
ನಂಜನಗೂಡು ಕಪಿಲಾ ನದಿ ತೀರದಲ್ಲಿರುವ ಶ್ರೀ ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೊದಲನೇ ಆಷಾಢ ಶುಕ್ರವಾರದ ಪ್ರಯುಕ್ತ ಅಮ್ಮನವರಿಗೆ ವಿಶೇಷ ಅಲಂಕಾರ ಮಹಾಮಂಗಳಾರತಿ ಮಾಡಲಾಯಿತು ಬಂದಿರುವ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆದರು. ಭಕ್ತಾದಿಗಳು ದೀಪದ ಸೇವೆ ದೂಪದ ಸೇವೆ ಭಕ್ತಿ ಪೂರ್ವವಾಗಿ ನೆರವೇರಿಸಿದರು. ಶ್ರೀಕಂಠೇಶ್ವರ ಕಾರ್ಯನಿರ್ವಾಧಿಕಾರಿ ಕೃಷ್ಣರವರು ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಸಕಲ ಸಿದ್ಧತೆ ಮಾಡಿಕೊಟ್ಟಿದ್ದಾರೆ ಯಾವುದೇ ಅಡೆ-ತಡೆ ಇಲ್ಲದೆ ಭಕ್ತಾದಿಗಳು ತಾಯಿಯ ದರ್ಶನ ಪಡೆದರು.






























