
ಸಂಜೆವಾಣಿ ನ್ಯೂಸ್
ಮೈಸೂರು.ಆ.23: ಭಾರತೀಯ ಯುವ ಕಾಂಗ್ರೆಸ್ ವತಿಯಿಂದ ನಗರದ ನಾಗರಿಕ ಸಮಸ್ಯೆಗಳು ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಃeಣಣeಡಿ ಅiಣies' ಅಭಿಯಾನಕ್ಕೆ ಮೈಸೂರಿನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ನಗರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಯುವ ಕಾಂಗ್ರೆಸ್ ಕೇರಳ ಉಸ್ತುವಾರಿ ನಾಗೇಶ್ ಕರಿಯಪ್ಪ, ಮೈಸೂರು ಹೆಮ್ಮೆಯ ನಗರ. ಈ ಅಭಿವೃದ್ಧಿಯ ಗೌರವ ಪ್ರತಿಯೊಂದು ಮನೆಗೂ, ಪ್ರತಿಯೊಬ್ಬ ಕಾರ್ಮಿಕನಿಗೂ ತಲುಪಬೇಕು’ ಎಂದು ಹೇಳಿದರು.
ಅಭಿಯಾನವು ಗೌರವ-ಹಕ್ಕು-ಸಂಘಟನೆ-ನಾಯಕತ್ವ' ಎಂಬ ನಾಲ್ಕು ತತ್ವಗಳ ಮೇಲೆ ನಡೆಯಲಿದೆ. ಒeಡಿಚಿ Shehಚಿಡಿ, ಒeಡಿಚಿ ಊಚಿq’ ಅಡಿಯಲ್ಲಿ ವಾರ್ಡ್ಗಳಲ್ಲಿ ನೀರು, ರಸ್ತೆ, ಯುಜಿಡಿ, ಕಸ ವಿಲೇವಾರಿ ಸಮಸ್ಯೆಗಳನ್ನು ದಾಖಲಿಸಿ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಒehಟಿಚಿಣ ಏe ಊಚಿಚಿಣh' ಅಡಿಯಲ್ಲಿ ಪೌರಕಾರ್ಮಿಕರು, ಗಿಗ್ ವರ್ಕರ್ಗಳು, ಆಟೋ ಚಾಲಕರು ಸೇರಿದಂತೆ ಅಸಂಘಟಿತ ಕಾರ್ಮಿಕರೊಂದಿಗೆ ಸಂವಾದ ನಡೆಸಲಾಗುವುದು ಎಂದು ತಿಳಿಸಿದರು.
ಇದು ಸರ್ಕಾರದ ವಿರುದ್ಧದ ಅಭಿಯಾನವಲ್ಲ, ಜನರ ಪರವಾದ ಅಭಿಯಾನ. ಜನರ ಸಮಸ್ಯೆಯನ್ನು ಸರ್ಕಾರದ ಮುಂದೆ ಇಟ್ಟು ಪರಿಹಾರ ತರುವುದೇ ನಿಜವಾದ ನಿಷ್ಠೆ’ ಎಂದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಹೊಯ್ಸಳ ಎಂ.ಆರ್, ಮಜೀದ್ ಹಿದಾಯತ್ ಖಾನ್, ಮನೋಜ್ ಎಂ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

































