
ಸಂಜೆವಾಣಿ ನ್ಯೂಸ್
ಮೈಸೂರು.ಆ.23: 3 ಕರ್ನಾಟಕ ನೆವಲ್ ಯೂನಿಟ್ ಮಾನಸ ಗಂಗೋತ್ರಿ ಮೈಸೂರು ಆಯೋಜಿಸಿದ್ದ 10 ದಿನಗಳ ಎನ್ಸಿಸಿ ವಾರ್ಷಿಕ ತರಬೇತಿ ಶಿಬಿರದಲ್ಲಿ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಶಿಬಿರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ ಅಭಿನಂದಿಸಿತು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಮಿನಿ ಪಳ್ಳಿಪಾಡನ್, ಆಡಳಿತಾಧಿಕಾರಿ ಬಿನ್ಸಿ, ಉಪಪ್ರಾಂಶುಪಾಲರಾದ ಕ್ರಿಸ್ಟಿನ, ಸರಿತಾ ಮತ್ತು ನಾರಾಯಣಸ್ವಾಮಿ ಹಾಜರಿದ್ದರು.
































