Home ಜಿಲ್ಲೆ ಮೈಸೂರು ಸ್ವಚ್ಛ ದಸರಾ 2026: ಬಿಗ್ ಎಫ್ ಎಂ, ಗಂಧದಗುಡಿ ಫೌಂಡೇಶನ್, ಪಾಲಿಕೆ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ

ಸ್ವಚ್ಛ ದಸರಾ 2026: ಬಿಗ್ ಎಫ್ ಎಂ, ಗಂಧದಗುಡಿ ಫೌಂಡೇಶನ್, ಪಾಲಿಕೆ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ

ಸಂಜೆವಾಣಿ ನ್ಯೂಸ್
ಮೈಸೂರು.ಅ.23:-
92.7 ಬಿಗ್ ಎಫ್ ಎಂ, ಗಂಧದಗುಡಿ ಫೌಂಡೇಶನ್ (ರಿ.) ಹಾಗೂ ಮೈಸೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಸ್ವಚ್ಛ ದಸರಾ 2026 ಕಾರ್ಯಕ್ರಮವನ್ನು ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಆವರಣ ಹಾಗೂ ಮೈಸೂರು ಅರಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯೋಜಿಸಲಾಯಿತು.
ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಸ್ವಚ್ಛತೆಯನ್ನು ಕಾಪಾಡುವುದು, ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸ್ವಚ್ಛತಾ ಕಾರ್ಯಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಸ್ವಚ್ಛತೆಯ ಕುರಿತು ಜನಜಾಗೃತಿ ಮೂಡಿಸುವ ಮೂಲಕ ಮೈಸೂರನ್ನು ಭಾರತದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮತ್ತೆ ಪ್ರಥಮ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ನೇಪಥ್ಯ ರಂಗತಂಡದ ವತಿಯಿಂದ ಸ್ವಚ್ಛತೆಯ ಮಹತ್ವವನ್ನು ಸಾರುವ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ 92.7 ಬಿಗ್ ಎಫ್ ಎಂನ ಆರ್ ಜೆ ವಿಶ್ವಾಸ್, ಆರ್ ಜೆ ಪ್ರದೀಪ್ ನೆನಪಿನ ನಾವಿಕ, ಆರ್ ಜೆ ವಿಕ್ಕಿ, ಆರ್ ಜೆ ದುಷ್ಯಂತ್ ಹಾಗೂ ಆರ್ ಜೆ ಅಂಟೋ ಭಾಗವಹಿಸಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಿದರು.


ಗಂಧದಗುಡಿ ಫೌಂಡೇಶನ್ ವತಿಯಿಂದ ರಾಜ್ಯಾಧ್ಯಕ್ಷರಾದ ಆರ್ಯನ್ ಗಂಧದಗುಡಿ, ಯಶೋಧ ಆರ್. ಹಾಗೂ ಹರ್ಷಿತ ಮಹೇಶ್ ಅವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪಾರಂಪರಿಕ ಕಟ್ಟಡಗಳ ಆಯುಕ್ತರಾದ ಶಿವರಾಜ್ ಪಿ. ಹಾಗೂ ಕನ್ನಡ ಚಿತ್ರರಂಗದ ನಟ ವಸಿಷ್ಠ ಸಿಂಹ ಅವರು ಭಾಗವಹಿಸಿ ಸ್ವಚ್ಛ ದಸರಾ ಅಭಿಯಾನಕ್ಕೆ ಬೆಂಬಲ ನೀಡಿದರು.
ಸ್ವಚ್ಛ ಮೈಸೂರು, ಸುಂದರ ಮೈಸೂರು ಆಶಯದೊಂದಿಗೆ ಮೈಸೂರಿನ ಸೌಂದರ್ಯ ಹಾಗೂ ಪಾರಂಪರಿಕ ಪರಂಪರೆಯನ್ನು ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛ ದಸರಾ 2026 ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಯಿತು.