
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.30; ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ನಡೆಸಲು ಉದ್ದೇಶಿಸಿದ್ದ ಬಿಜೆಪಿಯ ಪಾದಯಾತ್ರೆ. ನಾಗೇಂದ್ರ ರಾಜೀನಾಮೆ ಕೊಟ್ಟರೂ, ಸರ್ಕಾರದ ವಿಫಲ ಆಡಳಿತ, ವಾಲ್ಮೀಕಿ ನಿಗಮದ ಹಣದಿಂದ ಗೆದ್ದ ಎಂ.ಪಿ.ತುಕರಾಂ ರಾಜೀನಾಮೆ ನೀಡಬೇಕು.ಗೃಹಲಕ್ಷ್ಮಿಯ ಹಣದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಬೇಕು ಸೇರಿದಂತೆ ಹಲವು ಆಗ್ರಹಗಳೊಂದಿಗೆ ನಾಡಿದ್ದು ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟದಿಂದ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿರುವ ಪಾದಯಾತ್ರೆ ಆರಂಭಗೊಳ್ಳಲಿದೆ.
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್.ವಿಜಯೇಂದ್ರ, ಜಿಡಿಎಸ್ ನ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಈ ಯಾತ್ರೆ ಸೆ. 10 ಬಳ್ಳಾರಿಗೆ ಬಂದು ತಲುಪಲಿದೆ.
ಮೊದಲ ದಿನ ಲಿಂಗಸೂಗೂರಿನಿಂದ 30 ಕಿಲೋ ಮೀಟರ್ ಸಾಗಿ ಮಸ್ಕಿ ಪಟ್ಟಣಕ್ಕೆ ಬಂದು ಸೇರಲಿದೆ. ಎರಡನೇ ದಿನ ಮಸ್ಕಿಯಿಂದ ಆರಂಭಗೊಂಡು ಸಿಂಧನೂರು ತಲುಪಲಿದೆ. ಮೂರನೇ ದಿನ ಸಿಂಧನೂರಿನಿಂದ ಕಾರಟಿಗೆ, ನಾಲ್ಕನೇ ದಿನ ಕಾರಟಿಗಯಿಂದ ಗಂಗಾವತಿಗೆ, ಐದನೇ ದಿನ ಗಂಗಾವತಿಯಿಂತಿಯಿಂದ ಕಂಪ್ಲಿಗೆ, 6 ನೇ ದಿನ ಕಂಪ್ಲಿಯಿಂದ ಹೊರಟು ಮೆಟ್ರಿಗೆ, 7 ನೇ ದಿನ ಮೆಟ್ರಿಯಿಂದ ದರೋಜಿಗೆ, 8 ನೇ ದಿನ ದರೋಜಿಯಿಂದ ಕುಡುತಿನಿಗೆ, 9 ನೇ ದಿನ ಕುಡುತಿನಿಯಿಂದ ಅಲ್ಲಿಪುರಕ್ಕೆ, 10 ದಿನ ಅಲ್ಲಿಪುರದಿಂದ ಬಳ್ಳಾರಿಗೆ ಬರಲಿದೆ.
ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಶ್ರೀರಾಮುಲು, ಜನಾರ್ಧನರೆಡ್ಡಿ, ಆರ್.ಅಶೋಕ್, ಚಲವಾದಿ ನಾರಾಯಣ ಸ್ವಾಮಿ, ಹಾಲಿ ಮಾಜಿ ಶಾಸಕರು, ಸಂಸದರು, ಮುಖಂಡರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ






























