Home ಜಿಲ್ಲೆ ತುಂಗಭದ್ರದಿಂದ ನೀರು ಹರಿಸಲು ಹೋರಾಟ ನಾ..ಗಾಳಿಯಂತೆ ನೀ… ಬೆಂಕಿಯಂತೆ

ತುಂಗಭದ್ರದಿಂದ ನೀರು ಹರಿಸಲು ಹೋರಾಟ ನಾ..ಗಾಳಿಯಂತೆ ನೀ… ಬೆಂಕಿಯಂತೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಆ.01: ಶಂಕರಗುರು ಚಿತ್ರದಲ್ಲಿ ದಿ.ರಾಜಕುಮಾರ್ ಅವರು ಅಣ್ಣ ತಮ್ಮನ ದ್ವಿಪಾತ್ರದಲ್ಲಿ ಹಾಡೊಂದರಲ್ಲಿ ನಾ…ಗಾಳಿಯಂತೆ ನೀ..ಬೆಂಕಿಯಂತೆ ಈ ಜೋಡಿಮುಂದೆ ವೈರಿ ನಿಲ್ಲುವನೆ ಎಂಬ ಹಾಡಿನ ದೃಶ್ಯದಂತೆ ನಿನ್ನೆ ಗಂಗಾವತಿ ಶಾಸಕ ಜಿ.ಜನಾರ್ಧನರೆಡ್ಡಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ಬೈಕನಲ್ಲಿ ಕುಳಿತು ಅವರೊಂದು ಕೈ, ಇವರೊಂದು ಕೈ ಎತ್ತಿ

ತುಂಗಭದ್ರಾ ಭಾಗದ ರೈತರ ನ್ಯಾಯಸಮ್ಮತ ನೀರಿನ ಹಕ್ಕಿಗಾಗಿ ಆಗ್ರಹಿಸಿ ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನಾ ರ್್ಯಾಲಿಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.

ತುಂಗಭದ್ರ ಜಲಾಶಯದ ಎಡ ಮತ್ತು ಬಲ ಭಾಗದ ಕಾಲುವೆಗಳಿಗೆ ಕೃಷಿಗೆ ನೀರು ಬಿಡಲು ಆಗ್ರಹಿಸಿ

ನೂರಾರು ರೈತರೊಂದಿಗೆ ಆಂಜನಾದ್ರಿಯಿಂದ  ಮುನಿರಬಾದಿನ ಕಾಡಾ ಕಚೇರಿಗೆ ಬೈಕ್ ಜಾಥಾ ನಡೆಸಿದರು.

ವಿವಿಧ ಸಂಘಟನೆಗಳ ಮುಖಂಡರು ಲ,  ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ರೈತರ ಧ್ವನಿಯಾಗಿ ಹೋರಾಟ ನಡೆಸಿದರು.

 ಐತಿಹಾಸಿಕ ನೀರಿನ ಹಕ್ಕು ಒದಗಿಸುವವರೆಗೆ ನಮ್ಮ ಈ ಹೋರಾಟ ದೃಢವಾಗಿ ಮುಂದುವರಿಯಲಿದೆ. ರೈತರ ಪರವಾಗಿ ನಮ್ಮ ಸಂಕಲ್ಪ ಸದಾ ಅಚಲ ಎಂದಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಪರಸ್ಪರ ಬೈದಾಡಿಕೊಂಡಿದ್ದ ಶ್ರೀರಾಮುಲು ಮತ್ತು ಜನಾರ್ಧನರೆಡ್ಡಿ ಅವರ ಈ ಸಂಘಟಿತ ಹೋರಾಟ ಒಕ್ಷದ ಕಾರ್ಯಕ್ರತರಲ್ಲಿ ಹೊಸ ಹುಮ್ಮಸು ತರಲು ಸಾಧ್ಯ ಎನ್ನುವಂತಾಗಿದೆ.