Home ಜಿಲ್ಲೆ ಮೈಸೂರು ಹಡಪದ ಅಪ್ಪಣ್ಣನವರ ತತ್ವ ಸಿದ್ಧಾಂತ ಯುವಕರು ಮೈಗೂಡಿಸಿಕೊಳ್ಳಿ: ಶ್ರೀಕಂಠ

ಹಡಪದ ಅಪ್ಪಣ್ಣನವರ ತತ್ವ ಸಿದ್ಧಾಂತ ಯುವಕರು ಮೈಗೂಡಿಸಿಕೊಳ್ಳಿ: ಶ್ರೀಕಂಠ

ಸಂಜೆವಾಣಿ ವಾರ್ತೆ
ನಂಜನಗೂಡು.ಜು.30 :-
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ಮತ್ತು ತಾಲೂಕು ಅಧ್ಯಕ್ಷ ಶ್ರೀಕಂಠ ಅಧ್ಯಕ್ಷತೆಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಹಡಪದ ಅಪ್ಪಣ್ಣನವರ ಜಯಂತೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಯಿತು


ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ತಾಲೂಕು ಅಧ್ಯಕ್ಷ ಶ್ರೀಕಂಠ ಸವಿತಾ ಕೆ ಶ ಅಲಂಕಾರ ಸಂಘದ ಅಧ್ಯಕ್ಷ ಪುಟ್ಟರಾಜು ಮಂಜುನಾಥ್ ರಾಜಪ್ಪ ಸೇರಿದಂತೆ ಇತರರು ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು


ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಅಧ್ಯಕ್ಷ ಶ್ರೀಕಂಠ ಮಾತನಾಡಿ ಯುವಕರು ಹಡಪದ ಅಪ್ಪಣ್ಣನವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಇವರು ಹೆಚ್ಚು ದಾಸೋಹಕ್ಕೆ ಪ್ರಾಮುಖ್ಯತೆ ನೀಡಿದವರು ಬಸವಾದಿ ಶರಣ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು ಆಗ ಮಾತ್ರ ನಾವು ಬಸವಾದಿ ಶರಣರ ಮತ್ತು ಸಂವಿಧಾನಕ್ಕೆ ಗೌರವ ಸೂಚಿಸಂತಾಗುತ್ತದೆ ಎ ಶಿವಶರಣ ಹಡಪದ ಅಪ್ಪಣ್ಣನವರ ಆದರ್ಶಗಳನ್ನು ಸಮಾನತೆ ಕಾಯಕ ಮತ್ತು ಮಾನವೀಯ ಮೌಲ್ಯ ಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿದೆ ಎಂದರು ಇವರು ಸುಮಾರು 250 ಗೆ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಮೂಢನಂಬಿಕೆಗಳನ್ನು ಹೋಗಲಾಡಿಸುವಲ್ಲಿ ಇವರ ಪ್ರಮುಖ ಪಾತ್ರ ಹೆಚ್ಚಿದೆ ಎಂದರು


ಸವಿತಾ ಕೆ ಶ ಅಲಂಕಾರ ಸಂಘದ ಅಧ್ಯಕ್ಷ ಪುಟ್ಟರಾಜು ಮಾತನಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಅಧ್ಯಕ್ಷ ಶ್ರೀಕಂಠರವರು ಎಲ್ಲಾ ಜನಾಂಗದ ಮಹನೀಯರ ಜಯಂತೋತ್ಸವ ಆಚರಿಸುತ್ತಿದ್ದಾರೆ ಇವರಿಗೆ ನಮ್ಮ ಜನಾಂಗದ ವತಿಯಿಂದ ಅಭಿನಂದನೆ ಗಳನ್ನು ಸಲ್ಲಿಸಿದರು ಹಡಪದ ಅಪ್ಪಣ್ಣನವರು ವಚನ ಚಳುವಳಿಯ ಪ್ರಮುಖ ವಚನಗಾರರಲ್ಲಿ ಒಬ್ಬರಾದ ಬಸವಣ್ಣನವರ ಆಪ್ತ ಅನುನಾಯಿಗಳಾಗಿ ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜ ಸುಧಾರಣೆಗೆ ಸಮಾ ತ್ತ ರ ಕೊಡುಗೆ ನೀಡಿದವರು ಎಂದರು


ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠ ಸವಿತಾ ಕೆ ಶ ಲಂಕಾರ ಅಧ್ಯಕ್ಷ ಪುಟ್ಟರಾಜು ನಗರಸಭೆ ಮಾಜಿ ಉಪಾಧ್ಯಕ್ಷ ಮಂಜುನಾಥ್ ಮುಡಿ ಕಟ್ಟೆ ಮಾಜಿ ಅಧ್ಯಕ್ಷ ರಾಚಪ್ಪ ಕೆಂಪರಾಜು ಆನಂದ ಶ್ರೀಕಂಠ ಪ್ರಸಾದ್ ಮಹೇಶ್ ಶ್ರೀನಿವಾಸ ಶಿವಪ್ಪ ಸಿದ್ದರಾಜು ಕುಮಾರರಾಜರ ಮುತ್ತುರಾಜ್ ಚಂದ್ರು ವಿಶ್ವಕರ್ಮ ಸಂತೋಷ ಮನೋಜ್ ಶಿವಪ್ರಸಾದ್ ರವಿ ಸುರೇಶ್ ರವಿ ಸಿದ್ದಣ್ಣ ಮಹೇಶ್ ಬಸವಣ್ಣ ಪ್ರಕಾಶ್ ರಾಜು ತೇಜು ಕುಮಾರ್ ನಾಗೇಂದ್ರ ಗಿರೀಶ್ ಸೃಜನ್ ಕೃಷ್ಣಪ್ಪ ನಂಜುಂಡಸ್ವಾಮಿ ಮಧು ಮಹೇಶ್ ಚಂದ್ರು ಸೇರಿದಂತೆ ಇತರರು ಇದ್ದರು