
ಕಲಬುರಗಿ,ಜು.17-ಅಶ್ಲೀಲ ವಿಡಿಯೋ ಶೇರ್ ಮಾಡುವುದರ ಮೂಲಕ ಅಪರಾಧ ಕೃತ್ಯ ವೆಸಗಿದ ಅಪ್ರಾಪ್ತ ಬಾಲಕನ ವಿರುದ್ಧ ಇಲ್ಲಿನ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕನೆ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ 46 ಸೆಕೆಂಡುಗಳು ಅಶ್ಲೀಲ ವಿಡಿಯೋ ಶೇರ್ ಮಾಡಿದ್ದು, ಈ ಸಂಬಂಧ ಆತನ ವಿರುದ್ಧ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಕಾರು ಹಿಂಬಾಗಿಲು ಕಿಟಕಿ ಒಡೆದು ಕಳವು
ನಗರದ ರಂಗ ಮಂದಿರ ಹತ್ತಿರವಿರುವ ಹೋಟೆಲ್ ಬಳಿ ಕಾರು ನಿಲ್ಲಿಸಿ ಊಟ ಮಾಡಲು ಹೋದ ವೇಳೆ ಕಾರಿನ ಹಿಂಭಾಗದ ಕಿಟಕಿ ಗ್ಲಾಸ್ ಒಡೆದು 20 ಸಾವಿರ ರೂ.ಮೌಲ್ಯದ ರಿಯಲ್ ಮೀ ಪ್ಯಾಡ್, 2,200 ರೂ.ಮೌಲ್ಯದ ಬ್ಲೂಟೂತ್, 1600 ರೂ.ಮೌಲ್ಯದ ಸ್ಪೀಕರ್, 1500 ರೂ.ಗಳಿದ್ದ ಪರ್ಸ್, ಎಟಿಎಂ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು 20 ಸಾವಿರ ರೂ.ಮೌಲ್ಯದ ಪವರ್ ಬ್ಯಾಂಕ್ ಕಳವು ಮಾಡಲಾಗಿದೆ ಎಂದು ನಗರದ ಎಸ್.ಬಿ.ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಹೀತೇಶಕುಮಾರ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಇವರು ಗೆಳೆಯನ ಜೊತೆ ಕಾರಿನಲ್ಲಿ ರಂಗ ಮಂದಿರ ಹತ್ತಿರವಿರುವ ಹೋಟೆಲ್‍ಗೆ ಊಟಕ್ಕೆ ಹೋಗಿದ್ದರು. ಊಟ ಮುಗಿಸಿಕೊಂಡು ಮರಳಿ ಬರುವುದರೊಳಗೆ ಕಳ್ಳರು ಈ ಕೃತ್ಯವೆಸಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.






























