ಕಲಬುರಗಿ: ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ನಗರದ ಡಾ.ಎಸ್.ಎಂ.ಪಂಡಿತ್ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ನಾಡೋಜ ನ್ಯಾ.ಡಾ.ಶಿವರಾಜ ವಿ.ಪಾಟೀಲರು ರಚಿಸಿದ”ಮುಂಜಾವಿಗೊಂದು ನುಡಿ ಕಿರಣ ದರ್ಶನ”ಯುವ ವಿದ್ಯಾರ್ಥಿಳ ವ್ಯಕ್ತಿತ್ವ ವಿಕಸನಕ್ಕಾಗಿ 9 ದಿನಗಳ ವಿಶೇಷ ಉಪನ್ಯಾಸದ ಸಮಾರೋಪ ಸಮಾರಂಭ ಮತ್ತು ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ದೇವದಾಸ್ ಅವರು ಉದ್ಘಾಟಿಸಿದರು. ಮುದಗಲ್-ತಿಮ್ಮಾಪುರ ಮಹಾಂತೇಶ್ವರ ಮಠದ ಮಹಾಂತ ಸ್ವಾಮಿಗಳು, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಂ.ಪಾಟೀಲ, ಪ್ರೊ.ಚನ್ನಾರಡ್ಡಿ ಪಾಟೀಲ, ಅಭಿಷೇಕ, ಚನ್ನಾರಡ್ಡಿ ಪಾಟೀಲ, ಪ್ರಶಾಂತ ಕುಲಕರ್ಣಿ, ವಿನೂತಾ ಆರ್.ಬಿ., ಪ್ರಭುಗೌಡ, ಕರುಣೇಶ ಹಿರೇಮಠ, ಗುರುರಾಜ ಇದ್ದರು.