Home ಸುದ್ದಿ ರಾಷ್ಟ್ರೀಯ ಎಫ್‍ಬಿಐ ಮೋಸ್ಟ್ ವಾಂಟೆಡ್ ಪಟ್ಟಿಗೆ ಭಾರತದ ಖ್ಯಾತ ಗ್ಯಾಂಗ್‍ಸ್ಟರ್ ಬೆಂಬಲಿಗ ಕಮಲ್ ಸೇರ್ಪಡೆ

ಎಫ್‍ಬಿಐ ಮೋಸ್ಟ್ ವಾಂಟೆಡ್ ಪಟ್ಟಿಗೆ ಭಾರತದ ಖ್ಯಾತ ಗ್ಯಾಂಗ್‍ಸ್ಟರ್ ಬೆಂಬಲಿಗ ಕಮಲ್ ಸೇರ್ಪಡೆ

ವಾಷಿಂಗ್ಟನ್/ನವದೆಹಲಿ: ಭಾರತದ ಕುಖ್ಯಾತ ಗ್ಯಾಂಗ್‍ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಂಘಟಿತ ಅಪರಾಧ ಗುಂಪಿನ ಜೊತೆ ನಿಕಟ ಸಂಪರ್ಕ ಹೊಂದಿರುವ ಆರೋಪದ ಮೇಲೆ ಭಾರತೀಯ ಪ್ರಜೆ ‘ಕಮಲ್’ ಎಂಬಾತನನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ತನ್ನ ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿಸಿದೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸೇರಿ ಗ್ಯಾಂಗ್‍ಸ್ಟರ್ ನೆಟ್‍ವರ್ಕ್ ನಡೆಸುವುದು ಹಾಗೂ ಅಮೆರಿಕದ ಕ್ಯಾಲಿಫೆÇೀರ್ನಿಯಾದಲ್ಲಿ ಉದ್ಯಮಿಗಳನ್ನು ಬೆದರಿಸಿ ಸುಲಿಗೆ ಮಾಡಲು ಸಂಚು ರೂಪಿಸಿದ ಆರೋಪ ಕಮಲ್ ಮೇಲಿದೆ.

ಅರೆಸ್ಟ್ ವಾರಂಟ್ ಜಾರಿ: 2026ರ ಜುಲೈ 1 ರಂದು ಲಾಸ್ ಏಂಜಲೀಸ್‍ನ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ಈತನ ವಿರುದ್ಧ ಫೆಡರಲ್ ಬಂಧನ ವಾರಂಟ್ ಹೊರಡಿಸಿದೆ.

ಆಪರೇಷನ್ ಹಾರ್ಡ್ ಬಾಲ್ ಅಮೆರಿಕ, ಕೆನಡಾ ಮತ್ತು ಭಾರತದಲ್ಲಿ ಸಕ್ರಿಯವಾಗಿರುವ ಗ್ಯಾಂಗ್‍ಸ್ಟರ್ ಜಾಲಗಳ ವಿರುದ್ಧ ಅಮೆರಿಕದ ತನಿಖಾ ಸಂಸ್ಥೆಗಳು ಕೈಗೆತ್ತಿಕೊಂಡಿರುವ ಬೃಹತ್ ‘ಆಪರೇಷನ್ ಹಾರ್ಡ್ ಬಾಲ್’ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ಹಿಂದೆ ಇದೇ ಕಾರ್ಯಾಚರಣೆಯಡಿಯಲ್ಲಿ ಜಗ್ಗು ಭಗವಾನ್‍ಪುರಿಯಾ ಹಾಗೂ ರವೀಂದರ್ ಧಂಡಾ ಗ್ಯಾಂಗ್‍ಗೆ ಸೇರಿದ ಇತರ ಭಾರತೀಯ ಮೂಲದ ವ್ಯಕ್ತಿಗಳನ್ನೂ ಎಫ್‍ಬಿಐ ತನ್ನ ವಾಂಟೆಡ್ ಪಟ್ಟಿಗೆ ಸೇರಿಸಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾರ ರಾಜಕೀಯ ನಿರ್ಗಮನ
ನವದೆಹಲಿ: ಭಾರತೀಯ ಜನತಾ ಪಾರ್ಟಿಯ ಮಾಜಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಹುದ್ದೆಗೆ ರಾಜೀನಾಮೆ ನೀಡಿ ಸಕ್ರಿಯ ರಾಜಕೀಯದಿಂದ ಹೊರನಡೆದಿರುವುದು ದೇಶದ ರಾಜಕೀಯ ರಂಗದಲ್ಲಿ ಭಾರೀ ಸದ್ದುಮಾಡಿದೆ.

“ವೈಯಕ್ತಿಕ ಹಾಗೂ ಆರ್ಥಿಕ ಒತ್ತಡಗಳ ಹಿನ್ನೆಲೆಯಲ್ಲಿ” ಖಾಸಗಿ ವಲಯದಲ್ಲಿ ಉದ್ಯೋಗ ಮುಂದುವರಿಸಲು ರಾಜಕೀಯದಿಂದ ನಿರ್ಗಮಿಸುತ್ತಿರುವುದಾಗಿ ವರದಿ ಮಾಡಿದೆ. ಪೂನಾವಾಲಾ ಅವರು ತಮ್ಮ ‘ಘಿ’ (ಟ್ವಿಟರ್) ಪೆÇ್ರಫೈಲ್‍ನಿಂದ “ಎಂಬ ವಿವರಣೆಯನ್ನು ತೆಗೆದುಹಾಕಿದ್ದು, “ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಗಳನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆ ನೀಡುವ ಮುನ್ನ ಅವರು ‘ದಿ ಮೇನಿಫೆಸ್ಟೋ’ ಎಂಬ ಹೊಸ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಿದ್ದು, ಸಾಫ್ಟ್‍ವೇರ್ ಮತ್ತು ತೆರಿಗೆ ಪಾವತಿಸುವ ಮಧ್ಯಮ ವರ್ಗದ ಜನರ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತಿದ್ದಾರೆ.