
ಸಂಜೆವಾಣಿ ನ್ಯೂಸ್
ಮೈಸೂರು ಆ.08:- ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಆಗಸ್ಟ್ 13 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಅನ್ನು ಮುಂದೂಡುವುದು ಸೂಕ್ತ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕ ನೆಲ ಜಲ ಸಂರಕ್ಷಣಾ ಸಮಿತಿ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಇಂದು ನಡೆದ ಕರ್ನಾಟಕ ನೆಲ ಜಲ ಪರಿಸರ ಸಂರಕ್ಷಣಾ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ಕಳೆದ ಒಂದು ವಾರದಲ್ಲಿ ಕಬಿನಿಯಿಂದ ಕನಿಷ್ಠ 15 ಖಿಒಅ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ಈಗಲೂ ಪ್ರತಿದಿನ 2 ಖಿಒಅ ಹೆಚ್ಚುವರಿ ನೀರು ಬಿಡಲಾಗುತ್ತಿದೆ. ಸಿಡಬ್ಲ್ಯುಎಂಎ ಆದೇಶದಂತೆ 15 ದಿನದಲ್ಲಿ 4.5 ಖಿಒಅ ಬಿಡಬೇಕಿದ್ದರೂ ಅದಕ್ಕಿಂತ ಹೆಚ್ಚು ನೀರು ಹರಿಸಲಾಗಿದೆ ಎಂದರು.
ಕೆ.ಆರ್.ಎಸ್ ಜಲಾಶಯದಲ್ಲಿ ನೀರು 106 ಅಡಿಗೆ ಏರಿಕೆಯಾಗಿದ್ದು, ಕಾಲುವೆಗಳಿಗೆ ನೀರು ಹರಿಸಲಾಗಿದೆ. ರೈತರು ವ್ಯವಸಾಯ ಚಟುವಟಿಕೆಯಲ್ಲಿ ತೊಡಗಿದ್ದಾರೆ. ರೈತರ ಮತ್ತು ಜನರ ಹಿತಕ್ಕಾಗಿ ಮಾಡುವ ಬಂದ್ ಅನ್ನು ಸದ್ಯಕ್ಕೆ ಮುಂದೂಡುವುದು ಸೂಕ್ತ. ಈ ಬಗ್ಗೆ ಚಳುವಳಿಗಾರರು ವಿಶಾಲ ತಳದಲ್ಲಿ ಚಿಂತನೆ ನಡೆಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಎಂದು ಹೇಳಿದರು.
ಮೇಕೆದಾಟು, ಬಾಗಿನ ಪೂಜೆಗೆ ಒತ್ತಾಯ:
ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಸೌಹಾರ್ದಯುತವಾಗಿ ಮಾತುಕತೆ ನಡೆಸಬೇಕು. ಎರಡೂ ರಾಜ್ಯದ ಪರಿಣಿತರು ಹಾಗೂ ರೈತ ಮುಖಂಡರನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಬೇಕು ಎಂದು ಸಲಹೆ ನೀಡಿದರು.
ಕಾವೇರಿ ಸಂಕಷ್ಟ ಕಾಲದಲ್ಲಿ ಜೀವಕಳೆ ನೀಡಿರುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡಲೇ ಬಾಗಿನ ಪೂಜೆ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ರೈತರೇ ಈ ಕಾರ್ಯ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಬಿನಿ, ಹೇಮಾವತಿ, ಹಾರಂಗಿ, ಕೆ.ಆರ್.ಎಸ್ ಅಚ್ಚುಕಟ್ಟು ನಾಲೆಗಳಿಗೆ ರೈತರ ವ್ಯವಸಾಯಕ್ಕೆ ಕೂಡಲೇ ನೀರು ಹರಿಸಬೇಕು. ಕಾವೇರಿ ಹೋರಾಟ ಮಾಡಿದ ಮುಖಂಡರ ಮೇಲಿರುವ ಎಲ್ಲಾ ಪೆÇಲೀಸ್ ಮೊಕದ್ದಮೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಬಂದ್ ಮಾಡುವ ಸಮಯವಲ್ಲ: ಚಂದ್ರು
ಸಭೆಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಹಾಗೂ ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು, “ಬಂದ್ ಆಚರಣೆ ಮಾಡುವ ಸಂದರ್ಭ ಇದಲ್ಲ. ನಮ್ಮ ಜನರಿಗೆ ನಾವೇ ತೊಂದರೆ ಕೊಡುವುದು ಸೂಕ್ತವಲ್ಲ. ನಾಡಿನ ಹಿತಕ್ಕಾಗಿ ಎಲ್ಲಾ ಪಕ್ಷಗಳ ಎಂಎಲ್‍ಎ, ಎಂಪಿಗಳು ಒಂದಾಗಿ ಮೇಕೆದಾಟು, ಎತ್ತಿನಹೊಳೆ, ಮಹದಾಯಿ ಹೋರಾಟ ಮಾಡಬೇಕು” ಎಂದು ಹೇಳಿದರು.
ಸಭೆಯಲ್ಲಿ ಜಿ. ನಾರಾಯಣ ಕುಮಾರ್, ಗುರುದೇವ ನಾರಾಯಣ ಕುಮಾರ್, ಮಂಡ್ಯ ರೈತ ಸಂಘದ ಮಂಜೇಶ್ ಗೌಡ, ಹತ್ತಳ್ಳಿ ದೇವರಾಜ್, ಗೌರಿ ಶಂಕರ್ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.

































