Home ಜಿಲ್ಲೆ ಮೈಸೂರು ಅವಲಕ್ಕಿ ಉಪ್ಪೇರಿ

ಅವಲಕ್ಕಿ ಉಪ್ಪೇರಿ

ಬೇಕಾಗುವ ಪದಾರ್ಥಗಳು:

  • ಹಸಿಕಾಯಿತುರಿ 1 ಲೋಟ
  • ಬ್ಯಾಡಗಿಮೆಣಸಿನಕಾಯಿ 4 6
  • ಜೀರಿಗೆ 1 ಚಮಚ
  • ಕೊತ್ತಂಬರಿಬೀಜ 2 ಚಮಚ
  • ಅರಿಶಿನ -ಅರ್ಧ ಚಮಚ
    ಮೇಲಿನ ಪದಾರ್ಥಗಳನ್ನು ಸೇರಿಸಿ ರುಬ್ಬಿಕೊಳ್ಳಿ.
  • ದಪ್ಪಅವಲಕ್ಕಿ -1 ಲೋಟ
  • ಉಪ್ಪು, ಖಾರಸೇವ್, ಈರುಳ್ಳಿ ಚಿಕ್ಕದಾಗಿ ಹೆಚ್ಚಿದ್ದು, ನಿಂಬೆರಸ, ಕೊಬ್ಬರಿಎಣ್ಣೆ, ಸಕ್ಕರೆ, ಕೊತ್ತಂಬರಿಸೊಪ್ಪು – ರುಚಿಗೆ ತಕ್ಕಷ್ಟು
    ವಿಧಾನ:
    ರುಬ್ಬಲಿಕ್ಕೆ ಕೊಟ್ಟ ಪದಾರ್ಥಗಳನ್ನು ಸೇರಿಸಿ ಹಸಿಯಾಗಿಯೇ ತರಿತರಿಯಾಗಿ ಒಣಪುಡಿ ಮಾಡಬೇಕು. ನೀರಿನಲ್ಲಿ ನೆನೆಸಿ ಹಿಂಡಿ ತೆಗೆದ ದಪ್ಪಅವಲಕ್ಕಿಗೆ ರುಬ್ಬಿದ ಒಣಮಸಾಲೆಪುಡಿ ಮತ್ತು ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲೆಸಬೇಕು.