ನಗರದ ಕಾಕ್ಸ್‌ಟೌನ್‌ನ ಎನ್.ಸಿ. ಕಾಲೋನಿಯಲ್ಲಿರುವ ಶತಮಾನಗಳಷ್ಟು ಹಳೆಯದಾದ ತೆರೆದ ಬಾವಿಯನ್ನು ಪುನರುಜ್ಜೀವನಗೊಳಿಸಿ ಇಲ್ಲಿನ ನಿವಾಸಿಗಳಿಗೆ ಸಮರ್ಪಿಸಲಾಯಿತು. ಈ ಯೋಜನೆಯನ್ನು ಐಟಿಸಿ ಇನ್ಫೋಟೆಕ್ ಮತ್ತು ಐಕೇರ್, ಬಯೋಮ್ ಎನ್ವಾರಾನ್ಮೆಂಟಲ್ ಟ್ರಸ್ಟ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಆರೋಗ್ಯ ಮತ್ತು ಶಿಕ್ಷಣ ಪ್ರತಿಷ್ಠಾನ ಸ್ಥಾಪಕ ಡಾ. ಆನಂದ್ ಅವರ ನೇತೃತ್ವದಲ್ಲಿ ಪುನರುಜ್ಜೀವನಗೊಳಿಸಲಾಗಿದೆ. ಈ ಬಾವಿಯನ್ನು ವೆಂಕಟೇಶ್.ಪಿ. ಮತ್ತು ಅವರ ತಂಡವು ಯಶಸ್ವಿಯಾಗಿ ತೋಡಿದ್ದಾರೆ.