Home ಜಿಲ್ಲೆ ಮೈಸೂರು ಬಿಜೆಪಿ ಯವರು ರಣಹದ್ದುಗಳು ಇದ್ದ ಹಾಗೆ, ಯತಿಂದ್ರ ಸಿದ್ದರಾಮಯ್ಯ

ಬಿಜೆಪಿ ಯವರು ರಣಹದ್ದುಗಳು ಇದ್ದ ಹಾಗೆ, ಯತಿಂದ್ರ ಸಿದ್ದರಾಮಯ್ಯ

ಸಂಜೆವಾಣಿ ವಾರ್ತೆ
ನಂಜನಗೂಡು.ಸೆ.21:-
ರಾಜ್ಯದಲ್ಲಿ ಬಿ ಜೆ ಪಿ ಯವರು ರಣಹದ್ದುಗಳು ಇದ್ದಹಾಗೆ ಅವರು ಇರುವ ಜಾಗದಲ್ಲಿ ಕೋಮುಗಲಭೆ ಸೃಷ್ಟಿ ಮಾಡುತ್ತಾರೆ. ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು.


ಅವರು ಶನಿವಾರ ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ , ಬಿಳಿಗೇರೆ ಗ್ರಾಮದಲ್ಲಿ ಮೊದಲ ಬರಿಗೆ ನಡೆದ, ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು.
ಟಿ ನರಸೀಪುರ ಪೆÇಲೀಸ ಅಧಿಕಾರಿಯೊಬ್ಬ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿಯ ವರ್ತನೆ ಯನ್ನು ಖಂಡಿಸಿ ಬಿಜೆಪಿಗರು ರಣಹದ್ದುಗಳು ಇದ್ದಹಾಗೆ ಕೋಮು ಗಲಭೆಯನ್ನು ಸೃಷ್ಟಿಸಲು ಯಾವಾಗಲೂ ಕಾಯುತ್ತಿರುತ್ತಾರೆ. ದೇಶದಲ್ಲಿ ನಡೆದ ಕೋಮು ಗಲಭೆಯಲ್ಲಿ ಇವರ ಕೈವಾಡ ಇದೆ.ಅದರಿಂದ ರಾಜಕೀಯ ಲಾಭ ಪಡೆಯಲು ಕಾಯುತ್ತಿರುತ್ತಾರೆ. ನರಸೀಪುರ ಪ್ರಕರಣದಲ್ಲಿ ತಮ್ಮ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ ರಾಜಕೀಯದಲ್ಲಿ ಯಾರು ಚಲಾವಣೆಯಲ್ಲಿ ಇಲ್ಲ ಅವರು ಈ ಪ್ರಕರಣದಲ್ಲಿ ಚಲಾವಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದರು.


ಕಂದಾಯ ಇಲಾಖೆಕ್ಕೆ ಸಂಬಂಧಿಸಿದಂತೆ ಅನೇಕ ದೂರುಗಳನ್ನು ಸ್ವೀಕರಿಸಿದೇವೆ.
ಸರ್ಕಾರದ ಆದೇಶದ ಅನುಸಾರ ಅವುಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸುತ್ತೇವೆ. ಉಳಿದಂತೆ ಮನೆಗಳ ಬೇಡಿಕೆ, ವಿದ್ಯುತ್ ಕಂಬ ಗೃಹ ಜ್ಯೋತಿ,ಚರಂಡಿ, ಕುಡಿಯುವ ನೀರು,
ಸಮಸ್ಯೆಗಳ ಅರ್ಜಿಯನ್ನು ನೀಡಿದರೆ. ಶೀಘ್ರದಲ್ಲೇ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಮೈಸೂರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡೆ, ಮೈಸೂರು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕೇಶ್, ಮೈಸೂರು ತಾಲೂಕು ತಹಶೀಲ್ದಾರ್ ಮಹೇಶ್, ನಂಜನಗೂಡು ತಸಿಲ್ದಾರ್ ಸ್ಮಿತಾ ರಾಮು, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ ಬಸವರಾಜು, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಸೇರಿದಂತೆ ಎಲ್ಲಾ ಇಲಾಖೆಯ ಮುಖ್ಯ ಅಧಿಕಾರಿಗಳು ಕಾಂಗ್ರೆಸ್ ಕಾರ್ಯಕರ್ತರು ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.