Home ಜಿಲ್ಲೆ ಕನ್ನಿಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಕತ್ತೆ ಮದುವೆ

ಕನ್ನಿಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಕತ್ತೆ ಮದುವೆ

ಸಂಜೆವಾಣಿ ವಾರ್ತೆ

 ಹಗರಿಬೊಮ್ಮನಹಳ್ಳಿ :ಜೂ.24 ತಾಲೂಕಿನ ಕನ್ನಿಹಳ್ಳಿ ಗ್ರಾಮದಲ್ಲಿ  ಮಳೆ ಇಲ್ಲದ ಕಾರಣಕ್ಕೆ ಗ್ರಾಮಸ್ಥರು ಹಾಗೂ ಊರಿನ ಹಿರಿಯರು ಸೇರಿ ಶುಕ್ರವಾರ ಕತ್ತೆ ಮದುವೆ ಮಾಡುವ ಮುಖಾಂತರ ಮಳೆರಾಯನ ಪ್ರಾರ್ಥನೆ ಮಾಡಿದರು.

 ಈ ವರ್ಷ ಮುಂಗಾರು ಸಂಪೂರ್ಣ ಕೈ ಕೊಟ್ಟಿದ್ದು ಬೀಜ ಗೊಬ್ಬರ ಸಂಗ್ರಹಿಸಿ ಮನೆಯಲ್ಲಿ ಇಟ್ಟುಕೊಂಡಿರುವ  ರೈತರು ಮಳೆರಾಯನ ಕೃಪೆಗಾಗಿ ಹಲವಾರು ಪ್ರಾರ್ಥನೆ ಭಜನೆ ಮಾಡುವ ಮೂಲಕ ದೇವರಿಗೆ ಮೊರೆ ಹೋಗಿದ್ದಾರೆ. ಆದರೂ ಮಳೆರಾಯ ಸಂಪೂರ್ಣ ಮುನಿಸಿಕೊಂಡಿದ್ದು, ಈ ವರ್ಷ ಬರಗಾಲದ ಮುನ್ಸೂಚನೆ ಸೂಚಿಸುವಂತೆ ಕಾಣುತ್ತಿದೆ. ಹಳೆಯ ಸಂಪ್ರದಾಯ ಕತ್ತೆಗಳಿಗೆ ಮದುವೆ ಮಾಡಿದರೆ ಮಳೆ ಬರುತ್ತೆ ಎಂಬ ನಂಬಿಕೆಯ ಮೇಲೆ ಗ್ರಾಮಸ್ಥರು ಕತ್ತೆ ಮದುವೆ ಮಾಡುವ ಮೂಲಕ ನೆರವೇರಿಸಿದರು.

 ಈ ಸಂದರ್ಭದಲ್ಲಿ ಬಣಕಾರ ಮಹಾಬಲೇಶ್ವರಪ್ಪ .ಕೊಟ್ರಗೌಡ ಅಂಜಿನಪ್ಪ ಮಲ್ಲಿಕಾರ್ಜುನ ಕೊಟ್ರಸ್ವಾಮಿ ಹಾಗೂ ಊರಿನ ಎಲ್ಲಾ ದೈವಸ್ಥರು ಗಳು ಸೇರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.