Home ಜಿಲ್ಲೆ ಪೋಲಿಸ್ ಠಾಣೆಯಲ್ಲಿ ವ್ಯಕ್ತಿಯ  ಸಾವು ಕುಟುಂಬಕ್ಕೆ ಸರ್ಕಾರದಿಂದ ಪರಿಹಾರಕ್ಕೆ ಆಗ್ರಹ

ಪೋಲಿಸ್ ಠಾಣೆಯಲ್ಲಿ ವ್ಯಕ್ತಿಯ  ಸಾವು ಕುಟುಂಬಕ್ಕೆ ಸರ್ಕಾರದಿಂದ ಪರಿಹಾರಕ್ಕೆ ಆಗ್ರಹ

ಸಂಜೆವಾಣಿ ವಾರ್ತೆ

ಹಗರಿಬೊಮ್ಮನಹಳ್ಳಿ. ಆ.05 ಪೊಲೀಸ್ ಠಾಣೆಯಲ್ಲಿ ಸಾವನಪ್ಪಿರುವ ಅಮಾಯಕ ಬಡ ಕಾರ್ಮಿಕ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ ಎಂದು ಅಂಜಮಾನ್ ಕಮಿಟಿಯ ನೂರ್ ಅಹಮದ್ ಹೇಳಿದರು.

 ಪಟ್ಟಣದ ಮೃತ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವಾನ ಹೇಳುವ ಮೂಲಕ ಧೈರ್ಯ ತುಂಬಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಪೊಲೀಸ್ ವರಿಷ್ಠಾಧಿಕಾರಿಗಳು ಮಾಧ್ಯಮದ ಮುಂದೆ ಬಂದು ಸಿಸಿಟಿವಿ ಪುಟ್ಯೇಜ್ ಮೂಲಕ ಸತ್ಯ ಸತ್ಯತೆ ಬಹಿರಂಗವಾಗಲಿ, ಒಂದು ಪಕ್ಷ ಪೊಲೀಸರು ಹೊಡೆದು ಸಾಯಿಸಿದ್ದೆ ಆದರೆ ಮೇಲಾಧಿಕಾರಿಗಳು ಸರ್ಕಾರದ ವತಿಯಿಂದ ನೊಂದ  ಕುಟುಂಬಕ್ಕೆ ಪರಿಹಾರ ಆದರೂ ಕೊಡಿ, ಸಣ್ಣ ಸಣ್ಣ ಮಕ್ಕಳಿದ್ದಾರೆ, ಆ ನೊಂದ ಹೆಣ್ಣು ಮಗಳು ಹೇಗೆ ಜೀವನ ಮಾಡಲು ಸಾಧ್ಯ. ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಬಿಟ್ಟು ನ್ಯಾಯ ಕೊಡಿಸುವಂತಹ ಕೆಲಸ ಮಾಡಬೇಕು. ಇನ್ನು ಎರಡು ದಿವಸದಲ್ಲಿ ಸಿ ಸಿ ಕ್ಯಾಮೆರಾ ಪುಟ್ಯೇಜ್ ರಿಲೀಸ್ ಮಾಡದೆ ಇದ್ದರೆ ಈ ವಿಷಯವನ್ನು ಗೃಹ ಸಚಿವರ ಬಳಿ ತೆಗೆದುಕೊಂಡು ಹೋಗಲಾಗುವುದು.ಮುಂದಿನಗಳಲ್ಲಿ ಈ ಸಾವು ಸಂಪೂರ್ಣ ಪಾರದರ್ಶಕವಾಗಿ ನ್ಯಾಯ ಸಿಗಬೇಕೆಂದರೆ ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.

 ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಇಸ್ಮಾಯಿಲ್, ಕೆ ಇಸ್ಮಾಯಿಲ್, ವಕೀಲರಾದ ಬಶೀರ್ ಅಹಮದ್ ಇದ್ದರು.