
ಕಲಬುರಗಿ: ಒಳ ಮೀಸಲಾತಿ ಮಾನದಂಡಗಳನ್ನು ಮರುಪರಿಶೀಲಿಸಬೇಕು. ಎಲ್ಲ 101 ಸಮುದಾಯಗಳ ಜನರಿಗೆ ಸಮಾನ ಹಕ್ಕು ಹಾಗೂ ಉದ್ಯೋಗ ಅವಕಾಶಗಳು ಸಿಗಬೇಕು ಎಂದು ಆಗ್ರಹಿಸಿ ಇಂದು ಜೂಡೋ ಬಂಜಾರಾ ಫೌಂಡೇಷನ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಡಾ.ಸುಭಾಷಚಂದ್ರ ರಾಠೋಡ,ಖೇಮಸಿಂಗ್ ರಾಠೋಡ,ಶಾಮರಾವ ಪವಾರ,ವಿನೋದ ಚವ್ಹಾಣ,ಚಂದು ಜಾಧವ,ಕೃಷ್ಣಪ್ಪ ಕಲದೇವರು,ರಾಜು ಪವಾರ್ ಸೇರಿದಂತೆ ಹಲವರು ಪಾಲ್ಗೊಂಡರು.






























