
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,20-ಎಸ್ಪಿ ಡಾ.ಸುಮನ್ ಡಿ.ಪಿ ಜಿಲ್ಲೆಯಲ್ಲಿ 3 ರೌಡಿ ನಿಗ್ರಹ ತಂಡಗಳನ್ನು ರಚನೆ ಮಾಡಿದ್ದಾರೆ. ರೌಡಿಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಎಸಗಪಿಯವರು ತಮ್ಮ ಅಧೀನದಲ್ಲಿ ಬಳ್ಳಾರಿ ನಗರ, ಸಿರುಗುಪ್ಪ ತೋರಣಗಲ್ಲು ಉಪ-ವಿಭಾಗದ ಡಿ.ಎಸ್.ಪಿ.ಗಳ ನೇತೃತ್ವದಲ್ಲಿ ಸಿ.ಪಿ.ಐ.ಪಿ.ಐ ಹಾಗೂ ಅಧಿಕಾರಿ/ಸಿಬ್ಬಂದಿಯವರನ್ನೊಳಗೊಂಡ ರೌಡಿ ನಿಗ್ರಹ ತಂಡಗಳನ್ನು ನೇಮಕ ಮಾಡಿದ್ದಾರೆ.
ಈ ತಂಡಗಳು ಉಪ-ವಿಭಾಗದ ವ್ಯಾಪ್ತಿಯಲ್ಲಿನ ಎಲ್ಲಾ ರೌಡಿಗಳ ಚಲನ ವಲನಗಳ ಮೇಲೆ ನಿಗಾವಣೆ ಇರಿಸಿ ಅವರ ವಿರುದ್ಧ ಈಗಾಗಲೆ ದಾಖಲಾದ ಪ್ರಕರಣಗಳ ಪರಿಶೀಲನೆ, ದಾಖಲಾತಿ ನಿರ್ವಹಣೆ, ಪದೇ ಪದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಬಾಗಿಯಾದ ವ್ಯಕ್ತಿಗಳ ಗಡಿಪಾರು, ಗೂಂಡಾ ಕಾಯ್ದೆ, ಹಾಗೂ ಕೋಕಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವುದು, ಸೂಕ್ಷ್ಮ ಪ್ರದೇಶಗಳಲ್ಲಿ ಹರಾತ್ ದಾಳಿ ಕೈಗೊಂಡು. ಚೆಕ್ ಮಾಡಿ ಕ್ರಮ ಕೈಗೊಳ್ಳುವುದು ತಂಡದ ಸದಸ್ಯರುಗಳಿಗೆ ಜವಬ್ದಾರಿಯಾಗಿದೆ.


























