Home ಜಿಲ್ಲೆ ಮೈಸೂರು ದಿ ಕಾಂಪೌಂಡಿಂಗ್ ಲೀಡರ್ ಕೃತಿ ಬಿಡುಗಡೆ

ದಿ ಕಾಂಪೌಂಡಿಂಗ್ ಲೀಡರ್ ಕೃತಿ ಬಿಡುಗಡೆ

ಸಂಜೆವಾಣಿ ನ್ಯೂಸ್
ಮೈಸೂರು.ಆ.23:
ಎಕ್ಸೆಲ್‍ಸಾಫ್ಟ್ ಟೆಕ್ನಾಲಜೀಸ್‍ನ ಚೀಫ್ ಇನ್ನೊವೇಷನ್ ಆಫೀಸರ್ ಮತ್ತು ಮೈಸೂರು ಕ್ಯಾಂಟಮ್ ಎಐ ಸಂಸ್ಥಾಪಕ ಆದರ್ಶ್ ಸುಧೀಂದ್ರ ಅವರ ಚೊಚ್ಚಲ ಕೃತಿ `ದಿ ಕಾಂಪೌಂಡಿಂಗ್ ಲೀಡರ್: ಎ ಮಿಡ್-ಕೆರೀರ್ ಮ್ಯಾನಿಫೆಸ್ಟೋ ಇನ್ ದಿ ಏಜ್ ಆಫ್ ಎಐ’ ಮೈಸೂರಿನಲ್ಲಿ ಬಿಡುಗಡೆಯಾಯಿತು.
ಮೈಸೂರು ಕ್ಯಾಂಟಮ್ ಎಐ ಮತ್ತು ಮೈಸೂರು ಬುಕ್ ಕ್ಲಬ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್.ಆರ್. ಗ್ರೂಪ್ ಅಧ್ಯಕ್ಷ ಆರ್. ಗುರು ಮತ್ತು ನೀತಿ ಆಯೋಗದ ಸದಸ್ಯ ಡಾ. ಆರ್. ಬಾಲಸುಬ್ರಮಣ್ಯಂ ಭಾಗವಹಿಸಿದ್ದರು.


ಎಐ ಯುಗದಲ್ಲಿ ಮಧ್ಯಮ ಹಂತದ ವೃತ್ತಿಪರರಿಗೆ ಅಗತ್ಯವಿರುವ ನಾಯಕತ್ವದ ತತ್ವಗಳು, ನಿರಂತರ ಬೆಳವಣಿಗೆ ಮತ್ತು ಪರಂಪರೆಯ ಮಹತ್ವವನ್ನು ಈ ಕೃತಿ ಒಳಗೊಂಡಿದೆ. ನೋಷನ್ ಪ್ರೆಸ್ ಪ್ರಕಟಿಸಿರುವ ಈ ಪುಸ್ತಕ ಅಮೆಜಾನ್‍ನಲ್ಲಿ ಲಭ್ಯವಿದೆ.