Home ಜಿಲ್ಲೆ ಕಲಬುರಗಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ಡಾ. ಮುಸ್ತಫ ಅಲ್ ಹುಸ್ಸೇನಿ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ಡಾ. ಮುಸ್ತಫ ಅಲ್ ಹುಸ್ಸೇನಿ

ಕಲಬುರಗಿ: ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಾವು ಅದನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.
ನಮ್ಮ ವಿವಿಯ ಆವರಣದಲ್ಲಿ ಹಸಿರು ಕಂಗೋಳಿಸುವಂತೆ ಆಗಬೇಕು ಎಂದು ಕೆಬಿಎನ್ ವಿವಿಯ ಕ್ಯಾಂಪಸ ನಿರ್ದೇಶಕ ಡಾ ಮುಸ್ತಫಾ ಅಲ್ ಹುಸ್ಸೇನಿ ನುಡಿದರು. ಅವರು ಶುಕ್ರವಾರ ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದಲ್ಲಿ ಸಸಿ ನೆಟ್ಟು ಮಾತನಾಡಿದರು.
ಕೆಬಿಎನ್ ವಿಶ್ವವಿದ್ಯಾಲಯ ತನ್ನ ಕ್ಯಾಂಪಸ್‍ನಾದ್ಯಂತ 300 ಸಸಿಗಳನ್ನು ನೆಡುವ ಅಭಿಯಾನ ಬಹಳ ಮಹತ್ವದಾದದ್ದು ಎಂದು ಅಭಿಪ್ರಾಯ ಪಟ್ಟರು.
ವಿಶ್ವವಿದ್ಯಾಲಯದ ಕ್ಯಾಂಪಸ್‍ನಾದ್ಯಂತ ಟರ್ಮಿನಾಲಿಯಾ ಮಂಟಾಲಿ (Terminalia mantaly)), ಕ್ಯಾಸಿಯಾ ಫಿಸ್ಟುಲಾ ಕಕ್ಕೆ ಮರ / Golden Shower Tree), ಟ್ಯಾಬೆಬುಯಿಯಾ ರೋಸಿಯಾ (Pink Poui) ಮತ್ತು ಜಕರಂದ ಮಿಮೋಸಿಫೆÇೀಲಿಯಾ (Jacaranda mimosifolia) ಸೇರಿದಂತೆ ವಿವಿಧ ಜಾತಿಯ ಮರಗಳು ಮತ್ತು ಅಲಂಕಾರಿಕ ಸಸಿಗಳನ್ನು ನೆಡಲಾಗುತ್ತಿದೆ.
ಪರಿಸರ ಸಂರಕ್ಷಣೆ, ಹಸಿರು ಹೊದಿಕೆಯನ್ನು ಹೆಚ್ಚಿಸುವುದು ಹಾಗೂ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಮತ್ತು ಸಂದರ್ಶಕರಿಗೆ ಆರೋಗ್ಯಕರ ಕ್ಯಾಂಪಸ್ ವಾತಾವರಣವನ್ನು ನಿರ್ಮಿಸುವ ವಿಶ್ವವಿದ್ಯಾಲಯದ ಬದ್ಧತೆಯನ್ನು ಈ ಉಪಕ್ರಮವು ಪ್ರತಿಬಿಂಬಿಸುತ್ತದೆ.
ಕಾರ್ಯಕ್ರಮದಲ್ಲಿ ಕೆಬಿಎನ್ ವಿವಿ ಸಹ-ಕುಲಪತಿ ಡಾ. ಅಶ್ಫಾಕ್ ಅಹ್ಮದ್, ಕುಲಸಚಿವ ಮಿರ್ ವಿಲಾಯತ್ ಅಲಿ,ಐ ಕ್ಯೂ ಎ ಸಿ ನಿರ್ದೇಶಕ ಡಾ ಅಬ್ದುಲ್ ಬಷೀರ್, ಸಮಾಜ ವಿಜ್ಞಾನ, ಭಾಷಾ, ಕಲಾ ಮಾನವ ನಿಕಾಯದ್ ಡೀನ್ ಪೆÇ್ರೀ ನಿಶಾತ್ ಆರೀಫ ಹುಸ್ಸೇನಿ, ವಾಣಿಜ್ಯ ಡೀನ್ ಡಾ ಶ್ರೀನಿವಾಸ್, ಇಂಜಿನಿಯರ್ ಡೀನ್ ಡಾ ಸುಭಾಷ್ ಕಮಲ್, ಕೆಬಿಎನ್ ಹೌಸ್ ಆಫ್ ಸ್ಪೋಟ್ರ್ಸ್ ಕಾರ್ಯದರ್ಶಿ ಸೈಯದ್ ತಕಿಯುದ್ದೀನ್, ಅಕ್ಬರ್ ಪಟೇಲ್ ಹಾಗೂ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.