದ್ರ ಸರ್ಕಾರದಿಂದ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಕೂಡ ಪಡೆದಿತ್ತು ಆದರೆ ಇಂದು ಪುರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೆ ಮುಖ್ಯಧಿಕಾರಿ ಮಧು ಮತ್ತು ಪರಿಸರ ಅಭಿಯಂತರರಾದ ವೈಶಾಲಿಯವರ ತನ್ನ ಬೇಜವಾಬ್ದಾರಿತನವನ್ನು ಪಟ್ಟಣದಾಡ್ಯಂತ್ತ ಅಶುಚಿತ್ವ ಕಾಡುತ್ತಿದೆ ಎಂದು ಆರೋಪಿಸಿದರು.


ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ ಮಾಜಿ ಶಾಸಕ ಕೆ.ಮಹದೇವ್ ರವರು ಶಾಸಕರಾಗಿದ್ದ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಿ ವಿವಿಧ ಯೋಜನೆ ತಂದು ಯಶಸ್ವಿಯಾಗಿದ್ದರು ಆದರೆ ಇಂದು ವಿವಿಧ ಕಾಮಗಾರಿ ಹೆಸರಿನಲ್ಲಿ ಕುಡಿಯುವ ನೀರಿನ ಸಂಪರ್ಕಗಳನ್ನು ಕಡಿತಗೋಳಿಸಿರುವ ಪುರಸಭೆ ಅಧಿಕಾರಿಗಳು ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಪುರಸಭೆ ಸದಸ್ಯ ಪಿ.ಸಿ.ಕೃಷ್ಣ, ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿ ಪಿ.ಕೆ.ಕುಮಾರ್, ಮುಖಂಡರಾದ ರಮೇಶ್, ಸುಬ್ರಮಣ್ಯ, ರಾಜಶೇಖರ್, ಸಯ್ಯದ್ ಇಲಿಯಾಸ್ ಹಾಜರಿದ್ದರು.