ಕಲಬುರಗಿ: ನಗರದ ವಿವಿಧ ಬಡಾವಣೆಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ ನಗರ ಮಂಡಳಿ ವತಿಯಿಂದ ಪಾದಯಾತ್ರೆ ನಡೆಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ.ಮಹೇಶಕುಮಾರ ರಾಠೋಡ್, ಮುಖಂಡರಾದ ಪ್ರಭುದೇವ ಯಳಸಂಗಿ, ಸಿದ್ದಪ್ಪ ಪಾಲ್ಕಿ, ಪದ್ಮಾಕರ್ ಜಾನಿಬ್, ಹೆಚ್.ಎಸ್.ಪತಕಿ, ಹಣಮಂತರಾಯ ಅಟ್ಟೂರ್, ಶರಣಬಸಪ್ಪ ಗಣಜಲಖೇಡ, ಮೆಹಬೂಬ್ ಪಾಶಾ, ತಿಪ್ಪಣ್ಣ ಯಂಪೂರೆ ಸೇರಿದಂತೆ ಮತ್ತಿತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.