Home ಜಿಲ್ಲೆ ಮೈಸೂರು ಹೆಚ್.ವಿಶ್ವನಾಥ್ 29ಟು 79 ಸುದೀರ್ಘ 50 ವರ್ಷಗಳ ರಾಜಕೀಯ ನಡೆ ಕುರಿತು ಕೃತಜ್ಞತಾ ಕಾರ್ಯಕ್ರಮ

ಹೆಚ್.ವಿಶ್ವನಾಥ್ 29ಟು 79 ಸುದೀರ್ಘ 50 ವರ್ಷಗಳ ರಾಜಕೀಯ ನಡೆ ಕುರಿತು ಕೃತಜ್ಞತಾ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ.ಸೆ.21:-
ಯಶಸ್ವಿನಿ ಹಾಗೂ ಬಿಸಿಯೂಟ ಯೋಜನೆಗಳು ಸ್ತ್ರೀ ಶಕ್ತಿ ಸಂಘಗಳ ಬಲವರ್ಧನೆ ಸೇರಿದಂತೆ ಅನೇಕ ಜನಪರ ಯೋಜನೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಡಗೂರು ವಿಶ್ವನಾಥ್ ಅವರು ರಾಜ್ಯಕ್ಕೆ ನೀಡಿ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ ಹಾಗಾಗಿ ಕೆ.ಆರ್.ನಗರ ಕ್ಷೇತ್ರದ ಜನತೆಗೆ ಕೃತಜ್ಞತಾ ಸಲ್ಲಿಸಲಿದ್ದಾರೆ ಎಂದು ಜಿ.ಪಂ.ಮಾಜಿ ಉಪಾಧ್ಯಕ್ಷ ಹಾಗೂ ಅಖಿಲ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷ ಅಡಗೂರು ಚನ್ನಬಸಪ್ಪ ತಿಳಿಸಿದರು.
ಪಟ್ಟಣ ವಿಧಾನ ಪರಿಷತ್ ಮಾಜಿ ಸದಸ್ಯ ಅಡಗೂರು ಹೆಚ್. ವಿಶ್ವನಾಥ್ ಅವರ ನಿವಾಸದಲ್ಲಿ 29 ಟು 79 ಸುದೀರ್ಘ 50 ವರ್ಷಗಳ ರಾಜಕೀಯ ನಡೆ ಕುರಿತು ಕೃತಜ್ಞತಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಅಡಗೂರು ವಿಶ್ವನಾಥ್ ಅವರ ಈ ದಶಕಗಳ ರಾಜಕೀಯ ಜೀವನದ ಪ್ರಮುಖ ಮೈಲಿಗಲ್ಲುಗಳ ಅಂಶಗಳನ್ನು ನಾಡಿನ ಜನತೆಗೆ ಕೃತಜ್ಞತೆ ಮೂಲಕ ತಿಳಿಸಲು ಈ ಪೂರ್ವಭಾವಿ ಸಭೆ ಎಂದು ತಿಳಿಸಿದರು.


ಅಡಗೂರು ವಿಶ್ವನಾಥ್ ಅವರು ಸುದೀರ್ಘ 50 ವರ್ಷಗಳ ರಾಜಕೀಯ ಜೀವನದಲ್ಲಿ ನೇರನುಡಿ ನಿಷ್ಠುರ ಮಾತುಗಳನ್ನು ಆಡಿದ್ದಾರೆ ಹಾಗಾಗಿ ರಾಜಕೀಯ ವಿದ್ಯಮಾನಗಳಲ್ಲಿ ಹೆಚ್ಚು ಪ್ರಚಲಿರಾದರು ಜೊತೆಗೆ ತಮ್ಮ ಹುಟ್ಟೂರು ಅಡಗೂರನ್ನು ರಾಜ್ಯದಲ್ಲಿ ಪ್ರಸಿದ್ಧಿ ಮಾಡಿದರು ಎಂದು ತಿಳಿಸಿದರು.
ರಾಜಕೀಯದ ಜೊತೆಗೆ ವಿಶ್ವನಾಥ್ ಅವರು ಬರಹಗಾರರೂ ಹೌದು. ಅವರ ಆತ್ಮಕಥೆಯಾದ “ಹಳ್ಳಿ ಹಕ್ಕಿಯ ರಾಜಕೀಯ ಪ್ರಲಾಪ” ಪುಸ್ತಕ ಅತ್ಯಂತ ಜನಪ್ರಿಯವಾಯಿತು. ಇದರಿಂದಾಗಿಯೇ ರಾಜಕೀಯ ವಲಯದಲ್ಲಿ ಅವರನ್ನು ಇಂದಿಗೂ ‘ಹಳ್ಳಿ ಹಕ್ಕಿ’ ಎಂದೇ ಪ್ರೀತಿಯಿಂದ ಕರೆಯಲಾಗುತ್ತದೆ. ಇತ್ತೀಚೆಗೆ 2024 ರಲ್ಲಿ ಅವರ “ಪ್ರಾಚೀನ ಪಾರ್ಲಿಮೆಂಟ್‍ಗಳ ಪ್ರದಕ್ಷಿಣೆಗಳು” ಎಂಬ ಕೃತಿಯೂ ಲಂಡನ್ ನಲ್ಲ ಬಿಡುಗಡೆಯಾಗಿದೆ ಇದರೊಟ್ಟಿಗೆ ಅಡಗೂರು ವಿಶ್ವನಾಥ್ ಅವರು ಕರ್ನಾಟಕದ ಮೂರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡು ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.


ಶಿಕ್ಷಣ ಹಾಗೂ ಸಹಕಾರ ಇಲಾಖೆಯಲ್ಲಿ ದೊಡ್ಡಮಟ್ಟದ ಕ್ರಾಂತಿಯನ್ನೇ ಮಾಡಿದ ವಿಶ್ವನಾಥ್ ಅವರ ಸುದೀರ್ಘ ರಾಜಕೀಯ ನಡೆನುಡಿ ಹಾಗೂ ಜಾರಿಗೆ ತಂದ ಜನಪರ ಯೋಜನೆಗಳನ್ನು ಮುಂದಿನ ಪೀಳಿಗಾಗಿ ಪುಸ್ತಕ ರೂಪದಲ್ಲಿ ತಂದು ಕ್ಷೇತ್ರದ ಜನರಿಗೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಗ್ರಂಥಾಲಯದಲ್ಲಿ ಇಡಬೇಕಾಗಿದೆ ಹಾಗಾಗಿ ಪುಸ್ತಕ ಹೊರ ತರಲು ಸಾಹಿತಿಗಳ ತಂಡವನ್ನು ರಚನೆ ಮಾಡ ಬೇಕಾಗಿದೆ ಎಂದು ತಿಳಿಸಿದರು.


ವಿಧಾನ ಪರಿಷತ್ ಮಾಜಿ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಮಾತನಾಡಿ ಕ್ಷೇತ್ರದ ಜನತೆ ಕೊಟ್ಟ ಶಕ್ತಿಯಿಂದ ರಾಜ್ಯಕ್ಕೆ ಏನೇನು ಯೋಜನೆಯನ್ನು ನೀಡಿದೆ ಎಂಬುದು ಪಟ್ಟಣದ ರೇಡಿಯೊ ಮೈದಾನದಲ್ಲಿ ಬೃಹತ್ ಕಾರ್ಯಕ್ರಮದ ಮೂಲಕ ಕ್ಷೇತ್ರದ ಜನತೆಗೆ ತಿಳಿಸಿ ಕೃತಜ್ಞತೆ ಅರ್ಪಿಸೊಣ ಎಂದರು.
ತಮ್ಮ ಮೊದಲ ಶಾಸಕತ್ವದ ದಿನಗಳಿಂದ 29 ಟು 79 ರವರೆಗೆ ಸುದೀರ್ಘ 50 ವರ್ಷಗಳ ರಾಜಕೀಯ ನಡೆ ಕುರಿತು ಸಭೆಯಲ್ಲಿ ಮಾತನಾಡಿದ ಅವರು ಇಂದಿನ ರಾಜಕೀಯ ಕ್ಷೇತ್ರ ಕಲುಷಿತಗೊಂಡಿದೆ, ಸಾಮನ್ಯ ವ್ಯಕ್ತಿ ಚುನಾವಣೆ ಎದುರಿಸಲಾರ ಹಾಗಾಗಿ ಪ್ರಸ್ತುತ ರಿಯಲ್ ಎಸ್ಟೇಟ್ ಕುಳಗಳು ಶಾಸಕರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಜನರಿಗೆ ಬೇಕಾಗಿರುವುದು ಅಕ್ಷರ ಮತ್ತು ಆರೋಗ್ಯ ಹಾಗಾಗಿ ನಿಮ್ಮ ಪುಕ್ಸಟ್ಟೆ ಅಕ್ಕಿಯಲ್ಲ ಎಂದರಲ್ಲದೆ ಶಾಸಕರೇ ವಿದ್ಯಾಸಂಸ್ಥೆಗಳನ್ನು ತೆರದಿದ್ದು ಇವರೇ ಸರ್ಕಾರಿ ಶಾಲೆಗಳನ್ನು ಮುಚ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.


ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಮಾತನಾಡಿದರು. ಬಳಿಕ ಹಲವಾರು ಗಣ್ಯರು ತಮ್ನ ತಮ್ಮ ಅನಿಸಿಕೆ, ಅಭಿಪ್ರಾಯವನ್ನು ತಿಳಿಸಿದರು.
ನಿವೃತ್ತ ಡಿಡಿಪಿಐ ಗಳಾದ ಜವರೇಗೌಡ, ಸಿ.ಎಸ್. ರಾಮಲಿಂಗು, ಅಡಗೂರು ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ, ಒಡನಾಡಿಗಳಾದ ತಾ.ಜಾದಳ ವಕ್ತಾರ ಕೆ.ಎಲ್.ರಮೇಶ್ ಹನಸೋಗೆ ನಾಗರಾಜ್, ಮಿರ್ಲೆ ಶ್ರೀನಿವಾಸ್ ಗೌಡ, ಹಂಪಾಪುರ ಪ್ರಭಾಕರ್ ಜೈನ್, ಎಸ್.ಬಿ.ಆನಂದ್, ಚೀರನಹಳ್ಳಿ ಶಿವಣ್ಣ, ಕೋಳಿ ಪ್ರಕಾಶ್, ಕೆ.ಪಿ.ಪ್ರಭುಶಂಕರ್, ಸಾಲಿಗ್ರಾಮ ಯೋಗಣ್ಣ, ನಾಗರತ್ಮಮ್ಮ, ಚಂದಗಾಲು ರಾಜಲಕ್ಷ್ಮೀ, ದಾಕ್ಷಾಯಿಣಿ, ವೀರಭದ್ರಚಾರ್, ಡಿಂಡಿಮ ಶಂಕರ್, ಎ.ಟಿ.ಗೋಪಾಲ್, ಖ್ಯಾತ ಮೂಳೆ ತಜ್ಞ ಡಾ.ಕೆ.ಆರ್.ಗೌತಮ್, ಎಂ.ಟಿ.ಕುಮಾರ್, ರೈತ ಮುಖಂಡರಾದ ಗರುಡಗಂಭ ಸ್ವಾಮಿ, ಅರ್ಜುನಹಳ್ಳಿ ರಾಮ್ ಪ್ರಸಾದ್, ಜೆ.ಎಂ.ಕುಮಾರ್, ತಮ್ಮನಾಯಕ್, ಮಿರ್ಲೆ ಕೆಂಪೇಗೌಡ, ಸಿ.ಪಿ.ರಮೇಶ್, ಮಿರ್ಲೆ ಲೋಕನಾಥ್, ರಾದಕೃಷ್ಣ, ಸೇರಿದಂತೆ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು