Home ಜಿಲ್ಲೆ ಮೈಸೂರು ತಮಿಳುನಾಡಿಗೆ ಒಂದು ಹನಿ ನೀರೂ ಬಿಡದಂತೆ ಆಗ್ರಹ

ತಮಿಳುನಾಡಿಗೆ ಒಂದು ಹನಿ ನೀರೂ ಬಿಡದಂತೆ ಆಗ್ರಹ

ಸಂಜೆವಾಣಿ ನ್ಯೂಸ್
ಮೈಸೂರು, ಜು.30:-
ತಮಿಳುನಾಡಿಗೆ ಮುಂದಿನ 15 ದಿನ ನಿತ್ಯ 3,500 ಕ್ಯೂಸೆಕ್ ನೀರು ಹರಿಸಬೇಕೆಂದು ಶಿಫಾರಸು ಮಾಡಿರುವ ಕಾವೇರಿ ನೀರು ನಿಯಂತ್ರಣ ಮಂಡಳಿಯನ್ನು ಖಂಡಿಸಿ ಮೈಸೂರಿನ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆ ವತಿಯಿಂದ ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯನ್ನು ನಡೆಸಲಾಯಿತು.


ಪ್ರತಿಭಟನಾಕಾರರು ಮಾತನಾಡಿ, ರಾಜ್ಯದಲ್ಲಿ ಈ ವರ್ಷ ಬರಗಾಲವೆಂದು ಘೋಷಣೆ ಮಾಡಲಾಗಿದೆ. ನಮಗೆ ಕುಡಿಯಲೇ ನೀರಿಲ್ಲ. ರಾಜ್ಯದ ರೈತರು ಕಾಡಿಬೇಡಿದರೂ ಸರ್ಕಾರ ನೀರು ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಈ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನೇ ರದ್ದು ಮಾಡಬೇಕು. ಹಾಗೂ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಒಂದು ಹನಿ ನೀರೂ ಬಿಡಬಾರದು ಎಂದು ಒತ್ತಾಯಿಸಿದರು.


ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು. ಪ್ರಭುಶಂಕರ್, ಗೋಲ್ಡನ್ ಸುರೇಶ್, ಸಿದ್ದೇಗೌಡ, ಗಿರೀಶ್, ಸೋಮೇಗೌಡ, ಸಿಂದುವಳ್ಳಿ ಶಿವಕುಮಾರ್, ರಾಧಾಕೃಷ್ಣ, ಮಂಜುಳಾ, ತಾಯೂರು ಗಣೇಶ್, ಡಾ. ನಾಗೇಂದ್ರ, ಚಂದ್ರಶೇಖರ್, ಸುನೀಲ್, ರಮೇಶ್, ಶಿವಲಿಂಗಯ್ಯ, ಹನುಮಂತಯ್ಯ, ನಾರಾಯಣ ಗೌಡ, ಶಿವರಾಂ, ಮಲ್ಲೇಶ್, ಹೊನ್ನೇಗೌಡ, ವಿಜಯೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.