
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.23- ಪ್ರಸ್ತುತ ವರ್ಷದಲ್ಲಿ ಬ್ಯಾಂಕಿನ 31 ಶಾಖೆಗಳಲ್ಲಿ ರೂ. 1083.87 ಕೋಟಿ ಠೇವಣಿ ಹಾಗೂ ರೂ. 101.05 ಕೋಟಿ μÉೀರು ಬಂಡವಾಳ ಹೊಂದಿ, ರೂ. 2071,36 ಕೋಟಿ ಕೃಷಿ ಮತ್ತು ಕೃಷಿಯೇತರ ಸಾಲ ಹೊರ ಬಾಕಿ ಇದ್ದು, ಬ್ಯಾಂಕು 2025-26 ನೇ ಸಾಲಿಗೆ ರೂ.5.70 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಅಧ್ಯಕ್ಷ ದೊಡ್ಡಸ್ವಾಮೇಗೌಡ ತಿಳಿಸಿದರು.
ನಗರದ ನಂದಿ ಭವನದಲ್ಲಿ ಪ್ರಥಮವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಪ್ರಥಮವಾಗಿ ವಾರ್ಷಿಕ ಮಹಾಸಭೆಯನ್ನು ಆಯೋಜನೆ ಮಾಡಿರುವುದು ಸಂತಸ ತಂದಿದೆ. ಸÀಹಕಾರಿ ಬ್ಯಾಂಕಿಂಗ್ ಉದ್ದಿಮೆಗೆ ಅನೇಕ ಸ್ಪರ್ಧೆಗಳು ಎದುರಾಗಿದ್ದರೂ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು, ತನ್ನ ಹಣಕಾಸು ಸಾಮಥ್ರ್ಯವನ್ನು ಬಲಪಡಿಸಿಕೊಂಡು ವರದಿಯ ಸಾಲಿನಲ್ಲಿ ಪ್ರಗತಿ ಪಥದಲ್ಲಿರುತ್ತದೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 30 ಸಾವಿರ ರೂ. μÉೀರು ಬಂಡವಾಳದೊಂದಿಗೆ 1955 ನೇ ಸಾಲಿನಲ್ಲಿ ಪ್ರಾರಂಭವಾಗಿರುತ್ತದೆ. ಮೈಸೂರು ಮತ್ತು ಚಾಮರಾಜನಗರ ಎರಡೂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೈಸೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುತ್ತದೆ. ಬ್ಯಾಂಕು ಬಹುಮುಖ್ಯವಾಗಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಾಲ ಸೌಲಭ್ಯ ನೀಡುತ್ತಿದ್ದು, 2025-26 ನೇ ಸಾಲಿಗೆ ಎರಡೂ ಜಿಲ್ಲೆಯಲ್ಲಿರುವ 293 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 107476 ರೈತರಿಗೆ ರೂ. 1280.24 ಕೋಟಿ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ಮತ್ತು ರೂ. 9.35 ಕೋಟಿ ಮಧ್ಯಮಾವಧಿ ಸಾಲವನ್ನು ಶೇ.3 ರ ದರದಲ್ಲಿ ವಿತರಿಸಲಾಗಿದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹು ಉಪಯೋಗಿ ಸೇವಾ ಸಹಕಾರ ಸಂಘಗಳನ್ನಾಗಿ ಪರಿವರ್ತಿಸಲು ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿಯಲ್ಲಿ ಗೋದಾಮು ನಿರ್ಮಾಣ, ಕೃಷಿ ಯಂತ್ರೋಪಕರಣಗಳ ಖರೀದಿ, ಇತರೇ ಉದ್ದೇಶಕ್ಕಾಗಿ ರೂ. 0.21 ಕೋಟಿ ಸಾಲ ನೀಡಲಾಗಿರುತ್ತದೆ. ಇದರೊಂದಿಗೆ ಗೃಹ ನಿರ್ಮಾಣ ಮತ್ತು ಗೃಹ ಖರೀದಿ, ವಾಹನ ಸಾಲ, ವೈಯಕ್ತಿಕ ಸಾಲ, ನಿವೇಶನ ಖರೀದಿ/ಅಡಮಾನ ಮತ್ತು ಚಿನ್ನಾಭರಣ ಅಡಮಾನ ಹಾಗೂ ಇತರೇ ಕೃಷಿಯೇತರ ಉದ್ದೇಶಗಳಿಗೆ ರೂ.843.71 ಕೋಟಿ ಸಾಲ ನೀಡಿದೆ. ನಬಾರ್ಡ್ ಹಾಗೂ ರಾಜ್ಯ ಸರ್ಕಾರ ರೂಪಿಸಿದ ಸ್ವ-ಸಹಾಯ ಗುಂಪುಗಳ ರಚನೆ ಹಾಗೂ ಬ್ಯಾಂಕ್ ಸಂಪರ್ಕಕಲ್ಪಸುವ ಯೋಜನೆಯನ್ನು ಬ್ಯಾಂಕಿನಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಬ್ಯಾಂಕಿನ ಶಾಖೆಗಳು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಸ್ವ-ಸಹಾಯ ಗುಂಪುಗಳನ್ನು ರಚಿಸಲಾಗಿರುತ್ತದೆ. ಈ ಪೈಕಿ ಬಹುತೇಕ ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕ್ ಅಂಕೇಜ್ ಯೋಜನೆಯಡಿಯಲ್ಲಿ ರೂ. 09.20 ಕೋಟಿ ಸಾಲ ನೀಡಲಾಗಿರುತ್ತದೆ ಎಂದರು.
ಬ್ಯಾಂಕಿನ ವ್ಯವಹಾರಗಳನ್ನು ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ತಂತ್ರಜ್ಞಾನದಡಿ ಗಣಕೀಕರಣಗೊಳಿಸಿದ್ದು, ಗ್ರಾಹಕರು ತಮ್ಮ ವ್ಯವಹಾರವನ್ನು ಯಾವುದೇ ಶಾಖೆಗಳಲ್ಲಿ ವ್ಯವಹಾರ ನಡೆಸಬಹುದಾಗಿದೆ. ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ಅನುಕೂಲವಾಗುವ ದೇಶಾದ್ಯಂತ ಹಣ ವರ್ಗಾವಣೆ ಮಾಡುವ RTGS/NEFT POS/ MOBILE BANKING/IMPS/UPI (ATM, Google Pay, Phone pay, QR Code) ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಹಾಗೂ ಎರಡು ಜಿಲ್ಲೆಗಳ ಎಲ್ಲಾ ಪ್ರಾ.ಕೃ.ಪ.ಸ. ಸಂಘಗಳನ್ನು ಗಣಕೀಕರಣ ಮಾಡುವ ಕೆಲಸ ಪ್ರಗತಿಯಲ್ಲಿದ್ದು, 279 ಸಂಘಗಳ ಪೈಕಿ, 218 ಪ್ರಾ.ಕೃ.ಪ.ಸ.ಸಂಘಗಳು 2025-26 ನೇ ಸಾಲಿಗೆ ಸಂಪೂರ್ಣ ಗಣಕೀಕರಣಗೊಂಡು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ರಾಜ್ಯದಲ್ಲೇ ಮೊಟ್ಟಮೊದಲು ಗಣಕೀಕರಣ ಲೆಕ್ಕ ಪರಿಶೋಧನೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಚನ್ನಂಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಭಾರತ ಸರ್ಕಾರದ ಸಹಕಾರ ಸಚಿವಾಲಯ ಗುರುತಿಸಿ ಪುರಸ್ಕರಿಸಿದೆ ಎಂದು ದೊಡ್ಡ ಸ್ವಾಮೇಗೌಡ ತಿಳೀಸಿದರು.
ಪ್ರತ್ಯೇಕ ಬ್ಯಾಂಕ್ ಮಾಡಲು ಒಪ್ಪಿಗೆ: ಇದಕ್ಕು ಮುನ್ನಾ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅಧ್ಯಕ್ಷರು, ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ಬ್ಯಾಂಕ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಬಾರ್ಡ್ ಸೂಚನೆಯಂತೆ ಬ್ಯಾಂಕ್ ಅನ್ನು ಪ್ರತ್ಯೇಕಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಮತ್ತೋರ್ವ ನಿರ್ದೇಶಕ ಆರ್. ನರೇಂದ್ರ ಧ್ವನಿಗೂಡಿಸಿ, ಈ ಬಾರಿ ಚಾಮರಾಜನಗರದಲ್ಲಿ ಡಿಸಿಸಿ ಬ್ಯಾಂಕ್ ಆಗುತ್ತದೆ ಎಂದು ಹೇಳಿದರು.
ಚಾಮರಾಜನಗರ ಹಾಗು ಮೈಸೂರು ಎಂಬ ತಾರತಮ್ಯ ಮಾಡಲಾಗಿದೆ. ಚಾ.ನಗರ ಜಿಲ್ಲೆಯ ಸಂಘಗಳಿಗೆ ಸಾಲ ನೀಡುವಲ್ಲಿ ವಿಳಂಬ ಮತ್ತು ಸರಿಯಾಗಿ ವಿತರಣೆ ಮಾಡುತ್ತಿಲ್ಲ ಎಂಬ ಸದಸ್ಯರ ಪ್ರಶ್ನೆಗೆ ಲಿಖಿತವಾಗಿ ಅರ್ಜಿ ನೀಡಿದರೆ ಕ್ರಮ ವಹಿಸುವುದಾಗಿ ತಿಳಿಸಿದರು.
ಸಂಘದ ಸದಸ್ಯರಾದ ಕೆರೆಹಳ್ಳಿ ನವೀನ್, ಡಿ. ನಾಗೇಂದ್ರ, ಪು. ಶ್ರೀನಿವಾಸನಾಯಕ, ಪಿ. ವೃಷಬೇಂದ್ರಪ್ಪ, ಕಿಲಕೆರೆ ಬಸವರಾಜು ಸೇರಿದಂತೆ ಅನೇಕರು ಮಾತನಾಡಿ ಎಂಡಿಸಿಸಿ ಬ್ಯಾಂಕಿನ ಅಧಿಕಾರಿಗಳು ಲೋಪ ಮತ್ತು ಸಂಘಕ್ಕೆ ಆಗುತ್ತಿರುವ ಅನ್ಯಾಯಗಳು, ಸಂಘದ ನಿರ್ದೇಶಕರು ಹಾಗೂ ಅಧ್ಯಕ್ಷರು ಗೌರವ ಧನವನ್ನು ಹೆಚ್ಚಳ ಮಾಡಿರುವುದು ಸರಿಯಲ್ಲ. ಇದನ್ನು ಕಡಿತ ಮಾಡಬೇಕು. ಷೇರುಗೆ ಹೆಚ್ಚಿನ ಲಾಭಾಂಶ ನೀಡಬೇಕೆಂದು ಒತ್ತಾಯಿಸಿದರು.
ಕೇಂದ್ರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶಂಕರ್ ಬಲ್ಲೇನಹಳ್ಳಿ ವಾರ್ಷಿಕ ವರದಿಯನ್ನು ಮಂಡಿಸಿ, ಅನುಮೋದನೆಯನ್ನು ಪಡೆದುಕೊಂಡರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ವೈ.ಎಂ. ಜಯರಾಮು, ಆರ್.ನರೇಂದ್ರ, ಎಸ್. ಚಂದ್ರಶೇಕರ್, ಬಿ.ಎಸ್. ಸದಾನಂದ, ಎಂ. ಕೆಂಚ, ಜಿ.ಎನ್. ಮಂಜುನಾಥ್, ಇ.ಸಿ. ಲೋಕೇಶ್, ಟಿ.ಪಿ. ಬೋರೇಗೌಡ, ಬೀರೇಂದ್ರ, ರಾಜಣ್ಣ ಕೇಂದ್ರ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಿನೋದಕುಮಾರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.


























