Home ಜಿಲ್ಲೆ ಕುರುಗೋಡು: ಸರ್ಕಾರಿ ಜಾಗದಲ್ಲಿ ಇಸ್ಪೀಟ್ ಆಟಕ್ಕೆ ನಿರ್ಮಿಸಿದ್ದ ಶೆಡ್ ಡೆಮಾಲಿಷ್

ಕುರುಗೋಡು: ಸರ್ಕಾರಿ ಜಾಗದಲ್ಲಿ ಇಸ್ಪೀಟ್ ಆಟಕ್ಕೆ ನಿರ್ಮಿಸಿದ್ದ ಶೆಡ್ ಡೆಮಾಲಿಷ್

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ: ಸೆ,27- ಪತ್ರಕರ್ತ ಕೆ.ವೀರಭದ್ರಗೌಡ ಪುರಾತತ್ವ ವಸ್ತುಗಳ ಸಂಗ್ರಹಕ್ಕೆಂದು ಜಿಲ್ಲೆಯ ಕುರುಗೋಡು ಪಟ್ಟಣದ ಸರ್ವೇ ನಂ.675 ರ ಒಂದು ಎಕರೆ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ. ಅಲ್ಲಿ ಇಸ್ಪೀಟ್ ದಂಧೆ ನಡೆಸುತ್ತಿದ್ದರು. ಪೊಲೀಸರು ಮೊನ್ನೆ ರಾತ್ರಿ ದಾಳಿ ನಡೆಸಿ ಕೇಸು ದಾಖಲಿಸಿದ್ದರಿಂದ ಇಂದು ತಾಲೂಕು ಆಡಳಿತ ಆ ಅಕ್ರಮ ಶೆಡ್ ನ್ನು ಡಾಲಿಶ್ ಮಾಡಿತು.

ಪತ್ರಕರ್ತ ಕೆ.ವೀರಭದ್ರಗೌಡ ಸೇರಿದಂತೆ ಈ ಪ್ರಕರಣದಲ್ಲಿ 23 ಜನರ ವಿರುದ್ದ ಕುರುಗೋಡು ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಪುರಾತತ್ವ ಕುರುಹುಗಳ ವಸ್ತು ಸಂಗ್ರಹಾಲಯ ಮಾಡುವುದಾಗಿ ಶೆಡ್ ನಿರ್ಮಿಸಿ.ಅಲ್ಲಿ ರಾತ್ರಿ ವೇಳೆ ಇಸ್ಪೀಟ್ ಆಡಿಸುವ ದಂಧೆ ಮಾಡುತ್ತಿದ್ದುದರ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

ಕುರುಗೋಡಿನ ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ. ತಹಸೀಲ್ದಾರ್ ಕಚೇರಿ ಶಿರಸ್ತೇದಾರ್  ವಿಜಯಕುಮಾರ,  ಕಂದಾಯ ನಿರೀಕ್ಷಕ  ಮಲ್ಲಿಕಾರ್ಜುನ ಮತ್ತು  ಭದ್ರಯ್ಯ,

ಗ್ರಾಮಲೆಕ್ಕಾಧಿಕಾರಿ  ರಮೇಶ ಮತ್ತು  ನಾಗರಾಜ ಪೊಲೀಸ್ ಪೇದೆ  ಹನುಮೇಶ್ ಮೊದಲಾದವರು ಡೆಮಾಲಿಶ್ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಇನ್ನಾದರೂ ತಾಲೂಕು ಆಡಳಿತ ಮಾಧ್ಯಮದ ಹೆಸರಲ್ಲಿ ವಂಚನೆ ಮಾಡುತ್ತಿರುವ ಪತ್ರಕರ್ತರ ಇಂತಹ ದಂಧೆಗಳ ಮೇಲೆ ಅಗತ್ಯ ಕ್ರಮ ಜರುಗಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.