
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.25: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 40,37,562 ರೂ ನಿವ್ವಳ ಲಾಭಗಳಿಸಿದ್ದು ತನ್ನ ಪ್ರಗತಿ ಸಾಧನೆಯ ಮೂಲಕ ರಾಜ್ಯದ ಎ ಶ್ರೇಣಿ ಸಹಕಾರ ಸಂಘಗಳ ಸಾಲಿಗೆ ಸೇರಿದೆ ಎಂದು ಸಂಘದ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ತಿಳಿಸಿದರು.
ಪಟ್ಟಣದ ಟಿ.ಎ.ಪಿ.ಸಿ.ಎಂಎಸ್ ನ ಎಸ್.ಎಂ.ಲಿಂಗಪ್ಪ ಸಹಕಾರ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದಲ್ಲಿ 6 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಸಂಘದಲ್ಲಿ ಬ್ಯಾಂಕಿಂಗ್ ಶಾಖೆ, ಗೊಬ್ಬರ, ಪೆಟ್ರೋಲ್ ಬಂಕ್, ಜವಳಿ ಶಾಖೆ ಸೇರಿದಂತೆ ಹತ್ತು ಹಲವು ರೈತ ಉಪಯೋಗಿ ವ್ಯಾಪಾರ ಶಾಖೆಗಳಿವೆ. ಸಂಘ ನಿಯಮಾನುಸಾರ ವ್ಯವಹರಿಸಬೇಕಾದ ಕಾರಣ ಖಾಸಗಿಯವರೊಂದಿಗೆ ವ್ಯಾಪಾರದಲ್ಲಿ ಪೈಪೆÇೀಟಿ ನೆಡಸುವುದು ಕಷ್ಟಕರವಾಗುತ್ತಿದೆ. ಸಂಘದ ಸದಸ್ಯರು ಸಂಘದ ವ್ಯಾಪಾರ ಶಾಖೆಗಳಲ್ಲಿಯೇ ತಮಗೆ ಬೇಕಾದ ವಸ್ತುಗಳನ್ನು ಖರೀಧಿಸಿದರೆ ಸಂಘದ ವಹಿವಾಟು ಹೆಚ್ಚಲಿದೆ. ನಮ್ಮ ಬ್ಯಾಂಕಿಂಗ್ ಶಾಖೆಯಲ್ಲಿ ನಿಶ್ಚಿತ ಠೇವಣಿಯಿಡಿ, ಪಟ್ಟಣಕ್ಕೆ ಬಂದಾಗಲೆಲ್ಲ ಸಂಘದ ಪೆಟ್ರೋಲ್ ಬಂಕ್ ನಲ್ಲಿಯೇ ಪೆಟ್ರೋಲ್ ಹಾಕಿಸಿಕೊಳ್ಳಿ. ಒಟ್ಟಾರೆ ಸಂಘದಲ್ಲಿ ಸದಸ್ಯರು ವ್ಯವಹರಿಸಿದರೆ ಸಂಘವನ್ನು ಮತ್ತಷ್ಟು ಲಾಭದಾಯಕವಾಗಿ ಮುನ್ನಡೆಸಲು ಸಾಧ್ಯ ಎಂದ ಮೋಹನ್ ಸಂಘದ ಮೂಲಕ ರೈತರಿಗೆ ಅವಶ್ಯಕವಾಗಿ ಬೇಕಾದ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಸ್ಪರ್ದಾತ್ಮಕ ಬೆಲೆಗಳಲ್ಲಿ ಪೂರೈಕೆ ಮಾಡಲಾಗುತ್ತಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ತಾಲೂಕು ಟಿ.ಎ.ಪಿ.ಸಿ.ಎಂ.ಎಸ್ ರಾಜ್ಯದ ಎ ಶ್ರೇಣಿ ಸಂಘಗಳ ಸಾಲಿಗೆ ಸೇರಿದ್ದರೂ ಇದಕ್ಕೆ ಖಾಯಂ ಕಾರ್ಯದರ್ಶಿಯಿಲ್ಲ. ಈಗಿರುವ ಪ್ರಭಾರ ಕಾರ್ಯದರ್ಶಿಗೆ ಬಡ್ತಿ ನೀಡಿ ಅವರನ್ನೇ ಖಾಯಂ ಕಾರ್ಯದರ್ಶಿಯನ್ನಾಗಿ ಮಾಡಿಕೊಳ್ಳಿ ಅಥವಾ ಬೇರೆ ಯಾರದರನ್ನಾದರೂ ಖಾಯಂ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಳ್ಳಿ. ಸಂಘದ ವ್ಯವಹಾರದಲ್ಲಿ ಯಾವುದಾದರೂ ಲೋಪವಾದರೆ ನಾವು ಯಾರನ್ನು ಪ್ರಶ್ನಿಸಬೇಕೆಂದು ಕೆಲವು ಸದಸ್ಯರು ಸಭೆಯಲ್ಲಿ ಪ್ರಶ್ನೆ ಮಾಡಿದರು. ಗ್ರಾಮೀಣ ಪ್ರದೇಶದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಟಿ.ಎ.ಪಿ.ಸಿ.ಎಂ.ಎಸ್ ಸಂಸ್ಥೆಯ ಎ ದರ್ಜೆಯ ಸದಸ್ಯರಾಗಿದ್ದು ಇವುಗಳಿಗೆ ಆಡಿಟ್ ವರದಿಯ ಪ್ರತಿ ನೀಡಿ, ತಾಲೂಕು ಟಿ.ಎ.ಪಿ.ಸಿ.ಎಂ.ಎಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು ಹಿರಿಯ ಸಹಕಾರಿ ಧುರೀಣ ಹಾಗೂ ಕ್ಷೇತ್ರದ ಮಾಜಿ ಶಾಸಕ ದಿವಂಗತ ಎಸ್.ಎಂ.ಲಿಂಗಪ್ಪನವರು. ಸಂಘದ ಆಹ್ವಾನ ಪತಿಕೆಗಳಲ್ಲಿ ಎಸ್.ಎಂ.ಲಿಂಗಪ್ಪ ಅವರ ಭಾವಚಿತ್ರವನ್ನು ಮುದ್ರಿಸಿ. ವ್ಯಾಪಾರದಲ್ಲಿ ಖಾಸಗಿಯವರಿಗೆ ಪೈಪೆÇೀಟಿ ನೀಡುವುದು ಕಷ್ಠಕರವಾದರೆ ಸಂಘದ ಹಣದಲ್ಲಿ ಸ್ತಿರಾಸ್ತಿ ಖರೀದಿಸಿ ಭೂಮಿಯ ಮೇಲೆ ನಮ್ಮ ಬಂಡವಾಳ ಹಾಕಿ, ಸಂಘದ ಮೂಲಕ ಅತೀಹೆಚ್ಚು ವ್ಯವಹರಿಸುವ ಸದಸ್ಯರನ್ನು ಗುರುತಿಸಿ ಅವರನ್ನು ವಾರ್ಷಿಕ ಸಭೆಯಲ್ಲಿ ಗೌರವಿಸುವ ಮೂಲಕ ವ್ಯಾಪಾರಕ್ಕೆ ಉತ್ತೇಜನ ಕೊಡಿ ತಾಲೂಕು ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತೀಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ವಾರ್ಷಿಕ ಸಭೆಯಲ್ಲಿ ಗೌರವಿಸುವ ಪರಿಪಾಠವಿದೆ. ಇದನ್ನು ತಾಲೂಕಿನ ಹೊರಗಿನ ಶಾಲೆಯಲ್ಲಿ ಕಲಿಯುತ್ತಿರುವ ಸದಸ್ಯರ ಮಕ್ಕಳಿಗೂ ವಿಸ್ತರಿಸಿ ಎಂದು ಕೆಲವು ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ನಿರ್ಣಯ ಮಾಡುವಂತೆ ಆಗ್ರಹಿಸಿದರು. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಸದಸ್ಯರ ಮಕ್ಕಳನ್ನು ಮಾತ್ರ ಗೌರವಿಸಿ ಎಂದು ಕೆಲವರು ಸಲಹೆ ನೀಡಿದರು. ಮಕ್ಕಳ ಕಲಿಕಾ ಗೌರವವನ್ನು ಕೇವಲ ಸರ್ಕಾರಿ ಶಾಲೆಗೆ ಮಾತ್ರ ಸೀಮಿತಗೊಳಿಸಿದರೆ ಮುಂದಿನ ದಿನಗಳಲ್ಲಿ ಅಭಿನಂದನೆಗೆ ಅರ್ಹ ಮಕ್ಕಳೇ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟ ಸಭೆ ತಾಲೂಕು ವ್ಯಾಪ್ತಿಯ ಶಾಲೆಗಳಲ್ಲಿ ಕಲಿಯುತ್ತಿರುವ ಸದಸ್ಯರ ಮಕ್ಕಳನ್ನು ಮಾತ್ರ ಗೌರವಿಸುವಂತೆ ನಿರ್ಣಯಿಸಿದರು.
ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಎಂ.ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಲತಾಮಣಿ, ನಿದೇರ್ಶಕರುಗಳಾದ ಟಿ.ಬಲದೇವ್, ಬಿ.ಎಂ.ಕಿರಣ್, ಎಂ.ಪಿ.ಲೋಕೇಶ್, ಹೆಚ್.ಟಿ.ಲೋಕೇಶ್, ವೈ.ಎಂ.ವಿಜಯಕುಮಾರ್, ಕೆ.ಬಿ.ನಾಗೇಶ್, ಎಸ್.ಎಲ್.ಮೋಹನ್, ಕೆ.ಬಿ.ಮಧು, ಎಂ.ಡಿ.ಜ್ಯೋತಿ, ಎನ್.ಕೆ.ದಿಲೀಪ್ಕುಮಾರ್, ಟಿ.ಎಸ್.ಮಂಜುನಾಥ್, ತಮ್ಮಣ್ಣ, ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್ ವೇದಿಕೆಯಲ್ಲಿದ್ದು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯದರ್ಶಿ ಎಸ್.ಬೋರೇಗೌಡ ವರದಿ ಮಂಡನೆ ಮಾಡಿದರು.
ಸದಸ್ಯರುಗಳಾದ ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ಚಲುವಯ್ಯ, ಚೌಡೇನಹಳ್ಳಿ ರಾಮಕೃಷ್ಣೇಗೌಡ, ಕೊರಟೀಕೆರೆ ದಿನೇಶ್, ಡಿ.ಎಸ್.ನಾಗೇಂದ್ರ, ಸುಬ್ಬೇಗೌಡ, ಬಸವರಾಜಪ್ಪ, ಬಸ್ತಿ ರಂಗಪ್ಪ ಸೇರಿದಂತೆ ಹಲವರು ಚರ್ಚೆಯಲ್ಲಿ ಭಾಗವಹಿಸಿ ಸಂಘದ ಅಭಿವೃದ್ದಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.


























