
ಮಹಾತ್ಮ ಗಾಂಧೀಜಿಯವರ ಅಹಿಂಸಾ ಹೋರಾಟದಿಂದಲೇ ನಮಗೆ ಸ್ವಾತಂತ್ರ್ಯ ದೊರೆತಿದೆ ಎನ್ನುವುದು ಅರ್ಧ ಸತ್ಯ , ಅನೇಕ ಕ್ರಾಂತಿಕಾರಿಗಳ ತ್ಯಾಗ ಬಲಿದಾನದಿಂದ ನಾವು ಬ್ರಿಟೀಷರ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾಗುವಂತಾಗಿದೆ ಎನ್ನುವು ಅಷ್ಟೇ ಸತ್ಯ, ದೇಶಸ್ಕೋಸ್ಕರ ಬಲಿದಾನ ಗೈದ ಕ್ರಾಂತಿಕಾರಿ ಹೋರಾಟಗಾರರನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸುಲೋಚನಾ ಜಿ.ಕೆ.ಭಟ್ ಹೇಳಿದರು.
ಅವರು ಬುಧವಾರ ಸುಳ್ಯ ಮಂಡಲ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸ್ವಾತಂತ್ರೊ?ಯತ್ಸವದ ಅಂಗವಾಗಿ ಕಡಬದಲ್ಲಿ ನಡೆದ ತಿರಂಗ ಯಾತ್ರೆಯ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಿದರು.
ದೇಶಕ್ಕೋಸ್ಕರ ಜೀವನವನ್ನೇ ಮುಡುಪಗಿಟ್ಟು ಅಂಡಮಾನ್ನಲ್ಲಿ ಕರಿನೀರ ಶಿಕ್ಷೆ ಅನುಭವಿಸಿದ ವೀರ ಸಾವರರ್ಕರ್ , ನೇಣಿಗೆ ಕೊರಳೊಡ್ಡಿದ ಭಗತ್ ಸಿಂಗ್ರಂತಹ ಅನೇಕ ಕ್ರಾಂತಿಕಾರಿ ಹೋರಾಟಗಾರರನ್ನು ಬ್ರಿಟೀಷರು ಯಾವ ರೀತಿ ನಡೆಸಿಕೊಂಡಿದ್ದಾರೆ ಎನ್ನುವುದನ್ನು ನಾವು ಅರಿತುಕೊಂಡು ಅವರಿಗೆ ಗೌರವ ನೀಡುವ ಕಾರ್ಯ ಮಾಡದಿದ್ದರೆ ನಾವು ಪಡೆದ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ, ಹಿಂದೆ ಯವಜನತೆಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ತಮ್ಮ ರಾಷ್ಟ್ರ ಪ್ರೇಮವನ್ನು ಮೆರೆಯುತ್ತಿದ್ದರು. ಬಳಿಕ ಈ ದೇಶವನ್ನಾಳಿದವರು ಮೆಖಾಲೆ ಶಿಕ್ಷಣವಮನ್ನು ಹೇರಿ ಯುವಕರಲ್ಲಿ ರಾಷ್ಟ್ರ ಭಕ್ತಿಯನ್ನು ಉದ್ದೀಪಗೊಳಿಸು ಕೆಲಸ ಮಾಡಿಲ್ಲ. ಇಂದಿನ ಯುವಕರು ನರೇಂದ್ರ ಮೋದಿಯವರ ಸ್ವಾಭಿಮಾನಿ, ವಿಕಸಿತ ಭಾರತ ಕಲ್ಪನೆಯನ್ನು ಸಾಕಾರಗೊಳಿಸಿ ರಾಷ್ಟ್ರ ಕಟ್ಟುವ ಕಾರ್ಯ ಮಾಡಬೇಕು ಎಂದು ಸುಲೋಚನ ಭಟ್ ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ತಿರಂಗ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ ಇವತ್ತು ನಮ್ಮ ದೇಶಕ್ಕೆ ಒಬ್ಬ ಒಳ್ಳೆಯ ರಾಷ್ಟ್ರ ಭಕ್ತ ಸಮರ್ಥ ಪ್ರಧಾನಮಂತ್ರಿ ಸಿಕ್ಕಿದ್ದಾರೆ. ಪ್ರದಾನಿ ನರೇಂದ್ರ ಮೋದಿಯವರು ರಾಷ್ಟ್ರವನ್ನು ಇಡೀ ವಿಶ್ವ ತಿರುಗಿ ನೋಡುವಂತೆ ಮಾಡಿದ್ದಾರೆ. ನಾವು ಅವರಿಗೆ ಬೆಂಬಲವಾಗಿ ನಿಂತು ಯುವ ಜನಾಂಗವನ್ನು ದೇಶದ ಆಸ್ತಿಯನ್ನಾಗಿ ಮಾಡುವಲ್ಲಿ ಶ್ರಮಿಸಬೇಕು, ಯುವ ಸಮುದಾಯವನ್ನು ಒಂದಷ್ಟು ಜನ ದೇಶದಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ದೇಶದ ಅನ್ನ ತಿಂದು, ನೀರು ಕುಡಿದು ದೇಶಕ್ಕೆ ದ್ರೋಹ ಬಗೆಯುವ ಜನಗಳನ್ನು ನಿರ್ಮೂಲನೆ ಮಡುವ ದೃಷ್ಠಿಯಿಂದ ಯುವ ಸಮುದಯವನ್ನು ಗಟ್ಟಿಗೊಳಿಸಲಬೇಕಾಗಿದೆ, ಅದಕ್ಕೊಸ್ಕರ ತಿರಗ ಯಾತ್ರೆಂiನ್ನು ನಡೆಸುತ್ತಿದ್ದೇವೆ ಎಂದರು.
ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಬಿಜಪಿ ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ಹರೀಶ್ ಕಂಜಿಪಿಲಿ, ರಾಕೇಶ್ ರೈ ಕೆಡೆಂಜಿ, ಆಶಾ ತಿಮ್ಮಪ್ಪ ಗೌಡ, ಪುಲಸ್ತಾ?ಯ ರೈ, ವಿನಯ ಕಂದಡ್ಕ, ಗಣೇಶ್ ಉದನಡ್ಕ, ಇಂದಿರಾ ಬಿ.ಕೆ., ತೇಜಸ್ವಿನಿ ಕಟ್ಟಪುಣಿ, ಶ್ರೀ ಕೃಷ್ಣ ಎಂ.ಆರ್., ವಾಡ್ಯಪ್ಪ ಗೌಡ ಎರ್ಮಾಯಿಲ್, ಪುಷ್ಪಾ ಮೇದಪ್ಪ, , ಅಶೋಕ್ ಕುಮಾರ್ ಪಿ., ದಯಾನಂದ ಗೌಡ ಪೊಯ್ಯೆತ್ತಡ್ಡ, ಶ್ರೀಕಾಂತ್ ಮಾವಿನಕಟ್ಟೆ, ಗಂಗಾಧರ ಪೆರಿಯಡ್ಕ, ಮದುಸೂಧನ ಕೊಂಬಾರು, ರವಿಪ್ರಸಾದ್ ಶೆಟ್ಟಿ, ರಾಮಚಂದ್ರ ನಾಯ್ಕ ಏಣಿತಡ್ಕ, ಶಶಿಕಲಾ ನೀರಬಿದ್ರೆ, ಗುಣವತಿ, ಫಯಾಜ್ ಕೆನರಾ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ಸ್ವಾಗತಿಸಿದರು. ಕಡಬ ಶಕ್ತಿಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್.ಕೆ.ವಂದಿಸಿದರು. ಕಡಬ ಎ.ಪಿ.ಎಂ.ಸಿ ಕಟ್ಟಡದ ಬಿಯಿಂದ ಹೊರಟು, ಪೇಟೆಯಲ್ಲಿ ಸಂಚರಿಸಿ, ಕಡಬ ಸಿಎ ಬ್ಯಾಂಕ್ ಕಟ್ಟಡದ ಬಳಿ ಸಮಾಪನಗೊಂಡು ಸಭೆ ನಡೆಯಿತು.

































