
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.16: ತಾಲೂಕಿನ ಹೇಮಗಿರಿ ಸಕ್ಕರೆ ಕಾರ್ಖಾನೆ ಬಾಕಿ ಉಳಿಸಿಕೊಂಡಿರುವ ರೈತರ ಪ್ರತಿ ಟನ್ ಕಬ್ಬಿನ 50 ರೂ ಪೆÇ್ರೀತ್ಸಾಹ ಧನದ ಹಿಂಬಾಕಿಯನ್ನು ತಕ್ಷಣವೇ ಪಾವತಿಸಬೇಕು. ರೈತರ ಕೃಷಿ ಚಟುವಟಿಕೆಗಳಿಗೆ ಮರಣ ಶಾಸನದಂತಿರುವ ರಾಜ್ಯ ಸರ್ಕಾರದ ವಿದ್ಯುತ್ ವಿತರಣಾ ವ್ಯವಸ್ಥೆಯ ಖಾಸಗೀಕರಣ ನೀತಿಯನ್ನು ಕೈ ಬಿಡುವಂತೆ ಆಗ್ರಹಿಸಿ ತಾಲೂಕು ರೈತಸಂಘದ ನೂರಾರು ಕಾರ್ಯಕರ್ತರು ಪಟ್ಟಣದಲ್ಲಿಂದು ಪ್ರತಿಭಟನಾ ಪ್ರದರ್ಶನ ನಡೆಸಿದರಲ್ಲದೆ ತಾಲೂಕು ಕಛೇರಿಗೆ ಮುತ್ತಿಗೆ ಹಾಕಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಶಂಕ, ಜಾಗಟೆ, ತಿರುಪತಿ ನಾಮ, ಚೆಂಬು ಹಿಡಿದು ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ತಾಲೂಕು ಕಛೇರಿಯವರೆಗೆ ಬಾರುಕೋಲು ಹಿಡಿದು ತಮಟೆ ಬಡಿಯುತ್ತಾ ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರದ ಘೋಷಣೆಗಳನ್ನು ಕೂಗಿದ ರೈತ ಕಾರ್ಯಕರ್ತರು ಹೆಜ್ಜೆ ಹೆಜ್ಜೆಗೂ ಶಂಕ ಊದಿ, ಜಾಗಟೆ ಬಾರಿಸುತ್ತಾ ರೈತ ವಿರೋಧಿ ಸರ್ಕಾರಕ್ಕೆ ಗೋವಿಂದಾ, ಗೋವಿಂದಾ ಎನ್ನುತ್ತಾ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ 2023 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕಬ್ಬಿಗೆ ಹೆಚ್ಚಿನ ಬೆಲೆ ನೀಡುವಂತೆ ಆಗ್ರಹಿಸಿ ರಾಜ್ಯ ರೈತಸಂಘ 109 ದಿನ ಹಗಲು ರಾತ್ರಿ ಬೀದಿ ಹೋರಾಟ ನಡೆಸಿತ್ತು. ರೈತ ಹೋರಾಟದ ಫಲವಾಗಿ ರೈತರ ಪ್ರತಿ ಟನ್ ಕಬ್ಬಿಗೆ ಸರ್ಕಾರದ ವತಿಯಿಂದ 50 ರೂ ಮತ್ತು ಕಾರ್ಖಾನೆಯ ವತಿಯಿಂದ 50 ರೂ ಪೆÇ್ರೀತ್ಸಾಹ ಧನ ನೀಡಲು ನಿರ್ಧರಿಸಲಾಯಿತು. ಸರ್ಕಾರದ ಮಟ್ಟದಲ್ಲಿ ನಿರ್ಧರಿತವಾದ ತೀರ್ಮಾನ ಜಾರಿಗೊಳಿಸುವಷ್ಟರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯ ಸರ್ಕಾರದ ತೀರ್ಮಾನದ ವಿರುದ್ದ ಕೆಲವು ಸಕ್ಕರೆ ಕಾರ್ಖಾನೆಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದವು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ಬರಲಿಲ್ಲ ಆದರೆ ರೈತ ಸಂಘಟನೆಯ ವತಿಯಿಂದಲೇ ಕಾರ್ಖಾನೆಗಳ ವಿರುದ್ದ ನ್ಯಾಯಾಂಗ ಹೋರಾಟ ನಡೆಸಿದ ರೈತಸಂಘದ ಪರವಾದ ಕೆಲವು ವಕೀಲರುಗಳು ತೀರ್ಪು ರೈತರ ಪರವಾಗಿ ಬರುವಂತೆ ನೋಡಿಕೊಂಡರು. ರಾಜ್ಯ ಸರ್ಕಾರ ತಾನು ನೀಡಬೇಕಾದ 50 ರೂ ಪೆÇ್ರೀತ್ಸಾಹ ಧನವನ್ನು ಬಿಡುಗಡೆ ಮಾಡಿದೆ. ರಾಜ್ಯದ ಕೆಲವು ಸಕ್ಕರೆ ಕಾರ್ಖಾನೆಗಳು ತಮ್ಮ ಪಾಲಿನ 50 ರೂ ಪಾವತಿಸಿವೆ. ಆದರೆ ತಾಲೂಕಿನ ಹೇಮಗಿರಿ ಶುಗರ?ಸ್ ಕಂಪನಿ ನ್ಯಾಯಾಲಯದ ಆದೇಶದ ವಿರುದ್ದ ತಡೆಯಾಜ್ಞೆ ತಂದಿದ್ದು ರೈತರ ಖಾತೆಗೆ ಪಾವತಿಸಬೇಕಾದ ಪ್ರತಿ ಟನ್ ಕಬ್ಬಿನ 50 ರೂ ಪಾವತಿಸಿಲ್ಲ.
ರೈತರ ಪಾಲಿನ ಹಣ ನೀಡಲು ಸಕ್ಕರೆ ಕಾರ್ಖಾನೆ ತಡೆಯಾಜ್ಞೆ ತಂದಿದ್ದರೂ ರಾಜ್ಯ ಸರ್ಕಾರ ಇದನ್ನು ತೆರವುಗೊಳಿಸಿ ರೈತರ ನೆರವಿಗೆ ಮುಂದಾಗಿಲ್ಲ. ಹೇಮಗಿರಿ ಸಕ್ಕರೆ ಕಾರ್ಖಾನೆ ತಾನು ತಂದಿರುವ ತಡೆಯಾಜ್ಞೆಯನ್ನು ಹಿಂಪಡೆಯಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ವಹಿಸಬೇಕು. ರೈತರಿಗೆ ನೀಡಬೇಕಾದ 50 ರೂ ಪೆÇ್ರೀತ್ಸಾಹ ಧನವನ್ನು ಪಾವತಿಸಿದ ಅನಂತರವೇ ಕಾರ್ಖಾನೆ ಪ್ರಸಕ್ತ ಸಾಲಿನ ತನ್ನ ಕಬ್ಬು ಅರೆಯುವಿಕೆಯ ಕಾರ್ಯ ಆರಂಭಿಸಬೇಕು. ತಪ್ಪಿದಲ್ಲಿ ಕಾರ್ಖಾನೆಯ ಮುಂದಿನ ಕಬ್ಬು ಅರೆಯುವಿಕೆಯ ಕಾರ್ಯಕ್ಕೆ ರೈತಸಂಘ ತಡೆಯೊಡ್ಡಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಗೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು. ರಾಜ್ಯ ವಿದ್ಯುತ್ ನಿಗಮದಲ್ಲಿ ಸಾವಿರಾರು ಕೋಟಿ ಮೌಲ್ಯದ ವಿತರಣಾ ಜಾಲ, ಉಪಕೇಂದ್ರಗಳು, ಯಂತ್ರೋಪಕರಣ, ಬೃಹತ್ ಸಾರ್ವಜನಿಕ ಸೌಕರ್ಯ ಆಸ್ತಿಯಿದ್ದು ವಿದ್ಯುತ್ ವಿತರಣಾ ಜಾಲವನ್ನು ನಿರ್ವಹಿಸುವ ಶಕ್ತಿ ರಾಜ್ಯದ ವಿದ್ಯುತ್ ನಿಗಮದ ನೌಕರರಿಗಿದೆ. ರಾಜ್ಯದ ರೈತರ ಐ.ಪಿ.ಸೆಟ್ ಮತ್ತು ಬಡವರಿಗೆ ನೀಡುತ್ತಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮುಂತಾದ ಉಚಿತ ವಿದ್ಯುತ್ ಸೌಲಭ್ಯಗಳನ್ನು ರದ್ದು ಮಾಡುವ ಹುನ್ನಾರದ ಅಂಗವಾಗಿ ರಾಜ್ಯ ಸರ್ಕಾರ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿದ್ದು ರಾಜ್ಯ ರೈತಸಂಘ ಇದನ್ನು ಪ್ರಭಲವಾಗಿ ವಿರೋಧಿಸುತ್ತದೆ. ರಾಜ್ಯದಲ್ಲಿ ಕೇವಲ ಸರ್ಕಾರಗಳು ಬದಲಾದರೆ ಸಾಲದು, ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು. ರೈತರ ಸಮಸ್ಯೆಗಳಿಗೆ ಯಾವುದೇ ರಾಜಕೀಯ ಪಕ್ಷಗಳು ಧ್ವನಿಯೆತ್ತುತ್ತಿಲ್ಲ. ರೈತರು ಸಂಘಟಿತರಾಗದಿದ್ದರೆ ದೇಶದಲ್ಲಿ ಕೃಷಿಕರು ತಮ್ಮ ಸ್ವಾಭಿಮಾನದ ಬದುಕು ಕಳೆದುಕೊಳ್ಳಲಿದ್ದಾರೆಂದು ಎಚ್ಚರಿಸಿದರು.
ರಾಜ್ಯ ರೈತಸಂಘ ಮುಖಂಡರಾದ ಕೆ.ಆರ್.ಜಯರಾಂ, ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ತಾಲೂಕು ರೈತ ಮುಖಂಡರಾದ ಬೂಕನಕೆರೆ ನಾಗರಾಜು, ಮುದ್ದುಕುಮಾರ್, ಕರೋಟಿ ತಮ್ಮಯ್ಯ, ಎಲ್.ಬಿ.ಜಗದೀಶ್, ನಗರೂರು ಕುಮಾರ್, ಹೊನ್ನೇಗೌಡ, ಕಾಗೇಪುರ ಮಹೇಶ್, ಚೌಡೇನಹಳ್ಳಿ ಕೃಷ್ಣೇಗೌಡ, ನಾರಾಯಣಸ್ವಾಮಿ, ಲಕ್ಷ್ಮೀಪುರ ನಾಗರಾಜು, ಮಡುವಿನಕೋಡಿ ಪ್ರಕಾಶ್, ಕೃಷ್ಣಾಪುರ ರಾಜಣ್ಣ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿದ್ದರು



























