Home Uncategorized ಎಟಿಎಸ್‍ನಿಂದ ಐವರು ಉಗ್ರರ ಸೆರೆ

ಎಟಿಎಸ್‍ನಿಂದ ಐವರು ಉಗ್ರರ ಸೆರೆ

ಅಹಮದಾಬಾದ್, ಜು.17- ರಾಜ್ಯದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ – ಜೆಇಎಂ ಮಾಡ್ಯೂಲ್‍ನ ಭಾಗವೆಂದು ಶಂಕಿಸಲಾದ ಐವರನ್ನು ಜನರನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ


ಗುಜರಾತ್ ಎಟಿಎಸ್ ಮತ್ತೆ ಐವರನ್ನು ಬಂಧಿಸಿದ್ದು ತೀವ್ರ ವಿಚಾರಣೆ ನಡೆಸುತ್ತಿದೆ. ಸ್ಫೋಟಕಗಳನ್ನು ಪರೀಕ್ಷಿಸುತ್ತಿದೆ ಎಂದು ಆರೋಪಿಸಿದೆ.
“ಈ ಆರೋಪಿಗಳು ಪಾಕಿಸ್ತಾನಿ ನಿರ್ವಾಹಕರಾದ ಅಬ್ದುಲ್ಲಾ ಮತ್ತು ಮೊಹಮ್ಮದ್ ಉಮರ್ ಅವರೊಂದಿಗೆ ಸಂಪರ್ಕದಲ್ಲಿದ್ದರು” ಎಂದು ಎಟಿಎಸ್ ಆರೋಪಿಸಿದೆ
ಬಂಧಿತರನ್ನು ಬಿಲಾಲ್ ಅಬಿದ್ ಶೇರಾ, ಎಂಡಿ ಅಯ್ಯುಬ್ ಖಡಿವಾಲ್, ಎಂಡಿ ಶಾಫಿ ಮುಖಿ, ಎಂಡಿ ಹಸನ್ ಕರಡಿಯಾ ಮತ್ತು ಎಂಡಿ ಅಯೂಬ್ ಸುನಸಾರ ಎಂದು ಗುರುತಿಸಲಾಗಿದೆ.


ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‍ನ ಸದಸ್ಯರಾಗಿದ್ದರು ಮತ್ತು ಸ್ಫೋಟಕ ಸಾಧನಗಳ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು” ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಇದೇ ಪ್ರಕರಣದಲ್ಲಿ ಎಂಟು ಜನರನ್ನು ಎಟಿಎಸ್ ಬಂಧಿಸಿತ್ತು. ದೇಶದ ಜನರನ್ನು ವಿವಿಧ ಮಾಧ್ಯಮಗಳ ಮೂಲಕ ಸಂಪರ್ಕಿಸಿ ಗುಜರಾತ್‍ನಲ್ಲಿ ಜೆಇಎಂ ಪರವಾಗಿ ಸಕ್ರಿಯ ಜಾಲವನ್ನು ಸ್ಥಾಪಿಸಲು ಮತ್ತು ರಾಷ್ಟ್ರವಿರೋಧಿ ಕೃತ್ಯಗಳು ಮತ್ತು ಭಯೋತ್ಪಾದಕ ಪಿತೂರಿಗಳನ್ನು ಪ್ರಚಾರ ಮಾಡುತ್ತಿದ್ದರು” ಎಂದು ಎಟಿಎಸ್ ಆರೋಪಿಸಿದೆ.


ಎಟಿಎಸ್ ಅಧಿಕಾರಿಗಳ ಪ್ರಕಾರ, ಶಂಕಿತರು “ದಾರುಲ್ ಇಸ್ಲಾಂ ಗುಜರಾತ್ ಜೈಶ್-ಎ-ಮೊಹಮ್ಮದ್ ಎಂಬ ಹೆಸರಿನ ಸಂಘಟನೆ ಸ್ಥಾಪಿಸಿದ್ದರು, ಅದರ ಮೂಲಕ ಅವರು ಪ್ರದೇಶಗಳಲ್ಲಿರುವ ಇತರ ವ್ಯಕ್ತಿಗಳಿಗೆ ಸೇರಲು ದಾವತ್ ವಿಸ್ತರಿಸಲು” ಕೆಲಸ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಗಳು ಪಾಕಿಸ್ತಾನಿ ನಿರ್ವಾಹಕರಾದ ಅಬ್ದುಲ್ಲಾ ಮತ್ತು ಮೊಹಮ್ಮದ್ ಉಮರ್ ಅವರೊಂದಿಗೆ ಸಂಪರ್ಕದಲ್ಲಿದ್ದರು” ಎಂದು ಎಟಿಎಸ್ ಆರೋಪಿಸಿದೆ