Home ಜಿಲ್ಲೆ ಒಂಟಿ ಮಹಿಳೆಯರ ಹಕ್ಕುಗಳಿಗೆ ಆಗ್ರಹ

ಒಂಟಿ ಮಹಿಳೆಯರ ಹಕ್ಕುಗಳಿಗೆ ಆಗ್ರಹ

ಸಂಜೆವಾಣಿ ವಾರ್ತೆ

ಬಳ್ಳಾರಿ, ಆ.1: ಕರ್ನಾಟಕ ಸರಕಾರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ಕೋರಿಕೆಯ ಮೇರೆಗೆ ರಾಜ್ಯದಾದ್ಯಂತ ಒಂಟಿ ಮಹಿಳೆಯರ ಸಮೀಕ್ಷೆಗೆ ಕ್ರಮವಹಿಸಿದುದು ಸಂತೋಷದ ವಿಚಾರವಾಗಿತ್ತು.

ಅದಾಗಲೆ ಸಮೀಕ್ಷೆಯು ಮುನ್ನಡೆದಿದೆ, ಸಮೀಕ್ಷೆಗೆ ಸಂಬಂದಿಸಿ ಪೂರಕ ಮಾಹಿತಿಯನ್ನು ನಮ್ಮ ಸಂಘಟನೆಯಿಂದಲೂ  ನೀಡುವುದನ್ನು ಮುಂದುವರೆಸಿದ್ದೇವೆ. ಆದರೆ ಒಂಟಿ ಮಹಿಳೆಯರನ್ನು ಗುರುತಿಸುವ ಮತ್ತು ಪುನರ್ವಸತಿಗೆ ಕ್ರಮ ವಹಿಸುವ ವಿಚಾರ ಆಮೆಗತಿಯಲ್ಲಿ ತೆವಳುತ್ತಿದೆ ಎಂದು ಸಂಘ ಆರೋಪಿಸಿದೆ.

ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು,

 ಹಕ್ಕೊತ್ತಾಯಗಳನ್ನು ಮಂಡಿಸಿದೆ.

ಒಂಟಿ ಮಹಿಳೆಯರ ಸಮೀಕ್ಷೆಯನ್ನು ಬಿಡುಗಡೆ  ಮಾಡಬೇಕು. ಒಂಟಿ ಮಹಿಳೆಯರು ಮತ್ತು ಅವರ ಕುಟುಂಬಗಳ ಪುನರ್ವಸತಿಗೆ  ಅಗತ್ಯ ಬಜೆಟ್ ಒದಗಿಸಬೇಕು. ಎಲ್ಲ ಒಂಟಿ ಮಹಿಳೆಯರಿಗೆ ಮಾಸಿಕ ಕನಿಷ್ಠ 6,000 ರೂಗಳ ಸಹಾಯಧನ ಅಥವಾ ಪಿಂಚಣಿಯನ್ನು ಒದಗಿಸಬೇಕು. ಮರುಮದುವೆಯನ್ನು ಬಹಿಷ್ಕರಿಸಿದ ಸಾಮಾಜಿಕ ತಾರತಮ್ಯದ ಪರಿಹಾರವಾಗಿ ನೊಂದ ಎಲ್ಲ ಈ ಒಂಟಿ ಮಹಿಳೆಯರಿಗೆ ತಲಾ 10 ಲಕ್ಷ ರೂಗಳ ಇಡುಗಂಟು ಸ್ಥಾಪಿಸಬೇಕು. ವ್ಯವಸಾಯದಲ್ಲಿ ತೊಡಗಲು ಇಚ್ಛಿಸುವ ಮಹಿಳೆಯರಿಗೆ ತಲಾ ಐದು ಎಕರೆ ನೀರಾವರಿ ಜಮೀನನ್ನು, ಭೂ ಸ್ವಾಧೀನ ಮಾಡಿ ಒದಗಿಸಬೇಕು. ಸ್ವಯಂ ಉದ್ಯೋಗದಲ್ಲಿ ತೊಡಗಲು ಇಚ್ಛಿಸುವ ಮಹಿಳೆಯರಿಗೆ ತರಬೇತಿ ಸಮೇತ ಶೇ 75 ಸಹಾಯಧನವಿರುವ ಮತ್ತು ಶೇ 25 ಕ್ಕೆ ಐದುವರ್ಷ ಬಡ್ಡಿ ರಹಿತ 10 ಲಕ್ಷರೂ ಸಾಲ ಒದಗಿಸಬೇಕು. ಈ ಮಹಿಳೆಯರ ಮಕ್ಕಳ ವಿದ್ಯಬ್ಯಾಸಕ್ಕೆ ವಸತಿ ಶಾಲೆಗಳಲ್ಲಿ ಅವಕಾಶ ಮಾಡಿಕೊಡಬೇಕು. ಉನ್ನತ ಶಿಕ್ಷಣ ಪಡೆಯಲು ಕೂಡಾ ಉಚಿತ ಸೌಲಭ್ಯ ಒದಗಿಸಬೇಕು. ವಿದ್ಯಾವಂತ ಮಕ್ಕಳಿಗೆ ಉದ್ಯೋಗ ದೊರೆಯುವವರೆಗೆ ಕನಿಷ್ಠ 10,000 ರೂಗಳ ನಿರುದ್ಯೋಗ ಭತ್ಯೆ ನೀಡಬೇಕು.  ಒಂಟಿ ಮಹಿಳೆಯರ ಮಕ್ಕಳಿಗೆ ಮದುವೆ ಸಹಾಯ ಧನಕ್ಕೆ 10ಲಕ್ಷ ರೂಗಳ ನೀಡಬೇಕು. ಬಾಕಿ ಇರುವ ಪೇನ್ಪ್ ನ್ ಕೂಡಲೆ ಜಾರಿ ಮಾಡಬೇಕು ಎಂದು ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರು ಯು ಬಸವರಾಜ .ಎ ಸ್ಟಾಮಿ.ಈರಮ್ಮ. ಹೆಚ್ ದುರುಗಮ್ಮ.ವೀರೇಶ.ಜಿ.ಭಾರತಿ. ಪಿ.ತ್ರಿವೇಣಿ. ಪಿ.ಬಸಮ್ಮ. ಲಷ್ಮಿ.ಗೋವಿಂದಮ್ಮ. ಪಾತಿಮ್ಮ ಹಂಪಮ್ಮˌ.ಶೇಕಮ್ಮ.ರೋಜಾ. ಅಂಬಮ್ಮ. ಇದ್ದರು