
ಕಲಬುರಗಿ: ಸಿಬ್ಬಂದಿಗಳಿಗೆ ಅವಾಚ್ಯಶಬ್ದ ಬಳಸಿ ಮಾನಸಿಕ ಹಿಂಸೆ ನೀಡುವ ವರ್ತನೆಯ ಆರೋಪ ಹೊತ್ತಿರುವ ಕಲಬುರಗಿ ಮಹಾನಗರ ಪಾಲಿಕೆಯ ವಲಯ ಕಚೇರಿ 2 ರ ಆಯುಕ್ತ ಪ್ರಬುದ್ಧ ಕಾಂಬಳೆ ಅವರನ್ನು ಪಾಲಿಕೆಯಿಂದ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಹಾಗೂ ನೌಕರರ ಸಂಘದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ಸುನೀಲ ವಂಟಿ,ಪ್ರಹ್ಲಾದ ಕುಲಕರ್ಣಿ,ಶ್ರೀಶೈಲ್,ಬಾಲಾಜಿ ಸೇರಿದಂತೆ ಹಲವರು ಪಾಲ್ಗೊಂಡರು.






























