Home ಜಿಲ್ಲೆ ಮಂಗಳೂರು ಅಡಿಕೆ, ಕಾಳುಮೆಣಸು: ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಜಾರಿ

ಅಡಿಕೆ, ಕಾಳುಮೆಣಸು: ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಜಾರಿ

ಮಂಗಳೂರು-ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಕೊಡುವ ನಿಟ್ಟಿನಲ್ಲಿ ೨೦೨೬-೨೭ ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ. ಸದರಿ ಯೋಜನೆಯಡಿ ನೋಂದಾವಣೆಗೊಳ್ಳಲು ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದ್ದು, ಸಾಲ ಪಡೆದ/ಪಡೆಯದ ರೈತರ ನೋಂದಣಿಗೆ ಅಂತಿಮ ದಿನಾಂಕ ಆ.೧೭ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಈವರೆಗೆ ಯೋಜನೆಯಡಿ ನೋಂದಾವಣೆಗೊಳ್ಳದ ರೈತರು ತುರ್ತಾಗಿ ಸದರಿ ಯೋಜನೆಯಡಿ ನೋಂದಾವಣೆಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಬೆಳೆಸಾಲ ಪಡೆದ ರೈತರು ಬೆಳೆಸಾಲ ಹೊಂದಿರುವ ಬ್ಯಾಂಕ್‌ನಲ್ಲಿ ಹಾಗೂ ಬೆಳೆಸಾಲ ಹೊಂದಿಲ್ಲದ ರೈತರು ತಮ್ಮ ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್‌ಗಳಲ್ಲಿ ಸದರಿ ಯೋಜನೆಯಡಿ ನೋಂದಾವಣೆಗೊಳ್ಳ ಬಹುದಾಗಿರುತ್ತದೆ ಹಾಗೂ ಸಾಮಾನ್ಯ ಸೇವಾ ಕೇಂದ್ರ (ಅSಅ) ಮತ್ತು ಗ್ರಾಮ ಒನ್‌ಗಳ ಮೂಲಕವೂ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಡಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ ಪ್ರತಿ ಹೆಕ್ಟೇರಿಗೆ ಕ್ರಮವಾಗಿ ರೂ.೬,೪೦೦ ಹಾಗೂ ರೂ. ೨೩೫೦ ಗಳಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದರಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಮಾ ಸಂಸ್ಥೆಯಾಗಿ ಪ್ರಸಕ್ತ ಸಾಲಿಗೆ ಖಿಂಖಿಂ ಂIಉ ಸಂಸ್ಥೆಯು ಆಯ್ಕೆಯಾಗಿದೆ.
ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರತಿನಿಧಿ ಅಥವಾ ತೋಟಗಾರಿಕೆ ಇಲಾಖಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಐ.ಕೆ. ದೊಡ್ಡಮನಿ, ತೋಟಗಾರಿಕೆ ಜಂಟಿನಿರ್ದೇಶಕರು, ಜಿ.ಪಂ., ದ.ಕ ಜಿಲ್ಲೆ, ಮೊ.ಸಂಖ್ಯೆ: ೯೪೪೮೯೯೯೨೨೬
ಪ್ರವೀಣ ಕೆ., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಮಂಗಳೂರು ಮೊ.ಸಂಖ್ಯೆ: ೯೪೪೯೨೫೮೨೦೪ ಜೋ ಪ್ರಧೀಪ್ ಡಿಸೋಜ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬಂಟ್ವಾಳ ಮೊ.ಸಂಖ್ಯೆ: ೯೪೪೮೨೦೬೩೯೩ ರೇಖಾ ಎ., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಪುತ್ತೂರು, ಮೊ.ಸಂಖ್ಯೆ: ೯೭೩೧೮೫೪೫೨೭ ಪ್ರಮೋದ್ ಸಿ.ಎಂ., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಸುಳ್ಯ, ಮೊ.ಸಂಖ್ಯೆ: ೯೪೮೩೧೧೦೬೨೧, ಚಂದ್ರಶೇಖರ ಕೆ.ಎಸ್., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬೆಳ್ತಂಗಡಿ, ಮೊ.ಸಂಖ್ಯೆ: ೯೪೪೮೩೩೬೮೬೩ ಹಾಗೂ ಸಂಜಯ್ ಪೂಜಾರ್ ಖಿಂಖಿಂ ಂIಉ ಸಂಸ್ಥೆಯ ಪ್ರತಿನಿಧಿ ಮೊ.ಸಂಖ್ಯೆ: ೮೮೦೯೧೪೦೯೮೩ ಇವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ವಿಟ್ ಇಂಡಿಯಾ ಚಳುವಳಿ: ಗೌರವಾರ್ಪಣೆ
ಮಂಗಳೂರು- ಕ್ವಿಟ್ ಇಂಡಿಯಾ ಚಳುವಳಿಯ ವ?ರ್ಚರಣೆ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರ್ ವಿಠ್ಠಲ್ ಕಿಣಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಭಾನುವಾರ ಸನ್ಮಾನಿಸಲಾಯಿತು.
ನಗರದ ಅಳಕೆಯಲ್ಲಿರುವ ಅವರ ನಿವಾಸಕ್ಕೆ ಅಪರ ಜಿಲ್ಲಾಧಿಕಾರಿ ಕೆ. ರಾಜು ಅವರು ಭೇಟಿ ನೀಡಿ ಶಾಲು, ಫಲಪುಷ್ಪವನ್ನು ಅರ್ಪಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಂಗಳೂರು ತಹಸಿಲ್ದಾರ್ ರಮೇಶ್ ಬಾಬು, ಮುಜರಾಯಿ ತಹಶೀಲ್ದಾರ್ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.