
ಕಲಬುರಗಿ,ಜು.31-ನಗರದ ಬಿ.ಬಿ.ರೋಜಾ ಶಾಲೆಯಿಂದ ಕಾಲಾಹುಡಾ ಭೀಮನಗರ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಪಂಕ್ಷನ್ ಹಾಲ್ ರಸ್ತೆಯ ಗಲ್ಲಿ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ಅರುಣಕುಮಾರ, ಸಿಬ್ಬಂದಿಗಳಾದ ಅಂಬಾಜಿ, ಪ್ರೀತಮ್, ನಾಗರಾಜ ಹಾಗೂ ಸುನೀಲಕುಮಾರ ಅವರು ದಾಳಿ ನಡೆಸಿ ಖಮರ್ ಕಾಲೋನಿಯ ಮಹ್ಮದ್ ಅಹ್ಮದ್ ತಂದೆ ಅಬ್ದುಲ್ ನಬಿಸಾಬ್ (28) ಎಂಬಾತನನ್ನು ಬಂಧಿಸಿ 2,500 ರೂ.ಮೌಲ್ಯದ 25 ಗ್ರಾಂ.ಗಾಂಜಾ, 400 ರೂ.ನಗದು ಮತ್ತು 500 ರೂ.ಮೌಲ್ಯದ ಮೊಬೈಲ್ ಜಪ್ತಿ ಮಾಡಿದ್ದಾರೆ.
ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
































