Home ಜಿಲ್ಲೆ ಮಂಗಳೂರು ದ.ಕ ಜಿಲ್ಲೆಯಲ್ಲಿ ಆಟೋ ರಿಕ್ಷಾ ದರ ಪರಿಷ್ಕರಣೆ- ಕನಿಷ್ಟ 40 ರೂ .ದರ ಏರಿಕೆ

ದ.ಕ ಜಿಲ್ಲೆಯಲ್ಲಿ ಆಟೋ ರಿಕ್ಷಾ ದರ ಪರಿಷ್ಕರಣೆ- ಕನಿಷ್ಟ 40 ರೂ .ದರ ಏರಿಕೆ

ಮಂಗಳೂರು-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದ್ದು, ಮೊದಲ ೧.೫ ಕಿ.ಮೀ ಪ್ರಯಾಣಕ್ಕೆ ಕನಿಷ್ಟ ೪೦ ರೂ. ದರ ನಿಗದಿಪಡಿಸಲಾಗಿದೆ. ಈ ದರದಲ್ಲಿ ಗರಿಷ್ಟ ಮೂವರು ಪ್ರಯಾಣಿಕರು ಪ್ರಯಾಣಿಸಬಹುದುದಾಗಿದೆ.
ಪರಿಷ್ಕೃತ ದರದ ಪ್ರಕಾರ , ಮೊದಲ ೧.೫ ಕಿ.ಮೀ ಬಳಿಕ ಪ್ರತಿ ಕಿ.ಮೀಗೆ ೨೦ ರೂ ದರ ಪಾವತಿಸಬೇಕು. ಈ ದರವೂ ಗರಿಷ್ಟ ಮೂವರು ಪ್ರಯಾಣಿಕರಿಗೆ ಅನ್ವಯಿಸುತ್ತದೆ. ಆಟೋದಲ್ಲಿ ಮೊದಲ ೧೦ ನಿಮಿಷ ಕಾಯುವಿಕೆ ಉಚಿತವಾಗಿರುತ್ತದೆ. ಬಳಿಕ ಪ್ರತಿ ೧೫ ನಿಮಿಷ ಅಥವಾ ಅದರ ಭಾಗಕ್ಕೆ ೫ ರೂ. ಶುಲ್ಕ ವಿಧಿಸಬಹುದಾಗಿದೆ.
ರಾತ್ರಿ ೧೦ ಗಂಟೆಯಿಂದ ಬೆಳಗಿನ ಜಾವ ೫ ಗಂಟೆಯವರೆಗೆ ಮಾತ್ರ ಸಾಮಾನ್ಯ ದರದ ೧.೫ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪರಿಷ್ಕೃತ ದರಗಳು ಆಟೋ ಪ್ರಯಾಣಿಕರು ಮತ್ತು ಚಾಕಲರಿಗೆ ಅನ್ವಯವಾಗಲಿದ್ದು, ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡುವಂತಿಲ್ಲ.