Home ಜಿಲ್ಲೆ ಬಳ್ಳಾರಿ ಕೈಮಗ್ಗ ಸಹಕಾರ ಸಂಘದ ಆಡಳಿತ ಮಂಡಳಿ ವಿಸರ್ಜನೆ

ಬಳ್ಳಾರಿ ಕೈಮಗ್ಗ ಸಹಕಾರ ಸಂಘದ ಆಡಳಿತ ಮಂಡಳಿ ವಿಸರ್ಜನೆ

Oplus_16908288

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಆ.01:  ಇಲ್ಲಿನ ಬಳ್ಳಾರಿ ಕೈಮಗ್ಗ ಸಹಕಾರ ಸಂಘದ ಆಡಳಿತ ಮಂಡಳಿಯನ್ನು ಸಹಕಾರ ಇಲಾಖೆಯ ಅಧಿಕಾರಿಗಳು ವಿಸರ್ಜಿಸಿದ್ದಾರೆ.  ಸಂಘದ ಅಧ್ಯಕ್ಷ ಎ. ರಾಮಕೃಷ್ಣ, ಕಾರ್ಯದರ್ಶಿ,  ಹಾಗು ಕೆಲ  ನಿರ್ದೇಶಕರುಗಳು ನಿಯಮ ಉಲ್ಲಂಘನೆ ಮಾಡಿ ನಿರ್ಧಾರಗಳನ್ನು ಮಾಡಿ ಸಂಘಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವುದರಿಂದ  ಸಂಘದ ಅಭಿವೃದ್ಧಿಯ ನಿರ್ಲಕ್ಷ್ಯ ಹಾಗೂ ಸಂಘವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿರುವ ಆರೋಪಗಳಡಿ ಈ ಕ್ರಮ ಕೈಗೊಳ್ಳಲಾಗಿದೆ.

ಸಂಘದ ಸದಸ್ಯ ಆರ್ ಮಂಜುನಾಥ  ಅವರು ಸಂಘದ ಕಾರ್ಯದರ್ಶಿ  ಮತ್ವಿತು ಆಡಳಿತ ಮಂಡಳಿ

ವಿರುದ್ಧ  ದೂರು ಸಲ್ಲಿಸಿ ವಿಚಾರಣೆಗೆ ಒತ್ತಾಯಿಸಿದ್ದರು.

ದೂರನ್ನು ಪರಿಶೀಲನೆ  ನಡೆಸಿದ ಸಹಕಾರ ಸಂಘಗಳ

ಸಹಾಯಕ ಮೇಲ್ವಿಚಾರಕ ಗ್ಯಾನಪ್ಪ ಅವರು ಬಳ್ಳಾರಿ ಕೈಮಗ್ಗ ನೇಕಾರರ ಸಹಕಾರ ಉತ್ಪತ್ತಿ ಮತ್ತು ಮಾರಾಟ ಸಂಘದ ಆಡಳಿತ ಮಂಡಳಿ ನಿರ್ದೇಶಕರು ಸಂಘದ ದೈನಂದಿನ ವ್ಯವಹಾರದಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದು, ಸಹಕಾರ ಸಂಘದ ಆಸ್ತಿಯನ್ನು ಸದಸ್ಯರಿಗೆ ಹಂಚಿಕೆ ಮಾಡಿರುವುದು, ಸಂಘಕ್ಕೆ ಚರಾಸ್ತಿಯನ್ನು ಅನುಮತಿ ಪಡೆಯದೇ ಖರೀದಿಸಿದ್ದು, ಹಾಗೂ ಸಂಘದ ಬಾಡಿಗೆಯನ್ನು ಸರಿಯಾದ ರೀತಿಯಲ್ಲಿ ವಸೂಲಾತಿ ಮಾಡದೇ ಸಂಘಕ್ಕೆ ಆರ್ಥಿಕ ನಷ್ಟವನ್ನು ಉಂಟು ಮಾಡುತ್ತಿರುವುದು. ಇದು ಆಡಳಿತ ಮಂಡಳಿಯ ನಿರ್ವಹಣೆಯಲ್ಲಿ ಕರ್ತವ್ಯ ಲೋಪವಾಗಿರುವುದು ಕಂಡು ಬಂದ ಹಿನ್ನಲೆಯಲ್ಲಿ

ಸಂಘದ ಆಡಳಿತ ಮಂಡಳಿಯ ನಿರ್ದೇಶಕರಗಳನ್ನು ಮುಂದಿನ ಐದು ವರ್ಷಗಳ ಅವಧಿಗೆ ಎಲ್ಲಾ ವಿಧವಾದ ಸಹಕಾರ ಸಂಘಗಳಲ್ಲಿ ಅನರ್ಹಗೊಳಿಸಿ ಜುಲೈ 23 ರಂದು ಆದೇಶ ಹೊರಡಿಸಿದ್ದಾರೆ.