
ಕಲಬುರಗಿ,ಜು.31-ಮನೆ ಬಾಗಿಲು ಕೊಂಡಿ ಮುರಿದು 1.46 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಕಳವು ಮಾಡಿರುವ ಘಟನೆ ನಗರದ ರಾಣೇಸ್ಪೀರ ದರ್ಗಾ ರಸ್ತೆಯ ಶ್ರೀರಾಮ ನಗರದಲ್ಲಿ ನಡೆದಿದೆ.
ಶರಣಬಸಪ್ಪ ಹೂಗಾರ ಎಂಬುವವರ ಮನೆ ಬಾಗಿಲು ಕೊಂಡಿ ಮುರಿದು ಕಳ್ಳರು 70 ಸಾವಿರ ರೂ.ಮೌಲ್ಯದ 15 ಗ್ರಾಂ.ಬಂಗಾರದ ಬ್ರಾಸಲೇಟ್, 70 ಸಾವಿರ ರೂ.ಮೌಲ್ಯದ 15 ಗ್ರಾಂ.ಬಂಗಾರದ ಲಾಕೆಟ್, 6 ಸಾವಿರ ರೂ.ಮೌಲ್ಯದ 100 ಗ್ರಾಂ.ಬೆಳ್ಳಿಯ ಗಣೇಶ ಮೂರ್ತಿ ಸೇರಿ 1.46 ಲಕ್ಷ ರೂ.ಮೌಲ್ಯದ ಬಂಗಾರ ಮತ್ತು ಬೆಳ್ಳಿ ಕಳವು ಮಾಡಿದ್ದಾರೆ.
ಪತ್ನಿ ಮಕ್ಕಳೊಂದಿಗೆ ತವರು ಮನೆಯಾದ ಆಳಂದಗೆ ಹೋಗಿದ್ದು, ಇವರು ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಕಳ್ಳರು ಮನೆ ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
































