
ಸುಳ್ಯ:ಇಂಡಿಯನ್ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಇವರು ನಡೆಸಿದ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ನ ೧೦೦೦ ಮೀ ರಿಲೇ ರಾಷ್ಟ್ರ ಮಟ್ಟದ ಓಟದ ಸ್ಪರ್ಧೆಯಲ್ಲಿ ಭಾನವಿ. ಎಸ್ ಅವರು ಚಿನ್ನದ ಪದಕ ಪಡೆದುಕೊಂಡಿದ್ದಾಳೆ.
ಪಾಂಡಿಚೇರಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾನವಿ ಸೇರಿದಂತೆ ಕರ್ನಾಟಕದ ನಾಲ್ಕು ಜನರನ್ನು ಒಳಗೊಂಡ ತಂಡ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಹಿಂದೆ ನಡೆದ ಕ್ರೀಡಾಕೂಟದಲ್ಲಿ ೪೦೦ ಮೀ ಓಟವನ್ನು ೫೬.೧೬ ಸೆಕೆಂಡ್ಗಳಲ್ಲಿ ಕ್ರಮಿಸುವ ಮೂಲಕ ರಾಜ್ಯ ಮಟ್ಟದ ದಾಖಲೆ ಸ್ಥಾಪಿಸಿದ್ದರು. ಈ ಹಿಂದೆ ೨೦೦೧ರಲ್ಲಿ ಮಂಡ್ಯದ ಬಿಂದುರಾಣಿ ಸ್ಥಾಪಿಸಿದ್ದ ೫೬.೨೦ ಸೆಕೆಂಡ್ ಸಮಯದ ದಾಖಲೆಯನ್ನು ೨೫ ವರ್ಷಗಳ ನಂತರ ಮುರಿದು ಭಾನವಿ ಇತಿಹಾಸ ಸೃಷ್ಠಿಸಿದ್ದಳು.
ಈಕೆ ಪ್ರಸ್ತುತ ಆಳ್ವಾಸ್ ಪದವಿಪೂರ್ವ ವಿದ್ಯಾಲಯ ಮೂಡಬಿದಿರೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಭಾನವಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ಹಳೆ ವಿದ್ಯಾರ್ಥಿನಿ.ಪ್ರೌಢಶಾಲಾ ಹಂತದಲ್ಲಿ ಸತತ ೩ ವರ್ಷ ತಾಲೂಕು ಚಾಂಪಿಯನ್ ಆಗಿದ್ದ ಭಾನವಿ ೨ ವರ್ಷ ರಾಜ್ಯ ಮಟ್ಟದಲ್ಲಿ ಚೊಕ್ಕಾಡಿ ಪ್ರೌಢಶಾಲೆಯನ್ನು ಪ್ರತಿನಿಧಿಸಿದ್ದಳು.
ಈಕೆ ಅಮರಮೂಡ್ನೂರು ಗ್ರಾಮದ ಕುಕ್ಕುಜಡ್ಕ ಸುರೇಶ್ ಚಾಮಡ್ಕ ಮತ್ತು ಅನಿತಾ ದಂಪತಿಗಳ ಪುತ್ರಿ.


































