ಸಂಜೆವಾಣಿ ವಾರ್ತೆ
ಹೊಸಪೇಟೆ.ಆ.29 ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಶುಕ್ರವಾರ ಶ್ರೀಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ಶ್ರೀನುಲಿಯ ಚಂದಯ್ಯನವರ ಜಯಂತಿಯನ್ನು ಆಚರಿಸಲಾಯಿತು.
ಡಾ.ಮಲ್ಲಿಕಾರ್ಜುನ ಮಾನ್ಪಡಿ ಅವರು ಶ್ರೀ ನುಲಿಯ ಚಂದಯ್ಯನವರ ನವರ ಕುರಿತು ಮತ್ತು ಈ.ಅಶ್ವಿನಿ ಕೇಶವ ಅವರು ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಡಿಡಿಪಿಯು ನಾಗರಾಜ್ ಹವಲ್ದಾರ್, ಕಾನೂನು ಸಲಹೆಗಾರ ಕೆ. ಬಸವರಾಜ್, ವಕೀಲರಾದ ಕೆ.ಕಮಲಾಪುರ ಹುಲ್ಲಗಪ್ಪ, ಕೊರಮ ಸಮಾಜದ ಜಿಲ್ಲಾಧ್ಯಕ್ಷ ಕೆ.ಜಗದೀಶ, ಖಜಾಂಚಿ ಚಿತವಾಡಗಿ ಹುಲುಗಪ್ಪ, ಕಾರ್ಯದರ್ಶಿ ನಾಗೇನಹಳ್ಳಿ ಹುಲುಗಪ್ಪ ಸೇರಿದಂತೆ ಸಮಾಜದ ಮುಖಂಡರು ಇದ್ದರು.























